KSRTC ಬಸ್ ಚಾಲಕ ನಿಸಾರ್ ಅಹ್ಮದ್ ಇವರಿಗೆ ಸೊರಬದ ದೊಡ್ಡಮನೆ ರಾವಪ್ಪ ಶ್ರೀಧರ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ.
(SHIVAMOGA): ಸೊರಬದಿಂದ ಸಾಗರ ಕಾಲೇಜಿಗೆ KSRTC ಬಸ್ ನಲ್ಲಿ ಸಂಚರಿಸುವಾಗ ಚಲಿಸುವ ಬಸ್ ನಲ್ಲಿ ಡೋರ್ ಪಕ್ಕದಲ್ಲಿ ತಲೆ ಸುತ್ತಿ ಕುಸಿದು ಕೆಳಗೆ ಬೀಳುತ್ತಿರುವ ವಿದ್ಯಾರ್ಥಿನಿ ಇವರನ್ನು ಗಮನಿಸಿ ಚಾಲಕ ನಿಸಾರ್ ಅಹಮದ್ ಮತ್ತು ಕಂಡಕ್ಟರ್ ಶಿವಯೋಗಿ ಸಮಯಪ್ರಜ್ಞೆಯಿಂದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ, ಚಾಲಕ ನಿಸಾರ್ ಅಹಮದ್ ಇವರನ್ನು ಸೊರಬ ತಾಲೂಕು ಸಮಸ್ತ ಸಾರ್ವಜನಿಕರ ಪರವಾಗಿ
ಇಂದು ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ಮತ್ತು ಜೆಸಿಐ ಸೊರಬ ಸಿಂಧೂರ ವತಿಯಿಂದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು,
ದೊಡ್ಮನೆ ರಾಮಪ್ಪ ಶ್ರೀಧರ ಸೇವಾ ಟ್ರಸ್ಟ್ ಅಧ್ಯಕ್ಷರು ಪ್ರಶಾಂತ್ ದೊಡ್ಡಮನೆ, ಮೆಹಬೂಬ್ ಬಾಷಾ, ಪರಮೇಶ್ವರಪ್ಪ, ಆರಿಫ್ ಅಹಮದ್, ಇಬ್ರಾಹಿಂ, ಆಟೋ ಚಾಲಕ ಸಂಘದ ಬಂಗಾರಪ್ಪ ಹಲವರು ಉಪಸ್ಥಿತರಿದ್ದರು,
ಈ ಇಬ್ಬರು ಚಾಲಕ ಮತ್ತು ನಿರ್ವಾಹಕರಿಗೆ
ಸಮಸ್ತ ಸಾರ್ವಜನಿಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ