ದಾಖಲೆಗಳು ಇಲ್ಲದೆ ಹಸುಗಳನ್ನು ಸಾಗಿಸುತ್ತಿದ್ದವರ ಮೇಲೆ ಪ್ರಕರಣ ದಾಖಲು.
(SAGARA): ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ವಿಠ್ಠಲ್ ಪೈ ಅವರಿಗೆ ಸೇರಿದ ನಾಲ್ಕು ಹಸುಗಳನ್ನು ಮೂರಳ್ಳಿಯ ಶಿವರಾಜ್ ಮತ್ತು ನಾಗರಾಜ್ ಇವರು ಲಗೇಜ್ ಗಾಡಿಯಲ್ಲಿ ಯಾವುದೇ ದಾಖಲೆಗಳು ಇಲ್ಲದೆ ತೆಗೆದುಕೊಂಡು ಬರುತ್ತಿದ್ದಾಗ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಮುಂಡಿಗೇಸರ ವೃತ್ತದಲ್ಲಿ ತಡೆದು ನಿಲ್ಲಿಸಿದ ಘಟನೆ ಗುರುವಾರ ಸಂಭವಿಸಿದೆ.
ಶಿವರಾಜ್ ಮತ್ತು ನಾಗರಾಜ್ ಹಸುಗಳನ್ನು ಖರೀದಿಸಿ ಲಗೇಜ್ ಗಾಡಿಯಲ್ಲಿ ಸಾಗಿಸುತ್ತಿದ್ದರು. ಆದರೆ ಯಾವುದೇ ದಾಖಲೆಗಳು ಪಡೆದಿರಲಿಲ್ಲ. ಹಿಂದೂ ಜಾಗರಣಾ ವೇದಿಕೆ ಮತ್ತು ಗ್ರಾಮಸ್ಥರು ಗಾಡಿ ಸಹಿತ ಶಿವರಾಜ್, ನಾಗರಾಜ್ ಅವರನ್ನು ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.