ಆಹ್ವಾನಿತ ಲೈಟ್ಸ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.
(SHIVAMOGA ): ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸತತ ಮೂರು ದಿನಗಳ ಕಾಲ ಗ್ರಾಮಾಂತರ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗಿತ್ತು.
ಇದರಲ್ಲಿ ಸತಿ ಸುಮಾರು 18 ತಂಡಗಳು ಭಾಗವಹಿಸಿದ್ದವು.
ಇದರಲ್ಲಿ ಫೈನಲ್ ನಲ್ಲಿ ಗೆದ್ದ ತಂಡಕ್ಕೆ ಇಂದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಲಾಗಿದ್ದು. ಪ್ರಥಮ ಬಹುಮಾನವನ್ನು ಗ್ರಾಮದ ತಂಡ ತಾಳಗುಪ್ಪದ ಎಮ್.ಜಿ.ಸಿ.ಟಿ.ತಂಡ ಪಡೆದುಕೊಂಡರು. ಈ ಸ್ಪರ್ಧೆಯನ್ನು ಎಮ್ ಜಿ.ಸಿ.ಟಿ ಕ್ರಿಕೆಟರ್ಸ್ ಆಯೊಜಿಸಿದ್ದರು.
ವೇದಿಕೆಯಲ್ಲಿ ಅರುಣ್ ಕುಗ್ವೆ, ಬಿಳಗಲ್ಲುರು ಕೃಷ್ಣಮೂರ್ತಿ, ಸತ್ಯನಾರಾಯಣ, ಸಂದೇಶ್ ಶೆಟ್ಟಿ, ಉದಯ್ ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ