ದೇಶನ್ಯೂಸ್

‘ನನ್ನ ಅಪ್ಪನೇ ನನ್ನ ಭವಿಷ್ಯ’, ಅಪ್ಪನ ಮೇಲಿನ ಪ್ರೀತಿಗೆ ತನ್ನ ಲಿವರನ್ನೇ ಕೊಟ್ಟಳು

‘ನನ್ನ ಅಪ್ಪನೇ ನನ್ನ ಭವಿಷ್ಯ’, ಅಪ್ಪನ ಮೇಲಿನ ಪ್ರೀತಿಗೆ ತನ್ನ ಲಿವರನ್ನೇ ಕೊಟ್ಟಳು

ತಂದೆಗೆ ಲಿವರ್ ದಾನ ; ‘ನಿನ್ನ ಪಾದ ಸ್ಪರ್ಶಿಸಬೇಕು ಮಗಳೇ’ ನೋಡು ಅವಸರಿಸಬೇಡ, ನಿನ್ನ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತದೆ ಎಂದು ಸಂಬಂಧಿಕರೆಲ್ಲ ಎಚ್ಚರಿಸಿದರು ತಡೆದರು. ಆದರೆ, ನನ್ನ ಅಪ್ಪನೇ ನನಗೆ ಭವಿಷ್ಯ ಅವರಿಗಾಗಿ ನಾನು ಏನೂ ಮಾಡಬಲ್ಲೆ. ನನ್ನನ್ನು ಯಾರೂ ತಡೆಯಬೇಡಿ ಎಂದೆ. ಆ ಪ್ರಕಾರ ಅಪ್ಪನಿಗೆ ಲಿವರ್ ದಾನ ಮಾಡಿದೆ. ಇದೀಗ ಒಂದು ವರ್ಷವಾಯಿತು, ಇಬ್ಬರೂ ಕ್ಷೇಮವಾಗಿದ್ದೇವೆ’ ಸಾಕ್ಷಿ ತ್ಯಾಗಿ. ನನ್ನ ತಂದೆಗೆ ಮೂರು ವರ್ಷಗಳ ಹಿಂದೆ ಮಲಬದ್ಧತೆ ಸಮಸ್ಯೆ ಉಂಟಾಯಿತು.

ಜಾಹೀರಾತು/Advertisement

ಆಗ ತಂದೆ, ಏನಾಗಿಲ್ಲ ಎಲ್ಲವೂ ಸರಿ ಹೋಗುತ್ತದೆ ಎಂದರು. 2022ರಲ್ಲಿ ಲಿವರ್ ಸಿರೋಸಿಸ್ ಕೊನೆಯ ಹಂತದಲ್ಲಿದೆ ಎನ್ನುವುದು ಪತ್ತೆಯಾಯಿತು. ಆಗ ಲಿವರ್ ಟ್ರಾನ್ಸ್ಪ್ಲಾಂಟ್ ಮಾಡದಿದ್ದರೆ ಜೀವಕ್ಕೇ ಅಪಾಯ ಎಂದು ವೈದ್ಯರು ಹೇಳಿದರು. ನನ್ನ ತಾಯಿ, ಸೋದರ ಮತ್ತು ನಾನು ಲಿವರ್ ದಾನ ಮಾಡಲು ಮುಂದಾದೆವು. ಆದರೆ ತಾಯಿಯ ಮತ್ತು ಸಹೋದರನ ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ನಿರಾಕರಿಸಿದರು. ಕೊನೆಗೆ ನನ್ನ ಲಿವರ್ ಟ್ರಾನ್ಸ್ಪ್ಲಾಂಟ್ ಮಾಡಲು ಒಪ್ಪಿಗೆ ಸಿಕ್ಕಿತು. ಆದರೆ ಸಂಬಂಧಿಕರೆಲ್ಲ, ಮುಂದೆ ನಿನ್ನ ಭವಿಷ್ಯ ತೊಂದರೆಗೆ ಸಿಲುಕಿಕೊಳ್ಳುತ್ತದೆ ಎಂದರು. ನನ್ನ ಅಪ್ಪನೇ ನನ್ನ ಭವಿಷ್ಯ, ಅವರಿಗಾಗಿ ನಾನು ಏನು ಮಾಡಲೂ ಸಿದ್ಧ ಎಂದೆ.

Leave a Reply

Your email address will not be published. Required fields are marked *

Scan the code