ನ 29 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ನಾ ನಿನ್ನ ಬಿಡಲಾರೆ ಹಾರರ್ ಸಿನಿಮಾ.
(ENTERTAINMENT): ಕನ್ನಡದ ಚಿತ್ರರಂಗದಲ್ಲಿ ಹೊಸಬರ ಮುಖಗಳು ಹೆಚ್ಚು ಕಾಣುತ್ತಿದ್ದು ಇದೀಗ “ನಾ ನಿನ್ನ ಬಿಡಲಾರೆ” ಚಿತ್ರತಂಡದಿಂದ ವಿನೂತನ ವಿಭಿನ್ನ ಶೈಲಿಯ ಚಿತ್ರವು ನವೆಂಬರ್ 29ರಂದು ರಾಜ್ಯದ್ಯಂತ ತೆರೆ ಕಾಣಲಿದೆ.
ಬಹುತೇಕ ಹೊಸಬರಿಂದಲೇ ಕೂಡಿರುವ ‘ನಾ ನಿನ್ನ ಬಿಡಲಾರೆ’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದೆ. ದೇವರು, ದೆವ್ವ, ಆತ್ಮದ ಕುರಿತಾದ ಕಥೆ ಹೊಂದಿರುವ ಚಿತ್ರ ಎಂಬುದು ಟ್ರೈಲರ್ ನಿಂದ ಗೊತ್ತಾಗುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಜನರಲ್ ನ ಕಥೆಯೊಂದಿಗೆ ಚಿತ್ರದಲ್ಲಿ ಪ್ರೇಮಿ ಕತೆಯು ಇದೆ ಅಂಬಲಿ ಭಾರತಿ, ಪಂಚೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕೆ ಎಸ್ ಶ್ರೀಧರ್ ಶ್ರೀನಿವಾಸ್ ಪ್ರಭು ಮದನ್ ಹರಿಣಿ ಮಹಾಂತೇಶ್ ಮುಂತಾದವರು ಚಿತ್ರದಲ್ಲಿದ್ದಾರೆ.
ಹಳೆಯ ಸೂಪರ್ ಹಿಟ್ ಸಿನಿಮಾ ನಾ ‘ನಿನ್ನ ಬಿಡಲಾರೆ.’ ಶೀರ್ಷಿಕೆಯಲ್ಲಿ ಇದೊಂದು ಮತ್ತೊಂದು ಸಿನಿಮಾ ಈಗ ಸಿದ್ದಗೊಂಡಿದ್ದು ಟ್ರೈಲರ್ ಬಿಡುಗಡೆ ಮಾಡಿದ್ದ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಈ ಸಿನಿಮಾದ ನಾಯಕಿ ಅಂಬಾಲಿ ಭಾರತೀಯರನ್ನು ಮತ್ತೊಬ್ಬ ಆಕ್ಷನ್ ಲೇಡಿ ಹೀರೋಯಿನ್ ಕನ್ನಡ ಚಿತ್ರರಂಗಕ್ಕೆ ಸಿಕ್ಕಂತೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಂಬಲಿ ಭಾರತಿ ರಂಗಭೂಮಿ ನಂಟು ಹೊಂದಿರುವ ಇವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದು ಒಟ್ಟಿನಲ್ಲಿ ಇದೆ ನವೆಂಬರ್ 29 ರಿಂದ ತೆರೆಯ ಮೇಲೆ ಮಿಂಚಲಿದೆ ಹಾರರ್ ಸಿನಿಮಾ ‘ನಾ ನಿನ್ನ ಬಿಡಲಾರೆ’