ಕ್ರೈಂ ನ್ಯೂಸ್ನ್ಯೂಸ್ಶಿವಮೊಗ್ಗ

ಐಷಾರಾಮಿ ಕಾರಿನಲ್ಲಿ ಗೋಕಳ್ಳತನ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗೋಕಳ್ಳರು.

ಐಷಾರಾಮಿ ಕಾರಿನಲ್ಲಿ ಗೋಕಳ್ಳತನ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗೋಕಳ್ಳರು.

(SHIVAMOGA): ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಶನಿವಾರ ರಾತ್ರಿ ಐಷಾರಾಮಿ ಕಾರಿನಲ್ಲಿ ಮಾಸ್ಕ್ ಧರಿಸಿ ಬಂದ ಗೋ ಕಳ್ಳರು ಮನೆ ಮುಂದಿದ್ದ ಗೋವನ್ನು ಕದ್ದುಯ್ದಿದ್ದಾರೆ. ಗೋವನ್ನು ಕಳ್ಳತನ ಮಾಡಿರುವ ದೃಶ್ಯವೂ ಮನೆ ಹೊಂದಿದ್ದ ಸಿಸಿಟಿವಿಯಲ್ಲಿ ದೃಶ್ಯ ಸಿಕ್ಕಿದೆ.


ಶನಿವಾರ ಸಂಜೆ 5:00 ಗಂಟೆ ಯಿಂದ ಪುರಸಭಾ ಸದಸ್ಯ ಪ್ರಸನ್ನಕುಮಾರ್ ದೊಡ್ಡಮನೆ ಎದುರುಗಡೆ ಮಲಗಿದ್ದ ಗರ್ಭಾವಸ್ಥೆ ಇದ್ದ ಆಕಳು  12.25ಕ್ಕೆ ಐದು ಆರು ಜನ ಫಾರ್ಚುನರ್ ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ಆಕಳನ್ನು ಕಳ್ಳತನ ಮಾಡಿ ಗಾಡಿಯಲ್ಲಿ ತುಂಬಿಸುವುದು ನೋಡಿದ ಸಾರ್ವಜನಿಕರು ಕೂಡಲೇ ಅವರನ್ನು ಹಿಂಬಾಲಿಸಿಕೊಂಡು ಹೋದಾಗ ಕಾನಕೇರಿ ಯಲ್ಲಿ ಕೂಡ ಇದೇ ರೀತಿ ಮಾಡುತ್ತಿರುವುದು ಹಾಗೂ ಸೊರಬದ ರಂಗನಾಥ ದೇವಸ್ಥಾನದ ಎದುರುಗಡೆ ಗಾಡಿಯನ್ನು ಅಡ್ಡ ಗಟ್ಟಲು ಪ್ರಯತ್ನಿಸಿದಾಗ ಗಾಡಿಯನ್ನು ಮೈ ಮೇಲೆ ಹತ್ತಿಸಲು ಪ್ರಯತ್ನಿಸಿ ಕಳ್ಳರು ಪರಾರಿ ಯಾಗಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ವರದಿ: ಸಂದೀಪ್ ಯು ಎಲ್ ಸೊರಬ

Leave a Reply

Your email address will not be published. Required fields are marked *

Scan the code