ನ್ಯೂಸ್ಶಿವಮೊಗ್ಗ

ಗುರು ಹಿರಿಯರನ್ನು ಗೌರವಿಸುವುದು, ಸ್ಮರಿಸುವುದು, ಸಮ್ಮಾನಿಸುವುದು ಭಾರತೀಯ ಸಂಸ್ಕೃತಿ.

ಗುರು ಹಿರಿಯರನ್ನು ಗೌರವಿಸುವುದು, ಸ್ಮರಿಸುವುದು, ಸಮ್ಮಾನಿಸುವುದು ಭಾರತೀಯ ಸಂಸ್ಕೃತಿ.

(SHIVAMOGA): ಸೊರಬ: ಗುರು ಹಿರಿಯರನ್ನು ಗೌರವಿಸುವುದು, ಸ್ಮರಿಸುವುದು, ಸಮ್ಮಾನಿಸುವುದು ಭಾರತೀಯ ಸಂಸ್ಕೃತಿ. ‌‍ನಮ್ಮ ಜೀವನದ ಅವಧಿಯಲ್ಲಿ ದೊರೆತ ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದು ಅತ್ಯುತ್ತಮ ಸಂಸ್ಕಾರ ಎಂದು ಕಟ್ಟೆ ನರಹರಿ ಕೆರೆಕೊಪ್ಪ ಹೇಳಿದರು.

ತಾಲ್ಲೂಕು ಹೊಸಬಾಳೆಯ 94 ರ ವಯೋವೃದ್ಧೆ ಭಾಗೀರತಿ ವೆಂಕಟಗಿರಿ ಹೆಗಡೆ ಅವರಿಗೆ  ರೈತ ಮಹಿಳಾ ದಿನಾಚರಣೆ ಅಂಗವಾಗಿ  ಅವರ ಸ್ವಗೃಹದಲ್ಲಿ ಗೌರವ ಸಮರ್ಪಿಸಿ ಮಾತನಾಡಿದರು.

ನಮ್ಮ ಜೀವನವು ಸಾರ್ಥ ಕತೆಯನ್ನು ಪಡೆಯಬೇಕಾದರೆ ನಾವು ಗುರು-ಹಿರಿಯರಿಂದ, ಸಾಹಿತಿ, ಕವಿಗಳು ಹಾಗೂ ಉನ್ನತ ಮಟ್ಟದ ಮೇಧಾವಿಗಳ ಅನುಕರಣೆ ಮಾಡುತ್ತೇವೆ. ನಾವು, ನಮ್ಮಿಂದ, ನಾವಾಗಿಯೇ ಪರಿ ಪೂರ್ಣತೆಯನ್ನು ಪಡೆಯಲು ಸಾಧ್ಯವಿಲ್ಲ. ನಮ್ಮ ಜೀವನದ ಸಾರ್ಥಕತೆಯನ್ನು ಕಟ್ಟಿಕೊಟ್ಟ ಗುರು-ಹಿರಿಯರಿಗೆ ನಾವು ಎಂದೆಂದಿಗೂ ಚಿರಋಣಿ ಆಗಿರಲೇ ಬೇಕು.

ಹಿರಿಯರಿಗೆ ಕೊಡುವ ವಿಧೇಯತೆಯು ನಮ್ಮನ್ನು ಸಂಸ್ಕೃತಿ, ಸಂಸ್ಕಾರದಲ್ಲಿ ಉನ್ನತಿಯ ಪರಂಪರೆಯಲ್ಲಿ ಮುನ್ನಡೆಯಲು ಪ್ರೇರಣೆಯಾಗುತ್ತದೆ. ಗುರು -ಹಿರಿಯರು ನಮಗೆ ಎಂದೆಂದೂ ಒಳ್ಳೆಯದನ್ನೇ ಬಯಸುವವರಾದ್ದರಿಂದ ಅವರ ನೀತಿ – ಬೋಧನೆಗಳ ಒಂದೊಂದು ಮಾತುಗಳು ನಮಗೆ ಮುತ್ತಿನ ಹಾರಕ್ಕೆ ಸರಿ ಸಮಾನವಾಗುತ್ತದೆ. ನಮ್ಮನ್ನು ಯಾವ ರೀತಿಯಲ್ಲಿ ಶ್ರೇಯಸ್ಸಿನ ಹಾದಿಗೆ ಕೊಂಡು ಹೋಗುತ್ತಾರೆಯೋ ಅದೇ ರೀತಿ ಅವರ ಕಷ್ಟ – ಕಾರ್ಪಣ್ಯ ಹಾಗೂ ವೃದ್ಯಾಪ್ಯದ ಸಮಯದಲ್ಲಿ ಅವರ ಸೇವೆ ಮಾಡುವುದು ದೇವರು ಮೆಚ್ಚುವ ಕೆಲಸವೇ ಆಗಿರುತ್ತದೆ. ಅದಕ್ಕಾಗಿ ಗುರು – ಹಿರಿಯರ ಮನಸ್ಸನ್ನು ನೋಯಿಸದೆ ಗೌರವ ಕೊಡುವುದರ ಮುಖೇನ ಸಕಾರಾತ್ಮಕವಾದ ಸಂಚಲನ ಕ್ರಿಯೆಗೆ ಮುಂದಾಗಬೇಕು ಎಂದರು.

ಭಾಗೀರತಿ ಅವರು ಆದರ್ಶ ಗೃಹಿಣಿ, ಸಂಸ್ಕಾರದೊಂದಿಗೆ ಸಂಸಾರವನ್ನು ನಡೆಸಿ ಇದೀಗ 94 ರ ಹರೆಯದಲ್ಲಿದ್ದರೂ ನೆನಪಿನ ಶಕ್ತಿ ಕುಂದಿಲ್ಲ. ವಯೋಸಹಜ ದೈಹಿಕ ಕ್ಷೀಣತೆ ಹೊರತುಪಡಿಸಿ ಇನ್ನುಳಿದಂತೆ ತಕ್ಕಮಟ್ಟಿಗೆ ಆರೋಗ್ಯವಾಗಿದ್ದಾರೆ. ಮುಂಪೀಳಿಗೆಗೆ ದಾರಿದೀಪವಾಗಿದ್ದಾರೆ. ಇಂತವರನ್ನು ಗುರುತಿಸಿ ಗೌರವಿಸ ಬೇಕಾದುದು ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಕುಟುಂಬ, ಆಪ್ತೇಷ್ಟರೊಂದಿಗೆ ಗೌರವಿಸಿದೆ. ಹಿರಿಯರ ಆಶೀರ್ವಾದ ಪಡೆಯಲಾಗಿದೆ ಎಂದರು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code