ಕೋಲಾರನ್ಯೂಸ್

ಕಾಮಸಮುದ್ರದ ಅರಣ್ಯದಲ್ಲಿ ಆನೆಗಳ ಹಿಂಡು: ಗ್ರಾಮಸ್ಥರಿಗೆ ಪೊಲೀಸರಿಂದ ಎಚ್ಚರಿಕೆ

ಕಾಮಸಮುದ್ರದ ಅರಣ್ಯದಲ್ಲಿ ಆನೆಗಳ ಹಿಂಡು: ಗ್ರಾಮಸ್ಥರಿಗೆ ಪೊಲೀಸರಿಂದ ಎಚ್ಚರಿಕೆ

(KOLARA): ಕಾಮಸಮುದ್ರದ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಸುಮಾರು 60 ರಿಂದ 70 ಆನೆಗಳು ಬಿಡು ಬಿಟ್ಟಿದ್ದು ತಾಲೂಕಿನ ಕಾಮಸಮುದ್ರದ ಜನರಿಗೆ ಪೊಲೀಸರಿಂದ ಎಚ್ಚರಿಕೆ ನೀಡಿದ್ದಾರೆ.

ಆನೆಗಳು ಗಡಿದಾಟಿ ಅರಣ್ಯ ಪ್ರದೇಶದಿಂದ ಗ್ರಾಮಗಳಿಗೆ ಬರುವ ಸಾಧ್ಯತೆ ಇದ್ದು. ಜನರು ರಾತ್ರಿ ವೇಳೆ ತೋಟಗಳ ಬಳಿ ಓಡಾಡಬಾರದು. ಆನೆಗಳು ಕಾಣಿಸಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕು ಎಂದು ಕಾಮಸಮುದ್ರದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಮನವಿ ಮಾಡಿದ್ದಾರೆ.

ಸಬ್ ಇನ್ಸ್ಪೆಕ್ಟರ್ ಸಿಬ್ಬಂದಿ ಹಾಕುವ ಅರಣ್ಯ ಇಲಾಖೆಯ ಡಿಆರ್‌ಎಫ್ ವೇಣು ಸಿಬ್ಬಂದಿ ಬೀಟ್ನಲ್ಲಿ ನಿಗಾ ಇಟ್ಟಿದ್ದಾರೆ.

ಈ ಸಂಬಂಧ ಕಾಡಂಚಿನ ಸುಮಾರು 30 ಗ್ರಾಮಗಳಲ್ಲಿ ಮೈಕ್ ಮೂಲಕ ಘೋಷಣೆ ಕೂಗಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code