ಕೋಲಾರನ್ಯೂಸ್

ಕೆಲವು ಕಡೆ ತಾಂತ್ರಿಕ ಸಮಸ್ಯೆಯಿಂದ ಇವಿಎಂ ಕೈಕೊಟ್ಟಿತಾದರೂ ಕ್ಷಣಾರ್ಥದಲ್ಲಿ ದುರಸ್ಥಿತಿ.

ಕೆಲವು ಕಡೆ ತಾಂತ್ರಿಕ ಸಮಸ್ಯೆಯಿಂದ ಇವಿಎಂ ಕೈಕೊಟ್ಟಿತಾದರೂ ಕ್ಷಣಾರ್ಥದಲ್ಲಿ ದುರಸ್ಥಿತಿ.

(SHIVAMOGA): ಬಂಗಾರಪೇಟೆ :ತಾಲ್ಲೂಕಿನಲ್ಲಿ ಈ ಬಾರಿ ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭೆ ಚುನಾವಣೆಯಲ್ಲಿ ಕೆಲವು ಕಡೆ ತಾಂತ್ರಿಕ ಸಮಸ್ಯೆಯಿಂದ ಇವಿಎಂ ಕೈಕೊಟ್ಟಿತಾದರೂ ಕ್ಷಣಾರ್ಥದಲ್ಲಿ ದುರಸ್ಥಿತಿ ಪಡಿಸಿದ್ದರಿಂದ ಮತದಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಇದು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಶೇ:76.96ರಷ್ಟು ಮತದಾನ ನಡೆದಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಬೆಳಗ್ಗೆ ಎಲ್ಲಾ ಮತಕೇಂದ್ರಗಳಲ್ಲಿ ಬಿರುಸಿನಿಂದ ಮತದಾನ ನಡೆಯಿತು.ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಾಗಿ ಬಹುತೇಕ ಕಡೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದು ಕಂಡು ಬಂತು.ಬಿಸಿಲಿನ ಬೇಗೆ ಏರುತ್ತಿದ್ದಂತೆ ಮತ ಕೇಂದ್ರಗಳತ್ತ ಜನರು ಬರುವಿಕೆ ವಿರಳವಾಯಿತು.ಮತ್ತೆ ಸಂಜೆ 4 ಗಂಟೆಯಿಂದ ಎಲ್ಲಾ ಕಡೆ ವೇಗಪಡೆದುಕೊಂಡಿತು,ಮತದಾನದ ಅವಧಿ 6 ಗಂಟೆಗೆ ಮುಗಿದರೂ ಹೆಚ್ಚಿನ ಜನರು ಸರತಿ ಸಾಲಿನಲ್ಲಿ ನಿಂತಿದ್ದರಿಂದ ನಾಲ್ಕೈದು ಕಡೆ  6.30 ವರೆಗೂ ಮತದಾನ ನಡೆಯಿತು.


ಪಟ್ಟಣಕ್ಕಿಂತಲೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರು ಹೆಚ್ಚು ಲವಲವಿಕೆಯಿಂದ ಬಂದು ಮತಚಲಾವಣೆ ಮಾಡಿದರು.ಪುರುಷ ಮತದಾರರು 82114ಹಾಗೂ  79778 ಮಹಿಳೆಯರು ಮತದಾನ ಮಾಡಿದ್ದಾರೆ ಒಟ್ಟು 161908 ಮತದಾರರು ಹಕ್ಕನ್ನು ಚಲಾಯಿಸಿದ್ದಾರೆ.
ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿಯೂ ಮತದಾದನ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ಈ ಬಾರಿ ಸ್ವಲ್ಪ ಮತದಾನ ಏರಿಕೆಯಾಗಿದೆ.ಮಹಿಳಾ ಮತದಾರರನ್ನು ಸೆಳೆಯಲು ಪಟ್ಟಣ ಸೇರಿದಂತೆ 5 ಕಡೆ ಸಖಿ ಮತಕೇಂದ್ರಗಳಲ್ಲಿ ಹೆಚ್ಚು ಆಕರ್ಷಣ ಯವಾಗಿತ್ತು.ಆದರೂ ಈ ಚುನಾವಣೆ ವಿಧಾನಸಭೆ ಇಲ್ಲವೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಂತೆ ಹೆಚ್ಚು ಮಹತ್ವವನ್ನು ಜನರಲ್ಲಿ ಕಂಡು ಬಂದಿಲ್ಲ.ತಾಲೂಕಿನ ದೋಣ ಮಡಗು ಗ್ರಾಮ ಪಂಚಾಯಿತಿಯ ಕಾಡಂಚಿನ ಕೆದರಿನತ್ತ ಗ್ರಾಮದಲ್ಲಿ ಹಲವು ಸಮಸ್ಯೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದರು.ತಕ್ಷಣ ತಾಲ್ಲೂಕು ಆಡಳಿತ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಗ್ರಾಮಸ್ಥರು ಮುಕ್ತವಾಗಿ ಬಂದು ಮತ ಚಲಾವಣೆ ಮಾಡಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಲ್ಲಾ ಮತಕೇಂದ್ರಗಳಿಗೆ ತೆರಳಿ ಪರಿಶೀಲನೆ ಮಾಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲ ಈ ಬಾರಿ ಕೋಲಾರದಲ್ಲಿ ಮತ್ತೆ ಕಾಂಗ್ರೆಸ್ ವಶವಾಗುವುದರಲ್ಲಿ ಅನುಮಾನವಿಲ್ಲ,ಕಳೆದ ಬಾರಿ ಮಾತ್ರ ಬಿಜೆಪಿ ಅರಳಿತ್ತು,ಆದರೆ ಈ ಬಾರಿ ಕಾಂಗ್ರೆಸ್ ಕೋಟೆಯನ್ನು ಉಳಿಸಿಕೊಳ್ಳಲಿದೆ ಎಂದರಲ್ಲದೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಕೆ.ವಿ.ಗೌತಮ್‌ಗೆ 20 ಸಾವಿರ ಮತಗಳು ಲೀಡ್ ಬರಲಿದೆ ಎಂದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code