ಕೊಡಗುನ್ಯೂಸ್

ತಾಲ್ಲೂಕಿನ ಗಡಿ ಭಾಗದ ಎಂ. ವಿ. ನಗರದ ಕುವೆಂಪು ವೃತ್ತದ ಆಲದ ಮರದ ಬಳಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ:

ತಾಲ್ಲೂಕಿನ ಗಡಿ ಭಾಗದ ಎಂ. ವಿ. ನಗರದ ಕುವೆಂಪು ವೃತ್ತದ ಆಲದ ಮರದ ಬಳಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ:

(KOLARA): ಬಂಗಾರಪೇಟೆ:ಇತ್ತೀಚಿನ ದಿನಗಳಲ್ಲಿ ಕನ್ನಡ, ಕನ್ನಡಪರ ಹೋರಾಟ ಎಂದಾಗ ಮುಂಚೂಣಿಯಲ್ಲಿ ಬರುವ ಹೆಸರು ಕರ್ನಾಟಕ ರಕ್ಷಣಾ ವೇದಿಕೆ, ಸುಮಾರು 25 ವರ್ಷಗಳ ಕಾಲ ನಿರಂತರ, ಕನ್ನಡ ನಾಡು,ನುಡಿಗಾಗಿ ತಮ್ಮ ಸಂಘಟನೆಯ ಮೂಲಕ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು ತಿಳಿಸಿದರು.



ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ತಾಲ್ಲೂಕಿನ ಗಡಿಭಾಗದ ಬಂಗಾರಪೇಟೆ ಬೇತಮಂಗಳ ಮುಖ್ಯ ರಸ್ತೆ ಎಂ.ವಿ.ನಗರದ ಕುವೆಂಪು ವೃತ್ತದ ಆಲದ ಮರದ ಬಳಿ ಪ್ರತಿ ವರ್ಷದಂತೆ ಈ ವರ್ಷವ ಸಹ ಆಚರಿಸಲಾಯಿತು.ರಾಜ್ಯೋತ್ಸವದ ಅಂಗವಾಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಯನ್ ಜೆ.ಸುರೇಶ್ ರವರು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು.



ಈ ವೇಳೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜುರವರು ಮಾತನಾಡಿಹಿಂದಿನಿಂದಲೂ ಕರ್ನಾಟಕ ರಕ್ಷಣಾ ವೇದಿಕೆಯು ನಾಡು ನುಡಿ, ನೆಲ, ಜಲ, ರಕ್ಷಣೆಗೆ ಹೋರಾಟ ನಡೆಸುತ್ತಿದೆ. ಕರವೇ ಉದಯವಾಗಿ 25 ವರ್ಷವಾಯಿತು. ಕರ್ನಾಟಕದ ನೆಲ,ಗಡಿ, ಸಂಸ್ಕೃತಿ, ಕನ್ನಡಿಗರಿಗೆ ಸರ್ಕಾರಿಉದ್ಯೋಗ ಮತ್ತು ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕು ಎಂಬ ಬೇಡಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಬೆಳಗಾವಿ, ಕೆಜಿಎಫ್ ಗಡಿ ವಿಚಾರ, ರೈಲ್ವೇ ಮುಂತಾದ ವಿಚಾರಗಳಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ವಿರುದ್ದ ಹೋರಾಟ ಮಾಡಿಕೊಂಡು ಬಂದಿದೆ. ಹಿಂದಿ ಭಾಷೆ ಹೇರಿಕೆಯ ವಿರುದ್ದವೂ ನಮ್ಮ ಸತತ ಹೋರಾಟ ಮುಂದುವರೆದಿದೆ ಎಂದು ಹೇಳಿದರು.



ಇದೇ ತಿಂಗಳು 25ನೇ ವರ್ಷದ ಬೆಳ್ಳಿ ಹಬ್ಬವನ್ನು ಕೋಲಾರದ ರಂಗಮಂದಿರದಲ್ಲಿ ಬಹಳ ವಿಜೃಂಭಣೆ ಮತ್ತು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು ಇಂದು ಸಹ ಕೋಲಾರ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬಹಳ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಕರವೇ ರೈತ ಘಟಕ ಉಪಾಧ್ಯಕ್ಷ ಮಂಜುನಾಥ್ ಗೌಡ, ಡಿ.ಕೆ. ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಯನ್ ಜೆ. ಸುರೇಶ್, ಆಟೋ ಘಟಕದ ಅಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಅಮರನಾಥ್, ರಾಮಯ್ಯ, ಮುರುಳಿ, ಕಮಲ್, ಕರವೇ ಮುಖಂಡರಾದ ಕರುಣಾಮೂರ್ತಿ, ರಿಚರ್ಡ್, ಹಾಗೂ ಕರವೇ ಕಾರ್ಯಕರ್ತರಾದ ನಾಗ, ಮಂಜು, ಗೋವಿಂದ, ಪ್ರಸಾದ್ ಉಪಸ್ಥಿತರಿದ್ದರು

ವರದಿ ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code