ಕೋಲಾರನ್ಯೂಸ್

ಸಾಮಾಜಿಕ ಕ್ರಾಂತಿ ಮತ್ತು ಧಾರ್ಮಿಕ ಕ್ರಾಂತಿಯ ನೇತಾರ, ಬಸವಣ್ಣ: ಬಿಇಓ ಸುಕನ್ಯಾ

ಸಾಮಾಜಿಕ ಕ್ರಾಂತಿ ಮತ್ತು ಧಾರ್ಮಿಕ ಕ್ರಾಂತಿಯ ನೇತಾರ, ಬಸವಣ್ಣ: ಬಿಇಓ ಸುಕನ್ಯಾ

(KOLARA): 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿ ಮತ್ತು ಧಾರ್ಮಿಕ ಕ್ರಾಂತಿಯ ನೇತಾರರಾಗಿ ಸಮಾಜದಲ್ಲಿ ಬಲವಾಗಿ ನಾಟಿದ್ದ ಜಾತೀಯತೆ, ಧರ್ಮಾಂಧತೆಯನ್ನು ಹೋಗಲಾಡಿಸಿ ಪರಸ್ಪರ ಪ್ರೀತಿ, ಸ್ನೇಹ, ಸಹಕಾರ ಮನೋಭಾವನೆಗಳಿಂದ ಕೂಡಿದ ಸಮ ಸಮಾಜದ ನಿರ್ಮಾಣಕ್ಕೆ ಬಸವಣ್ಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಅಭಿಪ್ರಾಯಪಟ್ಟರು.

ಬಂಗಾರಪೇಟೆ: ಪಟ್ಟಣದ ತಾಲ್ಲೂಕು ಆಡಳಿತ ಕಛೇರಿಯಲ್ಲಿ ಆಯೋಜಿಸಲಾಗಿದ್ದ, ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಣ್ಣನವರು ಕ್ರಿಸ್ತಶಕ 1131ರಲ್ಲಿ ಬಿಜಾಪುರ ಬಜಿಲೆಯ ಜಿಲ್ಲೆಯ ಬಾಗೇವಾಡಿ ಎಂಬ ಅಗ್ರಹಾರದಲ್ಲಿ ಜನಿಸಿದರು. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ತಂದೆತಾಯಿಗಳು ಮಗುವಿಗೆ ಜಾತಕರ್ಮವನ್ನು ಆಚರಿಸಿ ಬಸವ ಎಂದು ನಾಮಕರಣ ಮಾಡಿದರು. ಮುಂದೆ ಬಸವಣ್ಣನವರು ಶಿವಭಕ್ತರಾದರು. ಬಸವಣ್ಣನವರು ಶುದ್ಧ- ಪರಿಶುದ್ಧ ಮನುಷ್ಯರಾಗಿ ಹುಟ್ಟಿ, ಮನುಷ್ಯತ್ವ ಗುಣಗಳ ಜೊತೆಗೆ ದೈವತ್ವ ಗುಣ ಗಳನ್ನು ಮೈಗೂಡಿಸಿಕೊಂಡು ದೇವರಾದರು. ಅವರ ಸಾಧನೆ ಅದ್ಭುತ- ಅತ್ಯದ್ಭುತ ಹಾಗೂ ಅಪರೂಪ. ಇವರ ಕ್ರಾಂತಿಯ ಸ್ವರೂಪ ವಿಸ್ಮಯ, ಪವಾಡ ಹಾಗೂ ಅಗೋಚರ. ಸರ್ವಸಮಾನತೆಯ ಸಮಾಜ ರಚನೆಗೆ ಶ್ರಮಿಸಿದ ಕಾರಣ ಮನುಕುಲದ ಉದ್ಧಾರಕರಾದರು. ಬಸವಣ್ಣನವರು ಜಾತಿ, ಧರ್ಮ, ಕಾಲ-ದೇಶ ಮೀರಿ ಬದುಕಿದ ಜೀವ, ವಿಶ್ವಗುರು ಬಸವಣ್ಣರವರ ಸಾಧನೆ ವರ್ಣಿಸಲು ಸಾಧ್ಯವಿಲ್ಲ. ಅವರ ಐದು ಸಾವಿರ ವಚನಗಳು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಪರಂಪರೆಗೆ ಮಹತ್ವ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಶ್ಮಿ, ಕೃಷಿ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಪುರಸಭೆ ಆರೋಗ್ಯ ನಿರೀಕ್ಷಕ ಗೋವಿಂದರಾಜು, ಸಮುದಾಯ ಮುಖಂಡ ರವಿ, ರಾಜಸ್ವ ನಿರೀಕ್ಷಕ ಅಜಯ್, ಕಾರ್ಯದರ್ಶಿ ಚೇತನ್, ಉಪ ತಹಸೀಲ್ದಾರ್ ಪ್ರಭಾಕರ್ ಇನ್ನಿತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code