ಹೆಂಡತಿ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷ ಉಣಿಸಿದ ಪಾಪಿ ತಂದೆ
( ವಿಜಯಪುರ- ಸೆ – ೦2 ) ಹೆಂಡತಿ ಮೇಲಿನ ಕೋಪಕ್ಕೆ ಮಕ್ಕಳಿಗೆ ವಿಷ ಉಣಿಸಿದ ಪಾಪಿ ತಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನಿಸಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ ಅವಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಶಾಂತಾ ಹಾಗೂ ರಾಯಣ್ಣ ಮೃತಪಟ್ಟಿರುವ ದುರ್ದೈವಿಗಳು. ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ತನ್ನ ಮೂವರು ಮಕ್ಕಳಿಗೆ ವಿಷ ಹಾಕಿದ್ದಾನೆ. ಭೀರಣ್ಣ ಹಾಗೂ ಮಗ ಸಂಗಮೇಶ ಪ್ರಾಣಪಾಯದಿಂದ ಪಾರಾಗಿದ್ದಾರೆ.