ನ್ಯೂಸ್ಶಿವಮೊಗ್ಗ

ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಿರಿಸ್ಟಿಕಾಸ್ವಾಂಪ್ಸ (ರಾಮಪತ್ರೆ ಜಡ್ಡಿಗಳು) ವಿನಾಶದ ಅಂಚಿಗೆ ಬಂದಿವೆ.

ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಿರಿಸ್ಟಿಕಾಸ್ವಾಂಪ್ಸ (ರಾಮಪತ್ರೆ ಜಡ್ಡಿಗಳು) ವಿನಾಶದ ಅಂಚಿಗೆ ಬಂದಿವೆ.

(SHIVAMOGA): ಸೊರಬ: ಶಿವಮೊಗ್ಗ ಜಿಲ್ಲೆಯ 50 ಹಳ್ಳಿಗಳಲ್ಲಿ ದೇವರ ಕಾನು ಸಂರಕ್ಷಣಾ ಯೋಜನೆ ಜಾರಿ ಮಾಡಲು ಜೀವ ವೈವಿಧ್ಯ ಮಂಡಳಿ ಶಿಫಾರಸು ಮಾಡಬೇಕು. ಸಾಗರ ಅರಣ್ಯ ಇಲಾಖೆ ಮೂಲಕ ಈ ಕಾನು ಅಭಿವೃದ್ಧಿಗೆ ಇಲಾಖೆ ಮುಂದಾಗಬೇಕು. ಅರಣ್ಯ ಇಲಾಖೆ 5 ಕೋಟಿ ರೂ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಬೆಂಗಳೂರು ಮಾನ್ಯ ಸದಸ್ಯ ಕಾರ್ಯದರ್ಶಿ ಜಗತ್ ರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಮಿರಿಸ್ಟಿಕಾಸ್ವಾಂಪ್ಸ (ರಾಮಪತ್ರೆ ಜಡ್ಡಿಗಳು) ವಿನಾಶದ ಅಂಚಿಗೆ ಬಂದಿವೆ. ಸುಮಾರು 110 ಸ್ಥಳಗಳಲ್ಲಿ ಒಟ್ಟೂ 2100 ಎಕ್ರೆ ಪ್ರದೇಶದಲ್ಲಿ ಮಿರಿಸ್ಟಿಕಾಸ್ವಾಂಪ್ಸಗಳಿವೆ. ಇವುಗಳ ಬಗ್ಗೆ ಪಶ್ಚಿಮ ಟ್ಟದ ಅರಣ್ಯ ವಿಭಾಗಗಳ ಕಛೇರಿಗಳಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ. ಅಧ್ಯಯನಗಳೂ ನಡೆದಿವೆ. ಇವುಗಳಿಗೆ ಸಂಪೂರ್ಣ ರಕ್ಷಣೆ ಬೇಲಿ, ಕಂದಕ, ನಾಮಫಲಕ, ಇತ್ಯಾದಿ ಕಾರ್ಯ ಯೋಜನೆ ರೂಪಿಸಿ ಜಾರಿ ಮಾಡಲು ಅರಣ್ಯ ಇಲಾಖೆ ಮುಂದಾಗಬೇಕು. ಜೀವ ವೈವಿಧ್ಯ ಮಂಡಳಿ ಈ ಎಲ್ಲ ಮಿರಿಸ್ಟಿಕಾ ಸ್ವಾಂಪ್ಸ ಸ್ಥಳಗಳನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಘೋಷಣೆ ಮಾಡಬೇಕು.

ಕೋಲಾರದ ಅಂತರಗಂಗೆ ಬೆಟ್ಟಕ್ಕೆ ಪಾರಂಪರಿಕ ಜೀವಜಲತಾಣ ಎಂದು ಮಾನ್ಯತೆ ನೀಡಬೇಕು. ಗೋಗಿ ಗ್ರಾಮ ಯಾದಗಿರಿ ಜಿಲ್ಲೆ ಷಹಾಪುರ ತಾಲೂಕಿನ ಯುರೇನಿಯಂ ಗಣಿಗಾರಿಕೆಯಿಂದ ಕೆರೆಗಳು ವಿಷಕಾರಿ ಆಗಿದ್ದವು. 10 ವರ್ಷ ಹಿಂದೆ ಜನತೆಯ ಪ್ರತಿಭಟನೆಯ ನಂತರ ಗಣಿಗಾರಿಕೆ ನಿಂತಿತ್ತು. ಈಗ ಪುನಃ ಯುರೇನಿಯಂ ಗಣಿಗಾರಿಕೆಗೆ ತಯಾರಿ ನಡೆದಿದೆ. ಈ ಬಗ್ಗೆ ಜೀವ ವೈವಿಧ್ಯ ಮಂಡಳಿ ತಂಡ ಸ್ಥಳಕ್ಕೆ ಬೇಟಿ ನೀಡಿ ತಜ್ಞ ವರದಿಯನ್ನು ಪರಿಸರ ಇಲಾಖೆಗೆ ಸಲ್ಲಿಸಬೇಕು. ಯುರೇನಿಯಂ ಗಣಿಗಾರಿಕೆ ತಡೆಯಬೇಕು. ಯಲ್ಲಾಪುರ ತಾಲೂಕಿನಲ್ಲಿ ತಾಲೂಕು ಪಂಚಾಯತಿ ಬಿ.ಎಮ್.ಸಿಯಿಂದ ೪ ಜೀವ ವೈವಿಧ್ಯ ತಾಣ ಗುರುತಿಸಲಾಗಿದೆ. ಇವುಗಳಿಗೆ ಜೀವ ವೈವಿಧ್ಯ ಮಂಡಳಿ ಮಾನ್ಯತೆ ನೀಡಬೇಕು. ರಾಜ್ಯ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿಗಳ ಬಿ.ಎಮ್.ಸಿ ಬಲವರ್ಧನೆಗೆ ಬಿ.ಎಮ್.ಸಿ ಸಮ್ಮೇಳನ ನಡೆಸಬೇಕು. ಮಾದರಿ ಬಿ.ಎಮ್.ಸಿಗಳ ಯಶೋಗಾಥೆ ತಿಳಿಸಬೇಕು. ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದವರು ಆಗಮಿಸಬೇಕು. 

ಡೀಮ್ಡ್ ಅರಣ್ಯಗಳ ವ್ಯಾಪ್ತಿಯನ್ನು ಈಗಾಗಲೇ 10 ಲಕ್ಷ ಹೆಕ್ಟೇರ್‌ನಿಂದ 3.30 ಲಕ್ಷ ಹೆಕ್ಟೇರ್‌ಗೆ ಸರ್ಕಾರ ಇಳಿಸಿದೆ. ಯಾವುದೇ ಕಾರಣಕ್ಕೆ ಅರಣ್ಯ ಇಲಾಖೆ ಡೀಮ್ಡ ಅರಣ್ಯ ವ್ಯಾಪ್ತಿಯಲ್ಲಿ ಕಡಿತ ಮಾಡಬಾರದು. ಮಲೆನಾಡಿನ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯ ಕ್ಷೇತ್ರಗಳಲ್ಲಿ ಜೀವ ವೈವಿಧ್ಯತೆ ಕಾಪಾಡಲು ಮಲೆನಾಡು ಸುಸ್ಥಿರ ಅಭಿವೃದ್ಧಿ ಅಜೆಂಡಾ ಜಾರಿ ಮಾಡಬೇಕು. ಈ ಸುಸ್ಥಿರ ಅಭಿವೃದ್ಧಿ ಅಜೆಂಡಾ

ಜಾರಿಗೆ ರಾಜ್ಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು. ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರವನ್ನು ಕ್ರಿಯಾಶೀಲಗೊಳಿಸಬೇಕು. ಜೌಗು ಭೂಮಿ, ಅಳಿವೆಗಳು, ಚಿಕ್ಕ ಚಿಕ್ಕ ಲಕ್ಷಾಂತರ ಕೆರೆಗಳ ರಕ್ಷಣೆಗೆ ಪರಿಸರ ಇಲಾಖೆ ಮುಂದಾಗಬೇಕು. ಜೀವ ವೈವಿಧ್ಯ ಮಂಡಳಿ ಈ ಬಗ್ಗೆ ತಜ್ಞ ವರದಿ ನೀಡಬೇಕು. 

ಸ್ಥಳೀಯ ಅರಣ್ಯ ಅಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೀವ ವೈವಿಧ್ಯ ಕಾಯಿದೆ ಜಾರಿಗೆ ಮುಂದಾಗಬೇಕು. ಅರಣ್ಯ- ಪರಿಸರ ಸಚಿವರು ಈ ಬಗ್ಗೆ ಆದೇಶ ನೀಡಬೇಕು ಮುಂತಾದ ಬೇಡಿಕೆ ಶಿಫಾರಸ್ಸುಗಳನ್ನು ಸಲ್ಲಿಸಲಾಯಿತು.

ಶಿವಮೊಗ್ಗ ಜಿಲ್ಲೆ, ಉ.ಕ ಜಿಲ್ಲೆ ಯಲ್ಲಾಪುರ, ಶಿರಸಿ, ಸಾಗರ, ಸೊರಬದ ತಾಲ್ಲೂಕು ಪಂಚಾಯತ ಜೀವವೈವಿಧ್ಯ ಸಮಿತಿ, ವೃಕ್ಷಲಕ್ಷ ಆಂದೋಲನ, ಪರಿಸರ ವೇದಿಕೆ ಸೊರಬ, ಪರ್ಯಾವರಣಿ, ಮುಂತಾದ ಸಂಸ್ಥೆಗಳ ಪರವಾಗಿ ಮನವಿ, ಶಿಫಾರಸ್ಸು ಸಲ್ಲಿಸಲಾಯಿತು.

ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞ ಕೇಶವ ಕೊರ್ಸೆ, ಮಂಡಳಿಯ ಸದಸ್ಯ

 ಕೆ ವೆಂಕಟೇಶ್ ಸಾಗರ, ಮಾಜಿ ಸದಸ್ಯರು, ಜೀವ ವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ವೃಕ್ಷಲಕ್ಷ ಆಂದೋಲನ ಸ‌ಂಚಾಲಕ ಗಣಪತಿ ಕೆ ಬಿಸಲಕೊಪ್ಪ, ಯಲ್ಲಾಪುರ ಬಿಎಂಸಿ ಸದಸ್ಯರಾದ ನರಸಿಂಹ ಸಾತೊಡ್ಡಿ, ಕೆ.ಎಸ್ ಭಟ್ಟ, ತಿಮ್ಮಣ್ಣ ತೊಂಡೆಕೆರೆ ಮಂಡಳಿ ಅಧಿಕಾರಿಗಳು ಇದ್ದರು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code