ನವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷರ ಜನ್ಮದಿನ ಆಚರಣೆ
(KOLARA): ಕೆಜಿಎಫ್ : ತಾಲೂಕಿನ ಕಮ್ಮಸಂದ್ರ ಗ್ರಾಮದ ವಕೀಲರು ಹಾಗೂ ನವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎಸ್ ಎನ್ ರಾಜಗೋಪಾಲ್ ಗೌಡ ಅವರ ಜನ್ಮದಿನದ ಅಂಗವಾಗಿ ವಕೀಲರ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷ ಕೆ ಎಂ ಕೃಷ್ಣಮೂರ್ತಿ ಹಾಗೂ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಸನ್ಮಾನಿಸಿ ಹೂ ಗುಚ್ಛ ನೀಡಿ ಜನ್ಮದಿನ ಆಚರಿಸಿದರು.
ಜಿಲ್ಲಾಧ್ಯಕ್ಷ ಮಾತನಾಡಿ ಹಲವಾರು ಕನ್ನಡ ಪರ ಹೋರಾಟಗಳನ್ನು ಮಾಡಿಕೊಂಡು ಬಂದು ವಕೀಲರಾಗಿ ಬಡ ಜನರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿರುವ ರಾಜ್ಯಾಧ್ಯಕ್ಷರಾಗಿ ದೇವರು ಒಳ್ಳೆಯ ಆರೋಗ್ಯ ಐಶ್ವರ್ಯ ನೀಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ: ವಿಷ್ಣು ಕೋಲಾರ