ಕೋಲಾರನ್ಯೂಸ್

ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಲಾವಣ್ಯ ಎಸ್ ಆಯ್ಕೆ.

ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಲಾವಣ್ಯ ಎಸ್ ಆಯ್ಕೆ.

(KOLARA): ಕೋಲಾರ  : ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನರಸಾಪುರ ಗ್ರಾಮದ ಸೂರ್ಯ ವಿದ್ಯಾನಿಕೇತನ ಸಂಸ್ಥೆಯ ಲಾವಣ್ಯ ಎಸ್ ಎಂಬ ವಿದ್ಯಾರ್ಥಿಯು ಡಿಸ್ಕಸ್ ಥ್ರೋ  ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ,

ಈ ವಿದ್ಯಾರ್ಥಿನಿಯು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ  ವಿದ್ಯಾರ್ಥಿನಿಯನ್ನು  ಪೋಷಕರಾದ ಸತೀಶ್ ಮತ್ತು ಲಕ್ಷ್ಮಿ ದೇವಿ, ಶಾಲೆಯ ದೈಹಿಕ ಶಿಕ್ಷಕಿಯಾದ ನೇತ್ರಾವತಿ, ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ರಾಜಣ್ಣ, ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಮತ್ತು  ಶಾಲಾ ಶಿಕ್ಷಕರಿಂದ ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code