ನ್ಯೂಸ್ಶಿವಮೊಗ್ಗ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯ ಮಟ್ಟದ ಹೆಚ್.ಎನ್.ಪ್ರಶಸ್ತಿ ಶಿವಮೊಗ್ಗದ ಸಂಘಟಕ ಡಿ.ಮಂಜುನಾಥ ಅವರಿಗೆ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯ ಮಟ್ಟದ ಹೆಚ್.ಎನ್.ಪ್ರಶಸ್ತಿ ಶಿವಮೊಗ್ಗದ ಸಂಘಟಕ ಡಿ.ಮಂಜುನಾಥ ಅವರಿಗೆ



(SHIVAMOGA): 2024 ಡಿಸೆಂಬರ್ 28 ಮತ್ತು 29 ರಂದು ಬೆಂಗಳೂರಿನ ಬಾಗಲೂರು ವಿ.ಜೆ.ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ

ಶಿವಮೊಗ್ಗ ಎಂದರೆ ಡಿ.ಮಂಜುನಾಥ. ನಿತ್ಯ ನಿರಂತರವಾಗಿ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಕ್ಷೇತ್ರಗಳ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಡಿ.ಮಂಜುನಾಥ ಅವರ ಸಂಘಟ ಕೌಶಲ ರಾಜ್ಯದಲ್ಲಿಯೇ ಮಾದರಿಯಾಗಿದೆ.
ಕಳೆದ 4 ದಶಕಗಳಿಂದ ಅದರಲ್ಲೂ ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದಿರುವ ಮಂಜುನಾಥ ಅವರ ಸೇವೆ ಭಾವನೆ ವಿಶಿಷ್ಠವಾದದು. ಒಂದು ರೀತಿಯಲ್ಲಿ 24*7 ರಂತೆ ಕಾರ್ಯ ನಿರ್ವಹಿಸುತ್ತ ಬಂದಿದ್ದು. ಅಭಿನಂದನಿಯವಾಗಿದೆ.


ಇವರ ಅವರತವಾದ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಹೆಚ್.ಎನ್.ಪ್ರಶಸ್ತಿಗೆ ಭಾಜನರಾಗಿರುವುದು ಇವರ ಸೇವೆಗೆ ಸಂದ ಗೌರವವಾಗಿದೆ. ಪ್ರಶಸ್ತಿಯನ್ನು ಹುಡುಕಿಕೊಂಡ ಹೋಗದ ಇವರು ಸನ್ಮಾನ ಗೌರವಗಳಿಗೆ ಬೆನ್ನು ಬೀಳದ ಇವರಿಗೆ ರಾಜ್ಯ ಮಟ್ಟದ ಹೆಚ್.ಎನ್ ಪ್ರಶಸ್ತಿ ಇವರ ಸಂಘಟನೆಗೆ ಸಂದ ಗೌರವವಾಗಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಪ್ರತಿ ವರ್ಷ ಕುವೆಂಪು ಜನ್ಮ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಆಯೋಜಿಸುತ್ತ ಬರಲಾಗಿದ್ದು ಈ ಸಂದರ್ಭದಲ್ಲಿ ವಿಚಾರವಾದಿ ಹಾಗೂ ವೈಜ್ಞಾನಿಕ ಚಿಂತಕ ಹೆಚ್.ನರಸಿಂಹಯ್ಯ ಹೆಸರಿನಲ್ಲಿ(ಹೆಚ್.ಎನ್.) ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಈ ಭಾರಿ ಶಿವಮೊಗ್ಗ ಜಿಲ್ಲೆಯಿಂದ ಡಿ.ಮಂಜುನಾಥ ಅವರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅವರು ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಡಿಸೆಂಬರ್ 29 ರಂದು ಭಾನುವಾರ ಕುವೆಂಪು ಜನ್ಮ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.


ಕುವೆಂಪು ನೆಲದ ತೀರ್ಥಹಳ್ಳಿಯವರಾದ ಡಿ.ಮಂಜುನಾಥ ಶಿಕ್ಷಣವನ್ನು ಪಡೆಯುವ ಸಲುವಾಗಿ ಶಿವಮೊಗ್ಗ ಸೇರಿದ್ದು.ಕಾಲೇಜು ಜೀವನದಲ್ಲಿಯೇ ಸಂಘಟನೆಗಳಲ್ಲಿ ಸಕ್ರಿಯರಾದವರು. ಅನೇಕ ಸಂಘಟನೆಗಳಲ್ಲಿ ಗುರುತಿಸಿಕೊಂಡು ಬಂದಿರುವ ಇವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನು ಅತ್ಯಂತ ಶ್ರೀಮಂತವಾಗಿಸಿದ ಹೆಗ್ಗಳಿಕೆ ಇವರದ್ದಾಗಿದೆ. 73ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಒಂದು ಹೊಸ ಮೈಲಿಗಲ್ಲಾಗಿದೆ. ಹೊಸ ತಲೆಮಾರಿನ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಿದ್ದು, ಮಕ್ಕಳ ಸಾಹಿತ್ಯಕ್ಕೆ ವಿಶೇಷ ಹೊತ್ತು ನೀಡಿದ್ದು, ಕಥೆ, ಕಾವ್ಯ,ಗಾಯನ ಹೀಗೆ ಅನೇಕ ಸೃಜಶೀಲ ಕಮ್ಮಟಗಳನ್ನು ಸಂಘಟಿಸಿ ಆ ಮೂಲಕ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳನ್ನು ಜಾಗೃತಿಯಾಗಿಸಿದ್ದು, ಪ್ರತಿ ತಿಂಗಳು ಹುಣ್ಣುಮೆಯನ್ನು ಸಾಹಿತ್ಯ ಹುಣ್ಣುಮೆಯಾಗಿಸಿದ್ದು..ಜಿಲ್ಲೆಯ ಎಲ್ಲಾ ತಾಲ್ಲೂಕು ಹೋಬಳಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಜಾನಪದ ಬಿತ್ತಿ ಬೆಳೆದದ್ದು.. ಹೀಗೆ ಹೇಳುತ್ತ ಹೋದಂತೆ ಅವರ ಕುರಿತು ಬೃಹತ್ ಗ್ರಂಥವೆ ಆಗುತ್ತದೆ. ಇಂತಹ ಅಪರೂಪದ ಸಾತ್ವಿಕ ಮನದ ಸಂಘಟಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಬಿ.ಡಿ.ರವಿಕುಮಾರ್ ಅವರು ತಿಳಿಸಿದರು.
ಡಿ.ಮಂಜುನಾಥ ಅವರನ್ನು ಕಸಾಪ ಕಛೇರಿಯಲ್ಲಿ ಆಹ್ವಾನಿಸಲಾಯಿತು ಈ ಸಂದರ್ಭದಲ್ಲಿ ಪರಿಷತ್ತಿನ ಪ್ರಮುಖರಾದ ಜ್ಯೋತಿ ಮಣೂರು, ಮೂರ್ತಿ, ಸೂರ್ಯ ಪ್ರಕಾಶ್, ನಾರಾಯಣ, ವೆಂಕಟೇಶ್ ಚಂದಳ್ಳಿ, ಮೋಹನ್ ಕುಮಾರ್, ನಂಜುಂಡಸ್ವಾಮಿ,ಗಣಪತಿ ಯಡೇಹಳ್ಳಿ,ಅಮಿತ್, ಸ್ವಜನ್, ಚಂದ್ರನಾಯ್ಕ್ ಮೊದಲಾದವರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code