ಚಿಕ್ಕಮಗಳೂರುನ್ಯೂಸ್

ಶಾಸಕರಿಂದ 98ಲಕ್ಷ ರೂ ವೆಚ್ಚದ ನೂತನ ಕಾಲೇಜು ಕೊಠಡಿಗಳ ಉದ್ಘಾಟನಾ.

ಶಾಸಕರಿಂದ 98ಲಕ್ಷ ರೂ ವೆಚ್ಚದ ನೂತನ ಕಾಲೇಜು ಕೊಠಡಿಗಳ ಉದ್ಘಾಟನಾ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭವು ಶಾಸಕರಿಂದ ಉದ್ಘಾಟಿಸಲಾಯಿತು.

ಉದ್ಘಾಟನೆ ಮಾಡಿದ ಇಂಧನ ಸಚಿವರಾದ ಕೆ.ಜೆ ಜಾರ್ಜ್ ರವರು ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದಿಸುವುದು ಮತ್ತು ಕಾಲೇಜು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಇರುವುದರಿಂದ ಎಲ್ಲರನ್ನೂ ಸರ್ಕಾರ ಕಾಲೇಜುಗಳಲ್ಲಿ ಓದಿಸಬೇಕು ಎಂದು ತಿಳಿಸಿದರು ಹಾಗೂ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಬೇಡಿಕೆಗಳನ್ನು ಕಾಲೇಜು ಸುತ್ತ ಕಾಂಪೌಂಡ್ ಹಾಗೂ ಆಟದ ಮೈದಾನವನ್ನು ನಿರ್ಮಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು, ಬಾಳೆಹೊನ್ನೂರು ಕೆ.ಜೆ ಜಾರ್ಜ್ ಅವರಿಗೆ ತುಂಬಾ ಪರಿಚಯ ಇರುವ ಊರಾಗಿದೆ ಆದ್ದರಿಂದ ವೈಯಕ್ತಿಕವಾಗಿ ಈ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್ ನಿರ್ಮಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ನಂತರ ಮಾತನಾಡಿದ ಶೃಂಗೇರಿ ಕ್ಷೇತ್ರ ಶಾಸಕರಾದ ಟಿ.ಡಿ ರಾಜೇಗೌಡರು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸುತ್ತಿದ್ದೇವೆ. ಜಿಲ್ಲೆಯಾದ್ಯಂತ ಅರಣ್ಯ ಅಧಿಕಾರಿಯ ಸಮಸ್ಯೆಗಳು ತಲ ತಲಾಂತರ ವಾಗಿದ್ದು ಅರಣ್ಯ ಮತ್ತು ಕಂದಾಯ ಇಲಾಖೆ ಸಮಸ್ಯೆಗಳನ್ನು ಪರಿಹರಿಸಿ ಭೂಸ್ವಾಧೀನವಾಗಿರುವ ರೈತರಿಗೆ ಮರುಕಳಿಸುವಂತೆ ಮಾಡುವುದು. ಹಾಗೂ 24 ಗಂಟೆಯೂ ವಿದ್ಯುತ್ ಪೂರೈಕೆ ಈ ಜಿಲ್ಲೆಯಲ್ಲೂ ಆಗುವಂತೆ ಮಾಡುವುದು ಶಾಸಕರ ಕನಸಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಆನಂತರ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ರಾಜ್ಯದಲ್ಲಿ 76,000 ಶಾಲೆಗಳು ಒಂದು ಕೋಟಿ 20 ಲಕ್ಷಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚು ಒತ್ತುಗಳನ್ನು ನೀಡುವುದು ಹಾಗೂ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವ ಹಾಗೆ ಗೊತ್ತು ನೀಡುವುದು. ಒಂದೇ ಕಡೆ ಸ್ಥಳವಿದ್ದರೆ ಎಲ್ಲಾ ಶಾಲೆಯು ಒಂದೇ ಶಾಲೆಯಲ್ಲಿ ದೊರಕುವಂತೆ ಮಾಡುವುದು ರಾಜ್ಯದಲ್ಲಿ 6000 ಗ್ರಾಮ ಪಂಚಾಯಿತಿಗಳು ಇದ್ದು 3000 ಪಬ್ಲಿಕ್ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ. ಇಂಟರ್ನ್ಯಾಷನಲ್ ಮಾದರಿಯ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಮೊದಲಿಗೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೊತ್ತು ನೀಡುವುದು. ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯೋಪಾಧ್ಯಾಯರು, ಶೃಂಗೇರಿ ಕ್ಷೇತ್ರದ ಶಾಸಕರಾದ ರಾಜೇಗೌಡ, ಇಂಧನ ಸಚಿವರಾದ ಕೆ.ಜೆ ಜಾರ್ಜ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಾಗೂ ಕಾಲೇಜು ಆಡಳಿತ ಮಂಡಳಿ ಜಯಪ್ರಕಾಶ್, ಹಿರಿಯಣ್ಣ, ಹಾಗೂ ಬಿ.ಕಣಬೂರು ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Scan the code