ಜಿಲ್ಲೆನ್ಯೂಸ್

ಕೊಪ್ಪಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ.

ಕೊಪ್ಪಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ.

(KOPALA): ಕೊಪ್ಪಳ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಹೆಚ್ಚಿನ ಜ್ಞಾನ ಹೊಂದಲು ಸಾಧ್ಯ ಹಾಗೂ ಪ್ರಯೋಗಗಳನ್ನು ಮಾಡುವುದರ ಮೂಲಕ ಹೆಚ್ಚಿನ ಸಂಶೋಧನೆ ಮಾಡಲು ಸಾಧ್ಯ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ನ ಪ್ರಾಚಾರ್ಯರಾದ ಕೆ.ಡಿ ಬಡಿಗೇರ ಅವರು ಅಶಯ ವ್ಯಕ್ತಪಡಿಸಿದರು.


ಇಂದು ಕೊಪ್ಪಳ ಜಿಲ್ಲಾ ಮಟ್ಟದ 2023-24 ನೇ ಸಾಲಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನವನ್ನು ಮುನಿರಾಬಾದ್ ನಲ್ಲಿ ಇರುವ ವಿಜಯನಗರ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಕೊಪ್ಪಳ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ್, ಇವರ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿದ್ದರು,ವಿದ್ಯಾರ್ಥಿಗಳು ಸದಾ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಯನ್ನು ಮಾಡುವುದರ ಮೂಲಕ ಅವರು ಹೆಚ್ಚು ಅಭಿವೃದ್ಧಿ ಅಗಲು ಸಾಧ್ಯ ಎಂದು ವಿಜ್ಞಾನ ವಸ್ತು ಪ್ರದರ್ಶನ ನೊಡಲು ಅಧಿಕಾರಿ ರಾಜೇಂದ್ರ ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು,ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಜಯನಗರ ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಶಿವಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರುವುದರ ಮೂಲಕ, ಉತ್ತಮ ಪ್ರಜೆಯಾಗಬೇಕು ಎಂದರು,


ಈ ಕಾರ್ಯಕ್ರಮದಲ್ಲಿ ಡಟಟ್ ನ ಹಿರಿಯ ಉಪನ್ಯಾಸಕರಾದ ಸುನಂದಾ, ಕಂಠೆಪ್ಪ,ಬೆಣ್ಣೆಕಲ್ಲಛ ಮಠ, ಅರಳಿ, ಉಪಸ್ಥಿತರಿದ್ದರು
ವೀರಮ್ಮ ಶಿಕ್ಷಕಿ ನಿರೂಪಿಸಿ ವಂದಿಸಿದ್ದರು, ಹುಲಿಗೆಮ್ಮ ಸ್ವಾಗತಿಸಿದರು,ಶಂಕ್ರಮ್ಮ ಹಾಗೂ ಕವಿತಾ ಪ್ರಾರ್ಥಿಸಿದ್ದರು,ಜಿಲ್ಲೆಯ ವಿವಿಧ ಶಿಕ್ಷಕರು ಉಪಸ್ಥಿತರಿದ್ದರು.

ವರದಿ: ಅಂಬಳಿ ವೀರೇಂದ್ರ

Leave a Reply

Your email address will not be published. Required fields are marked *

Scan the code