ಅಂಗಡಿ ಮಳಿಗೆಗಳ ಹಾಗೂ ಕೈಗಾರಿಕೆಗಳ ಮಾಲೀಕರು ನಾಮಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆಗಳನ್ನು ಅಳವಡಿಸಬೇಕು : ಎಸ್.ಎಂ ವೆಂಕಟೇಶ್ ಸೂಚನೆ ನೀಡಿದ್ದಾರೆ
(KOLARA): ಕೋಲಾರ : ತಾಲೂಕಿನ ವೇಮಗಲ್ ಹೋಬಳಿಯ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳ ಹಾಗೂ ಕೈಗಾರಿಕೆಗಳ ಮಾಲೀಕರು ನಾಮಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆಗಳನ್ನು ಅಳವಡಿಸಬೇಕು ಎಂದು ಮೇಮಗಲ್&ಕುರಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ ವೆಂಕಟೇಶ್ ಸೂಚಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಲಕದಲ್ಲಿ ಕನ್ನಡ ಅಳವಡಿಕೆ ಮಾಡಲು ನೀಡಿದ್ದ ಗಡವು ಮುಗಿದಿದ್ದು, ಜು.15ರತನಕ ವಿಸ್ತರಿಸಲಾಗಿದೆ, ಈಗಲೂ ಯಾರಾದರು ವಿಳಂಭ ತೋರಿದ್ದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಯ ಅನ್ವಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು, ಖಾಸಗಿ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಅರೆಸರ್ಕಾರಿ, ಖಾಸಗಿ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇಕಡ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ನಾಮಫಲಕ ಹಾಕಬೇಕು. ಈಗ ನೀಡಿರುವ ಗಡುವಿನಲ್ಲಿ ಕ್ರಮಕೈಗೊಳ್ಳದಿದ್ದರೆ ಅಂತಹವರ ಪರವಾನಗಿ ರದ್ದು ಮಾಡಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನಿಡಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ಕಳೆದ ವರ್ಷ ಜುಲೈನಲ್ಲಿಯೇ ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಆದರೂ ಸಹ ಅನೇಕ ಅಂಗಡಿ ಮಾಲೀಕರು ಹಾಗೂ ಗೋದಾಮುಗಳಲ್ಲಿ ಪ್ಲಾಸ್ಟಿಕ್ ಶೇಖರಣೆಯಾಗಿರುವುದು ವಿಷಾದನೀಯ. ಈ ತಿಂಗಳ 10ನೇ ತಾರೀಕಿನ ಒಳಗಾಗಿ ಎಲ್ಲಾ ಪ್ಲಾಸ್ಟಿಕ್ ಬಳಕೆಯನ್ನು ನಿಷೆೇದಿಸಬೇಕು ಇಲ್ಲವಾದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಂಡು ಕಡ್ಡಾಯವಾಗಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ತಿಳಿಸಿದರು.
ಇನ್ನು ಮುಂದು ಪ್ಲಾಸ್ಟಿಕ್ ಬಳಕೆಗೆ ಪಟ್ಟಣ ಪಂಚಾಯಿತಿಯವರು ಆಸ್ಪದ ನೀಡುವುದಿಲ್ಲ ಎಂದು ನಮಗೆ ವಿಶ್ವಾಸವಿದೆ, ಹಾಗೂ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ” ” ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸೋಣ” ಸಕಾಲಕ್ಕೆ ತೆರಿಗೆ ಪಾವತಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸೋಣ ಎಂದು ಕೋರಿದರು.
ವರದಿ: ವಿಷ್ಣು ಕೋಲಾರ