ಭಾರತ ದೇಶಕ್ಕೆ ಗರಿಷ್ಠ ಜಿಎಸ್‌ಟಿ ಆದಾಯ ನೀಡುವ ಟಾಪ್ 10 ರಾಜ್ಯಗಳ ಲಿಸ್ಟ್
28 ರಾಜ್ಯಗಳನ್ನೊಳಗೊಂಡ ನಮ್ಮ ಭಾರತ ದೇಶಕ್ಕೆ ಗರಿಷ್ಠ ಜಿಎಸ್‌ಟಿ ಆದಾಯ ನೀಡುವ ಟಾಪ್ 10 ರಾಜ್ಯಗಳ ಲಿಸ್ಟ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಕೇಂದ್ರ ಹಣಕಾಸು ಇಲಾಖೆ ನೀಡಿದ ಮಾಹಿತಿಯ ಅನ್ವಯ 2023ರ ಆಗಸ್ಟ್‌ನಲ್ಲಿ ದೇಶದ ಜಿಎಸ್‌ಟಿ ಆದಾಯ 1.59 ಲಕ್ಷ ಕೋಟಿ ರೂಪಾಯಿ. 2023ರ ಆಗಸ್ಟ್ ವೇಳೆಗೆ ದೇಶದಲ್ಲಿ ಗರಿಷ್ಠ ಜಿಎಸ್‌ಟಿ ಆದಾಯ ತಂದುಕೊಡುವ ಟಾಪ್ 10 ರಾಜ್ಯಗಳ ಲಿಸ್ಟ್ ಇಲ್ಲಿದೆ.
10: ತೆಲಂಗಾಣ: ದೇಶದ 11ನೇ ಅತಿದೊಡ್ಡ ರಾಜ್ಯ ಎನಿಸಿರುವ ತೆಲಂಗಾಣ, ವಿಶ್ವದ ಸುಪ್ರಸಿದ್ಧ ಸಾಫ್ಟ್‌ವೇರ್ ಕಂಪನಿಗಳಿಗೂ ನೆಲೆಯಾಗದ ತೆಲಂಗಾಣ ರಾಜ್ಯವು ಆಗಸ್ಟ್ 2023ರಲ್ಲಿ 4303 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ನೀಡಿದೆ.
09: ಒಡಿಶಾ: ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿರುವ ಒಡಿಶಾ, ದೇಶದ 8ನೇ ಅತಿದೊಡ್ಡ ರಾಜ್ಯವಾಗಿದ್ದು. ನೈಸರ್ಗಿಕ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿರುವ ಒಡಿಶಾ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ 4408 ಕೋಟಿ ರೂಪಾಯಿಯನ್ನು ಜಿಎಸ್‌ಟಿ ಆದಾಯವಾಗಿ ನೀಡಿದೆ.
08: ದೆಹಲಿ: ರಾಷ್ಟ್ರ ರಾಜಧಾನಿಯಾದ ದೇಶದ ಹೃದಯ ಭಗವಾಗಿರುವ ನವದೆಹಲಿ ರಾಜ್ಯವು 4620 ಕೋಟಿ ರೂಪಾಯಿಯನ್ನು ಜಿಎಸ್‌ಟಿ ಆದಾಯವಾಗಿ ನೀಡಿದೆ. ಜನಸಂಖ್ಯೆಯ ಆಧಾರದಲ್ಲಿ ಟೋಕಿಯೋ ಬಳಿಕ ವಿಶ್ವದ 2ನೇ ಅತಿದೊಡ್ಡ ಮೆಟ್ರೋಪಾಲಿಟಿನ್ ನಗರ ಇದಾಗಿದೆ.
07: ಪಶ್ಚಿಮ ಬಂಗಾಳ: ರಾಜಕೀಯದ ನಿಟ್ಟಿನಲ್ಲಿ ದೇಶದ ಪಾಲಿಗೆ ಅತ್ಯಂತ ಪ್ರಮುಖವಾಗಿ ಪಶ್ಚಿಮ ಬಂಗಾಳ, ದೇಶದ 13ನೇ ಅತಿದೊಡ್ಡ ರಾಜ್ಯ. ಆಗಸ್ಟ್‌ನಲ್ಲಿ ಈ ರಾಜ್ಯದಿಂದ ಬಂದ ಜಿಎಸ್‌ಟಿ ಆದಾಯ 4620 ಕೋಟಿ ರೂಪಾಯಿ.
06: ಉತ್ತರ ಪ್ರದೇಶ: ದೇಶದ ಅತ್ಯಂತ ಗರಿಷ್ಠ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ನಿಧಾನವಾಗಿ ತನ್ನ ಜಿಎಸ್‌ಟಿ ಆದಾಯವನ್ನು ಏರಿಸಿಕೊಳ್ಳತೊಡಗಿದೆ. ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಜಿಎಸ್‌ಟಿ ಆದಾಯ 7468 ಕೋಟಿ ರೂಪಾಯಿ.
05: ಹರಿಯಾಣ: ದೆಹಲಿಯ ಪಕ್ಕದ ರಾಜ್ಯ ಹರಿಯಾಣಕ್ಕೆ ಚಂಡೀಘಢ ಹಾಗೂ ಫರೀದಾಬಾದ್ ಆದಾಯದ ಮೂಲಸ್ಥಾನವಾಗಿದೆ. ಅದರೊಂದಿಗೆ ಗುರುಗ್ರಾಮ ಸಾಫ್ಟ್‌ವೇರ್ ಕಂಪನಿಗಳ ಆಶ್ರಯತಾಣವಾಗಿದೆ. ಆಗಸ್ಟ್‌ನಲ್ಲಿ ಹರಿಯಾಣದ ಜಿಎಸ್‌ಟಿ ಆದಾಯ 7666 ಕೋಟಿ ರೂಪಾಯಿ.
04.ತಮಿಳುನಾಡು: ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡು ಕೂಡ ಭರ್ಜರಿ ಜಿಎಸ್‌ಟಿ ಆದಾಯ ಗಳಿಸುತ್ತಿದೆ. ರಾಜಧಾನಿ ಚೆನ್ನೈ ದೊಡ್ಡ ಮಟ್ಟಕ್ಕೆ ನೆರವು ನೀಡುತ್ತಿದೆ. 9475 ಕೋಟಿ ರೂಪಾಯಿಯನ್ನು ತಮಿಳುನಾಡು ಆಗಸ್ಟ್‌ನಲ್ಲಿ ಜಿಎಸ್‌ಟಿ ಆದಾಯಕ್ಕೆ ನೀಡಿದೆ.
03.ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತವರೂರಿನಲ್ಲಿ ಗರಿಷ್ಠ ಜಿಎಸ್‌ಟಿ ಆದಾಯ ತರುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ತನ್ನ ಮೂಡಿಗೇರಿಸಿ ಕೊಂಡಿದೆ .ಆಗಸ್ಟ್‌ನಲ್ಲಿ ಗುಜರಾತ್‌ನ ಆದಾಯ 9765 ಕೋಟಿ ರೂಪಾಯಿ.
02.ಕರ್ನಾಟಕ: ಎಂದಿನಂತೆ ಕರ್ನಾಟಕ ಗರಿಷ್ಠ ಜಿಎಸ್‌ಟಿ ಆದಾಯ ನೀಡುವ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಐಟಿ ಸಿಟಿ ಬೆಂಗಳೂರನ್ನು ರಾಜಧಾನಿಯನ್ನಾಗಿ ಹೊಂದಿರುವ ಕರ್ನಾಟಕ ಆಗಸ್ಟ್‌ನಲ್ಲಿ 11116 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಗಳಿಸಿದೆ.
01.ಮಹಾರಾಷ್ಟ್ರ: ವಾಣಿಜ್ಯ ನಗರಿಎಂದೇ ಪ್ರಸಿದ್ದ ವಾಗಿರುವ ಮುಂಬೈಯನ್ನು ಹೊಂದಿರುವ ಮಹರಾಷ್ಟ್ರವು ನಿರೀಕ್ಷೆಯಂತೆ ದೇಶದ ಜಿಎಸ್‌ಟಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಬರೋಬ್ಬರಿ 23282 ಕೋಟಿ ರೂಪಾಯಿ ಹಣವನ್ನು ಜಿಎಸ್‌ಟಿ ಆದಾಯವಾಗಿ ಗಳಿಸಿದೆ.