ನೂತನ ಛಾಯಾ ಭವನ ಉದ್ಘಾಟಿಸಿದ ಶಾಸಕ ಎಸ್ಎನ್ ನಾರಾಯಣಸ್ವಾಮಿ
(KOLARA): ಬಂಗಾರಪೇಟೆ :ಭವಿಷ್ಯದ ಪೀಳಿಗೆಗೆ ಒಪ್ಪಿಕೊಳ್ಳಲು ಹಿಂದಿನ ಘಟನೆಗಳನ್ನು ಸೆರೆಹಿಡಿಯುವಲ್ಲಿ ಛಾಯಾಗ್ರಹಣವು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಶಾಸಕರು ಹಾಗೂ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ ಮಂಡಳಿಯ ಅಧ್ಯಕ್ಷರಾದ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಅಬ್ದುಲ್ ವಹಾಬ್ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿರುವ ಛಾಯಾ ಭವನ ಸಮಾರಂಭ ಹಾಗೂ 185ನೇ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ,ಸುಮಾರು 100 ವರ್ಷಗಳಿಗೂ ಅಧಿಕ ಕಾಲದಿಂದ ಅಸ್ತಿತ್ವದಲ್ಲಿರುವ ಛಾಯಾಗ್ರಹಣ ಕಲೆಯು ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಕ್ಯಾಮೆರಾ ಇಲ್ಲದಿದ್ದರೆ ಎಷ್ಟೋ ಬಹುಮುಖ್ಯ ಕ್ಷಣಗಳು ದಾಖಲಾಗುತ್ತಲೇ ಇರಲಿಲ್ಲ ಎಂದರು.
ಭವಿಷ್ಯದ ಪೀಳಿಗೆಗೆ ಒಪ್ಪಿಕೊಳ್ಳಲು ಹಿಂದಿನ ಘಟನೆಗಳನ್ನು ಸೆರೆಹಿಡಿಯುವಲ್ಲಿ ಛಾಯಾಗ್ರಹಣವು ಮಹತ್ವದ ಪಾತ್ರವನ್ನು ವಹಿಸಿದೆ. ಅಂದಿನ ದಿನಮಾನಗಳಲ್ಲಿ ಫೋಟೋಗ್ರಾಫರ್ ಗೆ ಜೀವನ ಮಾಡಲು ಬಹಳ ಕಷ್ಟಕರವಾಗಿತ್ತು, ಏಕೆಂದರೆ ಆ ಕಾಲದಲ್ಲಿ ಫೋಟೋಗ್ರಾಫರ್ ಎಂದರೆ ಕೇವಲ ಮದುವೆ ಸಮಾರಂಭಗಳಿಗೆ ಮತ್ತು ಕೆಲವೊಂದು ಕಾರ್ಯಕ್ರಮಗಳಲ್ಲಿ ಮಾತ್ರ ಅವಶ್ಯಕತೆಯಾಗಿತ್ತು ಅಂತಹ ಕಷ್ಟ ಕಾಲದಲ್ಲೂ ಸಹ ವೃತ್ತಿಯನ್ನು ಬಿಡದೆ ಜೀವನವನ್ನು ಮಾಡಿದ್ದಾರೆ ಅಂಥವರ ಸಾಧನೆಗೆ ನನ್ನ ಅನಂತ ಅನಂತ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಇಂದು ಎಲ್ಲರೂ ಒಗ್ಗಟ್ಟಾಗಿ ಈ ಒಂದು ಸಂಘವನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ, ಸಂಘ ಇಲ್ಲ ಎಂದರೆ ನಾವು ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ,ಇದು ಎಲ್ಲರೂ ಒಗ್ಗಟ್ಟಾಗಿ ಇರೋದಿಂದಲೇ ಏನು ಬೇಕಾದರೂ ಮಾಡಲು ಸಾಧ್ಯವಾಗುತ್ತದೆ. ನಾನು ಈ ಕಟ್ಟಡದ ಮೇಲೆ ಎರಡು ಕೊಠಡಿಗಳನ್ನು ನಿರ್ಮಾಣ ಮಾಡಲು ನನ್ನ ಅನುದಾನದಿಂದ 2.5 ಲಕ್ಷ ರೂಪಾಯಿ ಗಳನ್ನು ನೀಡುತ್ತೇನೆ ಹಾಗೂ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ವ್ಯವಸ್ಥೆಯನ್ನು ಸಹ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎಂಜಿ ಗೋವಿಂದ, ಸದಸ್ಯರಾದ ಎಸ್ ವೆಂಕಟೇಶ್, ಆರೋಗ್ಯರಾಜನ್, ಕೋಲಾರ ಜಿಲ್ಲಾ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ವಿ ಕೃಷ್ಣ, ತಾಲೂಕು ಸಂಸ್ಥಾಪಕ ಅಧ್ಯಕ್ಷ ಬಿಸಿ ಶ್ರೀನಿವಾಸ್ ಮೂರ್ತಿ, ತಾಲೂಕು ಅಧ್ಯಕ್ಷ ಶ್ರೀನಿವಾಸ್ ರಾವ್, ಇನ್ಸ್ಪೆಕ್ಟರ್ ನಂಜಪ್ಪ, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಹಾಗೂ ಸಂಘದ ಸದಸ್ಯರು, ಮುಖಂಡರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ