ಫೇಸ್ಬುಕ್ ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆ
(CHIKKAMAGALURU): ತನ್ನ ಬಿಟ್ಟು ಗಂಡನ ಜೊತೆ ತೆರಳಿದಕ್ಕೆ ಸಿಟ್ಟು ಮಾಡಿಕೊಂಡು ಪ್ರಿಯತಮೆಯ ಮಕ್ಕಳ ಎದುರಲ್ಲೇ ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆ ಮಾಡಿರುವ ಘಟನೆ
ಚಿಕ್ಕಮಗಳೂರು ಜಿಲ್ಲೆಯ NR ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ. ಫೇಸ್ಬುಕ್ ನಲ್ಲಿ ಪರಿಚಯವಾಗಿ ಆನಂತರ ಪ್ರೀತಿಗೆ ತಿರುಗಿ ಇಂದು ಫೇಸ್ಬುಕ್ ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆಯಾಗಿದೆ.
ಮಕ್ಕಳ ಎದುರೇ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಮನೆಯೊಳಗೆ ಹತ್ಯೆ ಮಾಡಿ ಕೃಷಿ ಹೊಂಡಕ್ಕೆ ಎಸೆದ್ದು ಪ್ರಿಯಕರ ಪರಾರಿಯಾಗಿದ್ದಾನೆ. ತೃಪ್ತಿ (29) ಬರ್ಬರವಾಗಿ ಹತ್ಯೆಯಾದ ಗೃಹಿಣಿ. ಹತ್ಯೆಯಾದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದ ತೃಪ್ತಿಯು ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣವು ದಾಖಲಾಗಿತ್ತು ಪೊಲೀಸರು ತೃಪ್ತಿ ಮತ್ತು ಚೆನ್ನಗಿರಿ ಮೂಲದ ಚಿರಂಜೀವಿ ಜೊತೆ ಬಿಜಾಪುರದಲ್ಲಿ ತಲೆಮರಿಸಿಕೊಂಡಿದ್ದರು ಅವರನ್ನು ಪೊಲೀಸರು ಕರೆತಂದು ಮನವೊಲಿಸಿ, ಪೋಷಕರ ಸಂಧಾನ ನಡುವೆ ಗಂಡ ರಾಜವಿನ ಜೊತೆ ಮತ್ತೆ ತೆರಳಿದ ತೃಪ್ತಿಯು ಪ್ರಿಯಕರನ ಜೊತೆ ಮಾತು ಬಿಟ್ಟ ಕಾರಣಕ್ಕೆ ಪ್ರಿಯಕರ ಕಿಚ್ಚಬ್ಬಿ ಗ್ರಾಮಕ್ಕೆ ಬಂದು ತೃಪ್ತಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದು. ಹತ್ಯೆ ಮಾಡಿ ಎಸ್ಕೆಪ್ ಆಗಿರೋ ಹಂತಕನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.