ಸೊರಬ ಆಟೋ ಚಾಲಕರಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
(SHIVAMOGA): ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದ ಬಸ್ ಸ್ಟ್ಯಾಂಡ್ ಆವರಣದಲ್ಲಿ ಇರುವ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಇಂದು ಬೆಳಿಗ್ಗೆ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಆಟೋಗಳ ಮೇಲೆ ಕನ್ನಡ ನಾಡಿನ ಧ್ವಜದ ಹಾರಾಟ, ಆಟೋ ಸ್ಟ್ಯಾಂಡ್ ಒಳಗಡೆ ಹೆಮ್ಮೆಯ ಕವಿಗಳ ಹಾಗೂ ಹೋರಾಟಗಾರರ ಪರಿಚಯದ ಭಾವಚಿತ್ರಗಳು ಮನಸೆಳೆದವು.
ಕಾರ್ಯಕ್ರಮದ ಧ್ವಜಾರೋಹಣ ಮಾಡಿದ ಹಿರಿಯವಕೀಲ ವೈ ಜಿ. ಪುಟ್ಟಸ್ವಾಮಿ ಮಾತನಾಡಿ, ನಾಡು ನುಡಿಗಾಗಿ ಹಲವಾರು ಮಹನೀಯರು ಹೋರಾಟಗಳನ್ನು ಮಾಡಿದ್ದಾರೆ. ಕನ್ನಡದ ಅಸ್ತಿತ್ವಕ್ಕಾಗಿ ನಾವು ಈಗ ಹೋರಾಡಬೇಕಾಗಿದೆ. ಕಾರಣ ಅಂದಿನ ಮುಖ್ಯಮಂತ್ರಿ ಒಬ್ಬರು ಯಾರದೋ ಒಂದು ಒತ್ತಡಕ್ಕೆ ಮಣಿದು ಸಂಸ್ಕೃತ ಭಾಷೆಯನ್ನು ಮೊದಲ ಭಾಷೆಯನ್ನಾಗಿ ಮಾಡಲಿಕ್ಕೆ ಮುಂದಾಗಿದ್ದರು. ಅವರ ವಿರುದ್ಧ ದಂಗೆದ್ದಿದ್ದೇ ಗೋಕಾಕ್ ಚಳುವಳಿ.
ಒಂದು ಭಾಷೆಗಾಗಿ ಸ್ವತಂತ್ರ ಸಂಗ್ರಾಮ ಬಿಟ್ಟರೆ, ಡಾ.ರಾಜಕುಮಾರ್ ಅವರ ನೇತೃತ್ವದಲ್ಲಿ ಗೋಕಾಕ್ ಚಳುವಳಿ.
ಒಂದು ಭಾಷೆಗೆ ತಾಕತ್ತಿರುವಂಥದ್ದು ಆ ಗೋಕಾಕ್ ಚಳುವಳಿ ನಮಗೆ ನೆನಪಿಸಿಕೊಡುತ್ತದೆ.
ಆದ್ದರಿಂದ ನಾವು ಮೊದಲು ನಮ್ಮ ನಾಡನ್ನು ಗೌರಿಸಬೇಕು ನಾವು ಗೌರವಿಸಿದರೆ ಇತರೆ ರಾಜ್ಯದಿಂದ ಬಂದವರು ಕೂಡ ನಮ್ಮ ನಾಡನ್ನು ಗೌರವಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಆಟೋ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು.
ವರದಿ: ಸಂದೀಪ ಯು.ಎಲ್ ಸೊರಬ