ಗುರಿಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಗಾಳಿಪಟಗಳು ಜೀವನದಲ್ಲಿ ಪ್ರೇರಕವಾಗುತ್ತವೆ.
(KOLARA): ಬಂಗಾರಪೇಟೆ : ನಮ್ಮ ಜೀವನಗಳ ಸತ್ಯ ವಿಚಾರಗಳೊಂದಿಗೆ ನಮ್ಮ ಆಂತರಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ವಿದ್ಯಾರ್ಥಿಗಳ ಮನರಂಜನೆ, ಮನೋಭಿಲಾಷೆ, ಸಾಧನೆ ಹಾಗೂ ಗುರಿಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಗಾಳಿಪಟಗಳು ಜೀವನದಲ್ಲಿ ಪ್ರೇರಕವಾಗುತ್ತವೆ. ಅಷ್ಟೇ ಅಲ್ಲ ನೈತಿಕ ಸ್ಥೈರ್ಯ ತುಂಬುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಾಂದೀಪನಿ ಶಾಲೆಯಿಂದ ಹಮ್ಮಿಕೊಂಡಿದ್ದ ಗಾಳಿಪಟ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಧಾರ್ಮಿಕ ಆಚರಣೆ ಮತ್ತು ಜಾನಪದ ಆಟವಾಗಿರುವ ಗಾಳಿಪಟ ಹಬ್ಬದಿಂದ ನಮ್ಮಲ್ಲಿ ಉತ್ಸಾಹ, ಕುತೂಹಲ, ಅನ್ವೇಷಣಾ ಬುದ್ಧಿ ಬೆಳೆಯುತ್ತದೆ’’ಗಾಳಿಪಟ ಹಬ್ಬಕ್ಕೆ ರಾಜ್ಯದಲ್ಲಿ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದೆ ಎಂದರು. ಈ ಶಾಲೆಯಲ್ಲಿ ಹಳೆಯ ಸಾಂಪ್ರದಾಯಕ ಆಟಗಳನ್ನು, ಸಾಂಪ್ರದಾಯಿಕ ಕಲೆಗಳನ್ನು ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರ ತರಲು ವಿಭಿನ್ನ ರೀತಿಯ ಚಟುವಟಿಕೆಗಳು ಹಾಗೂ ಆಟಗಳನ್ನು ಮಕ್ಕಳಲ್ಲಿ ಬೆಳೆಸುತ್ತಿರುವುದು ನಿಜವಾಗಲೂ ಶ್ಲಾಘನೀಯ ಎಂದರು.
ಈ ಒಂದು ಗಾಳಿಪಟ ಹಬ್ಬವನ್ನು ಹಳೆಯ ಕಾಲದಲ್ಲಿ ಆಚರಣೆ ಮಾಡುತ್ತಿದ್ದರು. ಮಕ್ಕಳು ತಯಾರಿಸಿರುವ ಗಾಳಿಪಟವು ಯಾವ ಎತ್ತರಕ್ಕೆ ಬೆಳೆಯುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಇದನ್ನು ಮಾದರಿಯಾಗಿ ತೆಗೆದುಕೊಂಡು ಇದೇ ರೀತಿ ವಿದ್ಯಾಭ್ಯಾಸದಲ್ಲಿ ಹಂತ ಹಂತವಾಗಿ ಉನ್ನತ ಮಟ್ಟಕ್ಕೆ ಹೋಗಬೇಕು ಎಂದು ಶುಭ ಹಾರೈಸಿದರು.
ಗಣಕ ಯಂತ್ರ ಶಿಕ್ಷಕರಾದ ಚಂದ್ರಶೇಖರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಮೊದಲು ಶಾಲೆಗಳಿಗೆ ಸರಿಯಾದ ಸಮಯಕ್ಕೆ ಬರಬೇಕು ತಡವಾಗಿ ಬಂದು ಶಾಲೆಗಳ ಮುಂದೆ ನಿಂತು ಶಿಕ್ಷೆಗೆ ಒಳಗಾಗಬಾರದು ಆಗ ನಿಮ್ಮ ಗಮನವೆಲ್ಲವೂ ಶಿಕ್ಷೆ ಕಡೆ ಹೋಗುತ್ತದೆ. ವಿದ್ಯಾಭ್ಯಾಸದ ಕಡೆ ಗಮನ ಕಡಿಮೆಯಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳು ಶಿಸ್ತು ಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರದ ಸುಜಾತ, ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ