ಕೋಳಿ ಮಾಂಸ ಖರೀದಿಗೆ ಮುಗಿಬಿದ್ದ ಮಾಂಸ ಪ್ರಿಯರು
(KOLARA): ಬಂಗಾರಪೇಟೆ: ಯುಗಾದಿ ಹಬ್ಬದ ಮಾರನೇ ದಿನ ಹೊಸ ತೊಡಕು ಆಚರಿಸಲಾಗುತ್ತದೆ. ಹೀಗಾಗಿ, ಕೋಲಾರಜಿಲ್ಲೆ ಬಂಗಾರಪೇಟೆ ಮಟನ್ ಸ್ಟಾಲ್ ಎದುರು ಬುಧವಾರ ಬೆಳ್ಳಂಬೆಳಗ್ಗೆ 8:00ಯಲ್ಲಿ ನೂರಾರು ಜನರು ಜಮಾಯಿಸಿದ್ದರು.
ಸುಡುತ್ತಿರುವ ಬಿಸಿಲಿನ ನಡುವೆಯೂ ಯುಗಾದಿ ಹಬ್ಬದ ಹೊಸ ತೊಡಕು ಸಂಭ್ರಮದಿಂದ ನಡೆದಿದೆ. ಇಂದು ಹೊಸ ತೊಡಕಿಗೆ ಗ್ರಾಹಕರು ಮಟನ್, ಚಿಕನ್ ಸ್ಟಾಲ್ಗಳ ಮುಂದೆ ಸರತಿ ಸಾಲಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. ಯುಗಾದಿ ಹಬ್ಬದ ಮಾರನೇ ದಿನ ಮಾಂಸಹಾರ ಸೇವಿಸುವವರು ಭರ್ಜರಿ ಅಡುಗೆ ಮಾಡಿ ಊಟ ಸವಿಯುತ್ತಾರೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ವರ್ಷ ತೊಡಕು ಆಚರಣೆಯ ನಡೆಯುತ್ತಿದೆ. ವರ್ಷದ ತೊಡಕು ದಿನ ಮಾಂಸದೂಟ ತಯಾರಿಸಲಾಗುತ್ತದೆ. ಕಾಲ ಬದಲಾದಂತೆ ಹಳೇ ಸಂಪ್ರದಾಯಗಳಲ್ಲಿಯೂ ಬದಲಾವಣೆ ಕಂಡು ಬಂದಿದೆ. ಮಟನ್ ಕೈಮಾ, ಕರಿ , ಚಾಪ್ಸ್, ಚಿಕನ್ ಕಬಾಬ್, ಚಿಲ್ಲಿ ಚಿಕನ್, ಚಿಕನ್ ಕೈಮಾ ಈ ರೀತಿಯಾದ ಇಷ್ಟವಾದ ಮಾಂಸಾಹಾರ ಪದಾರ್ಥಗಳನ್ನು ಮಾಡಿ ಸವಿದು ಸಂಭ್ರಮಿಸುತ್ತಾರೆ.
ಯುಗಾದಿ ಹಬ್ಬದ ಮರುದಿನ ಮಾಂಸಾಹಾರದ ಊಟ ಸಾಂಪ್ರದಾಯಿಕವಾಗಿ ಮೊದಲಿನಿಂದಲೂ ಬಂದಂಥದ್ದು, ಈಗಲೂ ಕೂಡಾ ಈ ಪದ್ಧತಿ ರೂಢಿಯಲ್ಲಿದೆ. ಹಬ್ಬದ ಮಾರನೇ ದಿನ ಮನೆಯವರೆಲ್ಲ ಸೇರಿ ನಮಗಿಷ್ಟದ ಪದಾರ್ಥವನ್ನು ಸಿದ್ಧಪಡಿಸಿಕೊಂಡು ಜತೆ ಕೂತು ಸಂಭ್ರಮದಿಂದ ಊಟ ಮಾಡುವುದರಿಂದ ವರ್ಷ ಪೂರ್ತಿ ಇದೇ ಸಂಭ್ರಮ ನಮ್ಮ ಜೀವನದಲ್ಲಿ ಇರುತ್ತದೆ ಎಂದು ಹಳ್ಳಿಯ ಜನರು ನಂಬಿದ್ದಾರೆ. ಜೊತೆಗೆ ಆಚರಣೆಯಲ್ಲಿ ಸಂಪ್ರದಾಯವನ್ನು ಪಾಲಿಸುತ್ತಾ ಬರುತ್ತಿದ್ದಾರೆ.
ವರದಿ: ವಿಷ್ಣು ಕೋಲಾರ