ಶಿವಮೊಗ್ಗ

ಮಲೆನಾಡು ಅಡಕೆ ಮಾರಾಟ ಸಹಕಾರ ಮಂಡಳಿ ನೂತನ ಆಡಳಿತಕ್ಕೆ ಶೇ. 65ರಷ್ಟು ಶಾಂತಿಯುತ ಮತದಾನ.

ಮಲೆನಾಡು ಅಡಕೆ ಮಾರಾಟ ಸಹಕಾರ ಮಂಡಳಿ ನೂತನ ಆಡಳಿತಕ್ಕೆ ಶೇ. 65ರಷ್ಟು ಶಾಂತಿಯುತ ಮತದಾನ.

(SHIVAMOGA): ಸಾಗರ: ಮಲೆನಾಡು ಅಡಕೆ ಮಾರಾಟ ಸಹಕಾರ ಮಂಡಳಿ ನೂತನ ಆಡಳಿತ ಮಂಡಳಿಗೆ ಮಂಗಳವಾರ ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಶಾಂತಿಯುವಾಗಿ ಶೇ. 65ರಷ್ಟು ಮತದಾನವಾಗಿದೆ. ಸಾಗರ, ಸೊರಬ, ಶಿಕಾರಿಪುರ ತಾಲೂಕು ವ್ಯಾಪ್ತಿಯ ಷೇರುದಾರ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.
ಮಂಗಳವಾರ ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೆ ಚುನಾವಣೆ ನಡೆಯಿತು. ಮೂರು ತಾಲೂಕಿನ ಒಟ್ಟು 3201  ಸದಸ್ಯರಲ್ಲಿ  2007 ಜನರು ಒಟ್ಟು 39 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇದರಲ್ಲಿ ಸಾಗರ ವ್ಯಾಪ್ತಿಯ 1672, ಸೊರಬದ 919 ಹಾಗೂ ಶಿಕಾರಿಪುರದ ತಾಲೂಕಿನ 710 ಮತದಾರರಿದ್ದಾರೆ. ಮೂರು ತಾಲೂಕಿನಿಂದ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮ್ಯಾಮ್‌ಕೋಸ್‌ನಲ್ಲಿ ಷೇರು ಹೊಂದಿರುವ 6644 ಸದಸ್ಯರು ತಮಗೆ ಮತದಾನದ ಅವಕಾಶ ನೀಡಿಲ್ಲವೆಂದು ಸೋಮವಾರ ಕೋರ್ಟ್ ಮೆಟ್ಟಿಲೇರಿ ಮಂಗಳವಾರ ನಡೆದ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅನುಮತಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೂರು ತಾಲೂಕಿನ 846 ಮತದಾರರಿಗೆ ಅವರಿಗಾಗಿ ಪ್ರತ್ಯೇಕ ಬೂತ್ ಸ್ಥಾಪಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಗಿತ್ತು.


ಕ್ಷೇತ್ರ ಮತಗಟ್ಟೆ ಅರ್ಹ ಮತದಾರರು ಕೋರ್ಟ್ನಿಂದ ಅನುಮತಿ ತಂದ ಮತದಾರರು ಆಗಿರುವ ಮತ
ಸಾಗರ 7 1159 513 966 (57%)

ಸೊರಬ 4 632 287 514 (55%) 
ಶಿಕಾರಿಪುರ 3 584 046 527 (83%)

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code