72 ವರ್ಷಗಳ ನಂತರ ಹೊಸ ಧ್ವಜ ಅನಾವರಣಗೊಳಿಸಿದ ಭಾರತೀಯ ವಾಯು ಸೇನೆ.
(NEW DELHI): ಭಾರತೀಯ ವಾಯುಪಡೆ ದಿನ. ಬಾ ಇದೇ ದಿನ ಭಾರತೀಯ ವಾಯುಪಡೆಯು (IAF) ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಐಎಎಫ್ಗೆ ಬರೋಬ್ಬರಿ 72 ವರ್ಷಗಳ ನಂತರ ಮೊದಲ ಬಾರಿಗೆ ಹೊಸ ಧ್ವಜ ಅನಾವರಣಗೊಂಡಿದೆ.
ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಈ ನೂತನ ಧ್ವಜವನ್ನು ಇಂದು ಅನಾವರಣಗೊಳಿಸಿದರು. ಇಂದು ವಾಯುಪಡೆ ದಿನಾಚರಣೆಯ ಅಂಗವಾಗಿ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಧ್ವಜವನ್ನು ಹೊರತರಲಾಯಿತು.
ಈ ಧ್ವಜದಲ್ಲಿ ಮೇಲಿನ ಎಡಭಾಗದಲ್ಲಿ ತ್ರಿವರ್ಣ ಧ್ವಜ ಹಾಗೂ ಬಲಭಾಗದಲ್ಲಿ ಐಎಎಫ್ನ ಲಾಂಛನ ಇದೆ. ಧ್ವಜವನ್ನು ಡ್ರೋನ್ ಮೂಲ, ಸೇನೆ ಹೆಲಿಕಾಪ್ಟರ್ ಮೂಲಕ ಧ್ವಜವನ್ನು ಪ್ರದರ್ಶನ ಮಾಡಲಾಯಿತು.