ನನ್ನ ಕ್ಷೇತ್ರದ ಆಸ್ಪತ್ರೆಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುತ್ತೇನೆ ಗೋಪಾಲಕೃಷ್ಣ ಬೇಳೂರು..
(SHIVAMOGA): ಶಿವಮೊಗ್ಗ ಜಿಲ್ಲೆಯ ಆನಂದಪುರ :ನನ್ನ ಚಿಂತನೆ ಯಾವಾಗಲೂ ಆಸ್ಪತ್ರೆಯ ಅಭಿವೃದ್ಧಿ , ಬಡವರ ಕಲ್ಯಾಣ, ಹಾಗೆ ನನ್ನ ಕ್ಷೇತ್ರದ ಜನರ ಹಿತಾಸಕ್ತಿ ಕಾಪಾಡುವುದು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇವರು ಆನಂದಪುರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿಕೆ ಪರಿಶೀಲಿಸಿ ಹಾಗೂ ವೈದ್ಯರೊಂದಿಗೆ ಸಮಾಲೋಚಿಸಿ ಮಾತನಾಡಿದರು.
ಉನ್ನತ ಮಟ್ಟದಲ್ಲಿ ಆನಂದಪುರದ ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಲು 60 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಉತ್ತಮವಾದ ಚಿಕಿತ್ಸೆಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ವೈದ್ಯರು ಸಹ ಬರುವ ರೋಗಿಗಳ ಕಷ್ಟ ಸುಖಗಳನ್ನು ಆಲಿಸಿ ಅವರಿಗೆ ಉತ್ತಮ ರೀತಿಯ ಚಿಕಿತ್ಸೆಯನ್ನು ನೀಡಬೇಕು. ಮತ್ತು ಆಸ್ಪತ್ರೆಯ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಹಾಗೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಡ್ರೈವರ್ ಗಳ ಕೊರತೆಯಿದ್ದನ್ನು ಕಂಡು ಸ್ಥಳದಲ್ಲೇ ಡಿ.ಹೆಚ್.ಓ ನ ಸಂಪರ್ಕಿಸಿ ತಕ್ಷಣವೇ ಡ್ರೈವರನ್ನು ನೇಮಿಸಬೇಕೆಂದು ತಿಳಿಸಿದರು. ಹಾಗೆ ಆಸ್ಪತ್ರೆಯ ಮುಂಭಾಗದಲ್ಲಿ ಅನಾವಶ್ಯಕವಾಗಿ ವಾಹನಗಳು ನಿಲುಗಡೆ ಮಾಡುತ್ತಿದ್ದಾರೆ ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದ್ದಂತನ್ನು ಕಂಡು ಅನಾವಶ್ಯಕವಾಗಿ ವಾಹನವನ್ನು ನಿಲುಗಡೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಡಾಕ್ಟರ್ ಕಾಂತೇಶ್ ಆಡಳಿತ ವೈದ್ಯಾಧಿಕಾರಿಗಳು, ಡಾಕ್ಟರ್ ಸುರೇಶ್, ಡಾಕ್ಟರ್ ಸೌಮ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಕುಮಾರ್, ಖಲೀಮುಲ್ಲಾ, ಗಂಗಮ್ಮ ಪ್ರಮುಖರಾದ ಅನಿತಾ ಕುಮಾರಿ, ರವಿಕುಮಾರ್ ಡಿಎನ್, ಸೋಮಶೇಖರ್ ಲಾವಿಗೆರೆ, ಚೇತನ್ ರಾಜ್ ಕಣ್ಣೂರು, ಶರತ್ ನಾಗಪ್ಪ,ಮಂಜುನಾಥ್ ದಾಸಕೊಪ್ಪ, ಆನಂದ ಹರಟೆ,ಸಿರಿಜಾನ್, ಅರುಣ್ ಕುಮಾರ್ ,ಉಮೇಶ್ , ಅಬ್ದುಲ್ ರಜಾಕ್,ರಾಮಚಂದ್ರ, ರಹಮತವುಲ್ಲಾ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಅಮಿತ್. ಆರ್ ಆನಂದಪುರ