PDO, ಅಧ್ಯಕ್ಷರಿಂದ ಕಾರ್ಯ ನಿರತ ದಲಿತ ಸಿಬ್ಬಂದಿಯವರ ಮೇಲೆ ದಮ್ಕಿ ಕಿರುಕುಳ ಆರೋಪ.
(CHIKKAMAGALURU): ಕರ್ಕೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕೇಶವತ್ತಿ ಮತ್ತು ಪಿಡಿಓ ಪ್ರೇಮ್ ಕುಮಾರ ಅಧಿಕಾರಿ ಯವರಿಂದ ಕಾಂಟ್ರಾಕ್ಟ್ ಬೇಸಿಕ್ ಅಡಿಯಲ್ಲಿ ಕಾರ್ಯ ನಿರತ ದಲಿತ ಸಿಬ್ಬಂದಿಯವರ ಮೇಲೆ ಧಮ್ಕಿ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಕರ್ಕೇಶ್ವರ ಗ್ರಾಮ ಪಂಚಾಯಿತಿ ಇಂದ 2021 ರಿಂದ 2025 ಈ ವರೆಗೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮೇಲ್ನೋಟಕ್ಕೆ 3 /4 ಕಾಮಗಾರಿಗಳು ಮಾಡಿದ್ದು ಹಾಗು ಸರ್ಕಾರದ ನರೇಗಾ ಮತ್ತು ಇತರೆ ಯೋಜನೆ ಅಡಿಯಲ್ಲಿ ಹಲವು ಕಾಮಗಾರಿಗಳನ್ನು ಅಧ್ಯಕ್ಷ ಹಾಗೂ ಪಿಡಿಓ ಇವರುಗಳು ಪಂಚಾಯಿತಿಯಾ ಉಳಿದ ಸದಸ್ಯರನ್ನು ಲೆಕ್ಕಿಸದೆ ಸ್ವಂತ ತಾವೇ ತೀರ್ಮಾನ ತೆಗೆದು ಕೊಂಡು ಅವರಿಗೆ ಇಷ್ಟ ಬಂದವ್ರಿಗೆ ಕಾಮಗಾರಿ ಇ ಸ್ವತ್ತು ಮತ್ತು ಸರ್ಕಾರದ ಸೌಲಭ್ಯ ನೀಡುತಿದ್ದು ಬಡ ಕಾರ್ಮಿಕರಿಗೆ ಸರಕಾರದ ಸೌಲಭ್ಯ ನೀಡದೆ ನರೇಗಾ ಕಾಮಗಾರಿಯನ್ನು ರಾಜೇಶ್ ರವರ ಸ್ವಂತ ಜೆಸಿಬಿ, ಟ್ರ್ಯಾಕ್ಟರ್, ಮುಕಾಂತರ ಪಂಚಾತಿ ಎಲ್ಲ ಕಾಮಗಾರಿಯನ್ನು ತಾವೇ ಮಾಡಿಕೊಂಡು ಬಂದಿದ್ದು ಸರ್ಕಾರದ ಹಣ ದುರುಪಯೋಗ, ದುರಾಡಳಿತ ಮಾಡಿಕೊಂಡು ಬಂದಿದ್ದಲ್ಲದೆ. ಈ ವಿಚಾರವಾಗಿ ಮತಾ ನೀಡಿದ ಕರ್ಕೇಶ್ವರ ಕೈಮರ ಗ್ರಾಮಸ್ಥರು ಆಯಾ ಊರಿನ ಸದಸ್ಯರನ್ನು ಪ್ರಶ್ನಿಸಿದಾಗ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗ,ಸರ್ಕಾರದ ಹಣ ದುರ್ಬಳಕೆ ಯಾಗಿದ್ದು,ಲಂಚ ಪಡೆದ್ದು ಇ ಸ್ವತ್ತು ನೀಡುತಿರುವ ಬಗ್ಗೆ ಸಾರ್ವಜನಿಕರು ಪತ್ರಕರ್ತರಿಗೆ ದೂರನ್ನು ನೀಡಿದಕ್ಕೆ ಅನುಮಾನಗೊಂಡು ಅಧ್ಯಕ್ಷ ರಾಜೇಶ್ & PDO ಪ್ರೇಮ್ ಕುಮಾರ ಯವರಿಂದ ದಿನಾಂಕ 06 – 01 2025 ರಂದು ಬೆಳಿಗ್ಗೆ 9.30 ಗೆ ಪಂಚಾಯಿತಿ ಗೆ ಕರೆಸಿ ದಲಿತ ಸಿಬ್ಬಂದಿಯ (4 ಜನ ಸಂತ್ರಸ್ತರ) ಮೇಲೆ ದಮ್ಕಿ ಹಾಕಿ ಮೊಬೈಲ್ ಗಳನ್ನು ತೆಗೆದುಕೊಂಡು ನಂಬರ್ ಗಳನ್ನು ಬ್ಲಾಕ್ ಲಿಸ್ಟ್ ಗೆ ಹಾಕಿಸಿ ಯಾರಿಗೂ ಮಾಹಿತಿ ನೀಡದಂತೆ ಹೇಳಿದ್ದು, ಸಂತ್ರಸ್ಥರು ಹೆದರಿ ದೂರು ನೀಡಿರುವುದಿಲ್ಲ.
ಮುಂಜಾಗೃತೆ ದೃಷ್ಟಿ ದಲಿತ ಸಿಬ್ಬಂದಿಯ & ಪಂಚಾಯಿತಿ ಸದಸ್ಯರುಗಳಿಗೆ ಹಾಗು ಸಾರ್ವಜನಿಕರಿಗೆ ಇವರಿಂದ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಂಡು ಇಬ್ಬರನ್ನು ಅಧಿಕಾರದಿಂದ ಅಮಾನತು ಗೊಳಿಸಬೇಕೆಂದು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಆರೋಪಿಗಳ ವಿರುದ್ಧ ದೂರು ದಾಖಲಿಸಿ ಕೊಂಡು ಅಧ್ಯಕ್ಷ ರಾಜೇಶ್ & PDO ಪ್ರೇಮ್ ಕುಮಾರ ರವರನ್ನು ತನಿಖೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥರು ಗ್ರಾಮಸ್ಥರಿಗೆ ನ್ಯಾಯ ಕೊಡಿಸ ಬೇಕೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತ ಪಡಿಸಿರುತ್ತಾರೆ.