ವಿದ್ಯುತ್ ಸರಿ ಮಾಡಲು ಕಂಬ ಹತ್ತಿದ ಲೈನ್ ಮ್ಯಾನ್ ! ಕಂಬದಲ್ಲೇ ಉಸಿರು ಚೆಲ್ಲಿದ ಲೈನ್ ಮ್ಯಾನ್
(ಶಿವಮೊಗ್ಗ): ವಿದ್ಯುತ್ ರಿಪೇರಿ ಕೆಲಸದ ಸಂದರ್ಭ ವಿದ್ಯುತ್ ಶಾಕ್‌ಗೆ ಒಳಗಾಗಿ ಲೈನ್ ಮ್ಯಾನ್ ಕೊನೆ ಉಸಿರೆಳಿದಿದ್ದಾರೆ.
ಬೆಂಗಳೂರು ಮೂಲದ ಕಿರಣ್ (25) ಅವರಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟವರು. ಮತ್ತೊಬ್ಬ ಸಿಬ್ಬಂದಿ ಸುನಿಲ್ ಎಂಬುವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಣ್ ಅವರನ್ನು ಕಂಬದಿಂದ ಇಳಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಆಂಬುಲೆನ್ಸ್ ನಲ್ಲಿ ಕೊನೆ ಉಸಿರೆಳಿದಿದ್ದಾರೆ.
ಮೆಸ್ಕಾಂ ಅಧಿಕಾರಿಗಳು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಘಟನೆ ಕಂಡು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಆಘಾತಕ್ಕೆ ಒಳಗಾಗಿದ್ದಾರೆ.