ನಾಡಿನ ಜನತೆಗೆ ವಿನಾಯಕನ ಕೃಪೆಯಿಂದ ಆಯುಷ್ ಆರೋಗ್ಯ, ಐಶ್ವರ್ಯ ಉಂಟು ಮಾಡಲಿ,
(KOLARA): ಬಂಗಾರಪೇಟೆ : ನಾಡಿನ ಜನತೆಗೆ ವಿನಾಯಕನ ಕೃಪೆಯಿಂದ ಆಯುಷ್ ಆರೋಗ್ಯ,ಐಶ್ವರ್ಯ ಉಂಟು ಮಾಡಲಿ,ಸರ್ವರಿಗೂ ಸಹ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಶಾಸಕರಾದ ಹಾಗೂ ಕರ್ನಾಟಕ ನಗರ ಮೂಲ ಅಭಿವೃದ್ಧಿ ಹಣಕಾಸು ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್ ಎನ್ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಗಾಂಧಿನಗರ ಹಾಗೂ ನಂದಿ ಮೆಡಿಕಲ್ ವೃತ್ತದಲ್ಲಿ ವಿನಾಯಕ ಮಿತ್ರ ಮಂಡಳಿ ಮತ್ತು ವರ್ತಕರ ಸಂಘದಿಂದ ಹಮ್ಮಿಕೊಂಡಿದ್ದ ವಿನಾಯಕನ ಪೂಜಾ ಕಾರ್ಯಕ್ರಮಗಳಿಗೆ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಇಲ್ಲಿನ ಯುವಕರು ಹಾಗೂ ಹಿರಿಯರು ಸಂಪ್ರದಾಯದಂತೆ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಯಾವುದೇ ವ್ಯಕ್ತಿಯಿಂದಾಗಲಿ ಶಕ್ತಿಯಿಂದಾಗಲಿ ತೊಂದರೆಯಾದಾಗ ಆ ಭಗವಂತ ವಿನಾಯಕ ಕಾಪಾಡುತ್ತಾನೆ, ಎಲ್ಲರೂ ಆ ಭಗವಂತನ ಮೇಲೆ ನಂಬಿಕೆ ಇಡಬೇಕು, ಮುಂದಿನ ವರ್ಷ ಇನ್ನೂ ವಿಜೃಂಭಣೆಯಿಂದ ಮಾಡಬೇಕೆಂದು ತಿಳಿಸಿದರು, ಮುಂದಿನ ವರ್ಷದ ಮೂರು ದಿನಗಳ ಸಂಸ್ಕೃತಿಕ ಕಾರ್ಯಕ್ರಮಕ್ಕೆ ನಾನೇ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದರು.
ನಾನು ಸದಾ ನಗರವನ್ನು ಅಭಿವೃದ್ಧಿ ಮಾಡಲು ಸಹಕರಿಸುತ್ತೇನೆ, ನೂತನವಾಗಿ ಆಯ್ಕೆಗೊಂಡಿರುವ ಪುರಸಭೆಯ ಅಧ್ಯಕ್ಷ ಗೋವಿಂದರವರು ಈ ನಗರವನ್ನು ಮತ್ತಷ್ಟು ಹೆಚ್ಚು ಅಭಿವೃದ್ಧಿಪಡಿಸುವಲ್ಲಿ ಸಮವಹಿಸಬೇಕು ಎಂದುರು. ಇತಿಹಾಸದಲ್ಲಿ ಯರಗೋಲ ನೀರನ್ನು ಈ ನಗರಕ್ಕೆ ತಂದುಕೊಟ್ಟು ಜನರಿಗೆ ನೀರಿನ ಅಭಾವ ಬರದಂತೆ ನೋಡಿಕೊಳ್ಳುತ್ತಿದ್ದೇವೆ, ಚುನಾವಣೆ ಬಂದ ಸಮಯದಲ್ಲಿ ಮಾತ್ರ ರಾಜಕೀಯ,ನಂತರ ನಾವೆಲ್ಲರೂ ಒಂದೇ ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಕಡೆ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಎಸ್ ವೆಂಕಟೇಶ,ರಾಕೇಶ್ ಗೌಡ, ಶಫಿ, ಸುಹೇಲ್, ನಗರ ಬ್ಲಾಕ್ ಅಧ್ಯಕ್ಷ ಚಂದು ಕುಮಾರ್,ಮಾಜಿ ಸದಸ್ಯ ಬಿ ಸಿ ಮೂರ್ತಿ ಮುಖಂಡರಾದ ಕಿಟ್ಟಣ್ಣ ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ