Pasha official poster release. “ಪಾಶ” ಅಧಿಕೃತ ಪೋಸ್ಟರ್ ಬಿಡುಗಡೆ
(FILM): ಗಧಾಗ್ರಜ ಫಿಲಂಸ್ ನ ಅಡಿಯಲ್ಲಿ ಈ ಕಿರುಚಿತ್ರ ನಿರ್ಮಾಣಗೊಂಡಿದ್ದು. ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿರುವ ಲಕ್ಷ್ಮೀಕಾಂತ ಜೋಶಿಯವರು ಚೊಚ್ಚಲ ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರದ ಕತೆ ಹಿರಿಯ ಸಾಹಿತಿ ಹಾಗೂ ನಿರ್ದೇಶಕರಾದ “ಜೋಗಿ” ( ಗಿರೀಶರಾವ ಹತ್ವಾರ ) ಅವರ ಲೈಫ್ ಈಸ್ ಬ್ಯೂಟಿಫುಲ್ ಕೃತಿಯ ಒಂದು ಕತೆಯಾಧಾರಿತವಾಗಿದೆ.
ಚಿತ್ರೀಕರಣ ಕಲಬುರಗಿ ನಗರದ ಸುತ್ತಮುತ್ತ ನಡೆದಿದ್ದು ,
ಚಿತ್ರತಂಡ ಚಿತ್ರೀಕರಣ ಮುಗಿಸಿ ಇವತ್ತು ಅಧಿಕೃತವಾಗಿ
ಪೋಸ್ಟರ್ ಬಿಡುಗಡೆ ಮಾಡಿದೆ.
ಪೋಸ್ಟರ್ ಪ್ರೇಕ್ಷಕರನ್ನು ಸೆಳೆಯುತ್ತಿದ್ದು , ಚಿತ್ರದ ಮೇಲಿನ ಕೂತುಹಲ ಹೆಚ್ಚಿಸಿದೆ. ಈ ಚಿತ್ರವು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಭಾಗವಹಿಸಿ ನಂತರ ಪ್ರೇಕ್ಷಕರ ಎದುರಿಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಮುಖ್ಯಪಾತ್ರದಲ್ಲಿ ಕಿರುತೆರೆಯ ( ಮುಕ್ತ ಮುಕ್ತ , ಮಹಾಸತಿ, ಗಂಗಾ ಧಾರಾವಾಹಿ ಖ್ಯಾತಿಯ ) ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದರೆ , ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ( ಎನ್.ಎಸ್.ಡಿ ) ಪದವೀಧರ , ಕಲರ್ಸ್ ಕನ್ನಡ ವಾಹಿನಿಯ , ಕಾಮಿಡಿ ಕಂಪನಿ ಖ್ಯಾತಿಯ ಸೋಮಶಂಕರ್ ಬಿರಾದಾರ ಅವರು ಪ್ರಮುಖ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ.
ರಂಗಾಯಣ ಕಲಾವಿದರಾದ ಉಮೇಶ್ ಪಾಟೀಲ್ , ಶ್ರೀನಿವಾಸ ದೋರನಳ್ಳಿ , ಕೌಶಿಕ್ ಕುಲಕರ್ಣಿ , ಪ್ರದೀಪ ಬೆಳಮಗಿ , ರಿಷಿಕೇಶ ಕುಲಕರ್ಣಿ , ನೀಲಾಂಬಿಕಾ , ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಕುಮಾರಿ ಸ್ಪೂರ್ತಿ ಅಥಣಿ, ಸ್ನೇಹ , ಕಾವ್ಯ , ವೈಷ್ಣವಿ ಬಾಲ ಕಲಾವಿದೆಯರಾಗಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೋಮಶಂಕರ್ ಬಿರಾದಾರ , ಸಹಾಯಕ ನಿರ್ದೇಶಕರಾಗಿ ಅಂಬರೀಶ್ ಮರಾಠಾ ನಿರ್ದೇಶನ ತಂಡದಲ್ಲಿದ್ದಾರೆ. ಛಾಯಾಗ್ರಾಹಕರಾಗಿ ರಾಘು ಮರೆನೂರ , ಸಂಕಲನ ಓಂಕಾರ ಮತ್ತು ಭಾಗ್ಯೇಶ್ ಪಾಟೀಲ್ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೂ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ ಸುಚೀನ್ ಶರ್ಮಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.