ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಕುಕ್ಕೆ
(DAKSHINAKANNADA): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು, ಕುಕ್ಕೆ ಸುಬ್ರಮಣ್ಯ ದೇವಾಲಯ ರಾಜ್ಯದ ಮುಜರಾಯಿ ದೇವಾಲಯಗಳ ಪೈಕಿ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯವು ಹೆಚ್ಚಾಗಿದ್ದು ಶ್ರೀಮಂತ ದೇವಾಲಯಗಳಲ್ಲಿ ನಂಬರ್ ಒನ್ ದೇವಾಲಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಸಿದ್ಧ ನಾಗರಾಧನೆಯ ಸನ್ನಿಧಿ ಕೆ ಸುಬ್ರಹ್ಮಣ್ಯ ದೇವತೆಯು ಮೊದಲನೇ ಸ್ಥಾನವನ್ನು ಪಡೆದಿದೆ ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯವಿದ್ದು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 146.01 ಕೋಟಿ, ಮೂಕಾಂಬಿಕಾ ದೇವಾಲಯ 68.23 ಕೋಟಿ, ಶ್ರೀಕಂಠೇಶ್ವರ ದೇವಾಲಯ ನಂಜನಗೂಡು 30.73 ಕೋಟಿ, ರೇಣುಕಾ ಯಲ್ಲಮ್ಮ ದೇವಾಲಯ ಸವದತ್ತಿ 25.80 ಕೋಟಿ, ದುರ್ಗಪರಮೇಶ್ವರಿ ದೇವಾಲಯ ಮಂದಾರ್ತಿ 15.27 ಕೋಟಿ, ಹುಲಿಗಮ್ಮ ದೇವಾಲಯ ಕೊಪ್ಪಳ 16.29 ಕೋಟಿ, ಘಾಟಿ ಸುಬ್ರಹ್ಮಣ್ಯ ದೇವಾಲಯ ದೊಡ್ಡಬಳ್ಳಾಪುರ 13.65 ಕೋಟಿ, ಬನಶಂಕರಿ ದೇವಾಲಯ ಬೆಂಗಳೂರು 11.37 ಕೋಟಿ.
ಭಕ್ತಾದಿಗಳು ಹೆಚ್ಚಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವಾಲಯದ ಆದಾಯವನ್ನು ಹೆಚ್ಚಿಸಿದ್ದಾರೆ.