ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತದ ಯೋಜನೆ ಅಡಿಯಲ್ಲಿ ಬಡವರಿಗೆ, ರೈತರಿಗೆ ಅನುಕೂಲವಾಗಲೆಂದು ಪುನರಾಭಿವೃದ್ಧಿ ಮಾಡುತ್ತಿರುವ ಪ್ರಧಾನಿ.
(KOLARA): ಬಂಗಾರಪೇಟೆ: ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ್ಯಂತ ಬ್ರಿಟೀಷ್‌ರು ಕಟ್ಟಿದಂತ ರೈಲ್ವೆ ನಿಲ್ದಾಣಗಳನ್ನ ಅಮೃತ್ ಭಾರತ್ ಯೋಜನೆಯಡಿಯಲ್ಲಿ ರೈಲ್ವೆ ನಿಲ್ದಾಣಗಳನ್ನ ಮಾರ್ಗಗಳನ್ನ ರೈತರಿಗೆ ಬಡವರಿಗೆ ಅನುಕೂಲವಾಗಲೆಂದು ಪುನರಾಭಿವೃದ್ಧಿ ಮಾಡುವ ಮೂಲಕ ಹೊಸ ಇತಿಹಾಸ ಬರೆಯುವಂತ ಕೆಲಸ ನಮ್ಮ ಪ್ರಧಾನಿ ನರೇಂದ್ರಮೋದಿ ಅವರು ಮಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ 41000ಕೋಟಿಗಳ ಮೌಲ್ಯದ ರೈಲ್ವೆ ಯೋಜನೆಯನ್ನು ಉಡುಗೊರೆಯಾಗಿ ನನ್ನ ಕುಟುಂಬದ ಸದಸ್ಯರಿಗೆ ನೀಡುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಯ ಜೊತೆಗೆ 1500 ರಸ್ತೆ ಮೇಲ್ಸೇತುವೆಗಳ ಮತ್ತು ಅಂಡರ್ ಪಾಸ್ಗಳ ಶಂಕುಸ್ಧಾಪನೆ ಮತ್ತು ಉದ್ಘಾಟನೆಯನ್ನ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಪ್ರಧಾನಿ ನರೇಂದ್ರಮೋದಿ ಅವರಿಂದ ವಿಡಿಯೋ ಕಾಂಫಾರೆನ್ಸ್ಅನ್ನು ಉದ್ಘಾಟಿಸಿ ಮಾತನಾಡಿ, 60ವರ್ಷಗಳು ಕೇಂದ್ರ ಹಾಗೂ ರಾಜ್ಯಗಳಲ್ಲಿ ಅವರದ್ದೆ ಸರ್ಕಾರ ಇದ್ದರು ಸಹ ಅಭಿವೃದ್ಧಿಯನ್ನ ಮಾಡದೆ ಕಾಲಹರಣ ಮಾಡಿದರು.ಕೇವಲ ಹತ್ತು ವರ್ಷಗಳಲ್ಲಿ ನಮ್ಮ ಕೇಂದ್ರ ಸರ್ಕಾರ ಮಾಡಿದ ಕೆಲಸಗಳನ್ನ ಅವರಿಂದ 60ವರ್ಷಗಳ ಕಾಲ ಮಾಡಲು ಆಗಲಿಲ್ಲ.
ಇವತ್ತು ಕೇಂದ್ರ ಸರ್ಕಾರದ ಯೋಜನೆಗಳು ದೇಶಾದ್ಯಂತ ಜನರ ಕಣ್ಣಿಗೆ ಕಾಣುತ್ತಿದೆ ಮತ್ತು ಕೇಂದ್ರ ಸರ್ಕಾರದ ಸೌಲತ್ತುಗಳು ಅವರ ಮನೆ ಬಾಗಿಲಿಗೆ ತಲುಪುತ್ತಿದೆ. ಹಿಂದೆ ಒಂದು ದಿನಕ್ಕೆ 4ಕಿಮೀ ರೈಲ್ವೆ ಹಳಿಗಳ ಕೆಲಸ ನಡೆಯುತ್ತಿತ್ತು,ಆದರೆ ಇವತ್ತು 15ಕೀಮಿ ಕೆಲಸ ನಡೆಯುತ್ತಿದೆ. ಬಂಗಾರಪೇಟೆಯಿoದ ಚಿಕ್ಕಬಳ್ಳಾಪುರ ಹೋಗಲು ಎಲೆಕ್ಟ್ರಿಕ್ ರೈಲು ಇದೆ. ಬಂಗಾರಪೇಟೆ, ಊರಿಗಾo, ಮಾರಿಕುಪ್ಪo, ಬೀಸಾನಮ್ ಹೀಗೆ ಇನ್ನು ಜಿಲ್ಲೆಯ ಹಲವು ರೈಲ್ವೆ ನಿಲ್ದಾಣಗಳು ಮೊದಲು ಹೇಗಿದ್ದವು ಈಗ ಹೇಗೆ ಅಭಿವೃದ್ಧಿಯಾಗಿ ಜನರ ಮುಂದೆ ಕಾಣುತ್ತಿದೆ ಎಂಬುದನ್ನ ಹೇಳಬೇಕಾಗಿಲ್ಲ. ಇದೇ ಜಿಲ್ಲೆಯಲ್ಲಿ ಹಲವುಬಾರಿ ಸಂಸದರಾಗಿ, ರೈಲ್ವೆಮoತ್ರಿಗಳಾಗಿ ಜಿಲ್ಲೆಯಾ ಯಾವೊಂದು ರೈಲ್ವೆ ನಿಲ್ದಾಣಗಳನ್ನ ಅಭಿವೃದ್ಧಿ ಮಾಡಲಾಗದವರು ಇದ್ದರೆ. ಈ ಭಾಗದಿಂದ ಕೊಟ್ಟ ಎಲ್ಲ ಮನವಿಗಳಿಗೂ ಸ್ವಂದಿಸಿ 500 ಕೋಟಿಗೊ ಹೆಚ್ಚು ಅನುದಾನವನ್ನ ಬಿಡುಗಡೆ ಮಾಡಿದ ರೈಲ್ವೆ ಮಂತ್ರಿಗಳನ್ನ ನಾವುಗಳು ನೆನೆಯಬೇಕಾಗುತ್ತದೆ.
ಬೂದಿಕೋಟೆಗೆ ಹೋಗುವ ರಸ್ತೆ ಬಹಳ ಚಿಕ್ಕದಾಗಿದ್ದು ರೈಲ್ವೆ ಇಲಾಖೆಯಿಂದ ಒಂದು ಅಡಿಯಷ್ಟು ಜಾಗವನ್ನು ಬಿಡಿಸಿಕೊಳ್ಳಲು ಆಗಲಿಲ್ಲ. ನಾನು ಸಂಸದನಾದ ಮೇಲೆ ರೈಲ್ವೆ ಮಂತ್ರಿಗಳ ಬಳಿ ಸಮಸ್ಯಯನ್ನ ವಿವರಿಸಿದ ಬಳಿಕ ಇವತ್ತು 40ಅಡಿಗಳಷ್ಟು ಜಾಗವನ್ನ ಯಾವುದೆ ಷರತ್ತು ಇಲ್ಲದೆ ಇಲಾಖೆ ಬಿಟ್ಟುಕೊಟ್ಟಿದೆ. ಹಾಗೂ ಇತ್ತೀಚಿಗೆ ರೈಲ್ವೆ ಇಲಾಖೆಗೆ ಸೇರಿದ ಬೂದಿಕೋಟೆ ವೃತ್ತದ ಜಾಗದಲ್ಲಿ ಯಾವುದೇ ಪಕ್ಷದ ಪ್ಲೆಕ್ಸ್ಗಳನ್ನ ಹಾಕದಂತೆ ಆದೇಶ ಮಾಡಿದ್ದೇನೆ.ವಂದೇ ಭಾರತ್ ರೈಲು ಬಂಗಾರಪೇಟೆಯಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿಯನ್ನ ಮಾಡಿದ್ದೇನೆ.
ನಮ್ಮ ಹೆಮ್ಮೆಯ ಪ್ರಧಾನಿಗಳು ತುಂಡಾಗಿದ್ದ ಭಾರತವನ್ನ ಸುಂದರವಾಗಿಸುತ್ತಿದ್ದಾರೆ ಅವರಿಗೆ ನಾವು ಶಕ್ತಿ ತುಂಬುವ ಕೆಲಸ ಮಾಡಬೇಕು.ಆಯೋಧ್ಯೆಯಲ್ಲಿ ಸುಮಾರು 496ವರ್ಷಗಳ ಕನಸನ್ನ ನನಸ್ಸಾಗಿಸಿದ್ದಾರೆ. ಇನ್ನು ಮಧುರ, ದ್ವಾರಕಾ ನಗರವನ್ನ ನಿರ್ಮಾಣ ಮಾಡಿಕೊಡುತ್ತಾರೆ. ನಮ್ಮ ಸಂಪತ್ತ್ ದೋಚಿದವರಿಂದ ಮರಳಿ ಪಡೆಯುತ್ತಿದ್ದೇವೆ ಅಷ್ಟೆ.ನಮಗೆ ಯಾರ ಮೇಲು ದ್ವೇಷ ಇಲ್ಲ. ಇವತ್ತು ದೇಶಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ಶೇಕಡ 80% ಅನುದಾನ ನೀಡುತ್ತಿರುವುದು ಕೇಂದ್ರ ಸರ್ಕಾರ.ಮುಂಬರುವ ದಿನಗಳಲ್ಲಿ ಮೂದಲ ಹಂತದಲ್ಲಿ ಒಂದು ಕೋಟಿ ಮನೆಗಳಿಗೆ ಸೋಲಾರ್ ಸಂಪರ್ಕ ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳನ್ನ ಜನಕ್ಕೆ ತಿಳಿಸುವಂತ ಕೆಲಸ ಮಾಡಬೇಕು ನಮ್ಮ ಕಾರ್ಯಕರ್ತರು,ಮುಖಂಡರುಗಳು.
ವಿಶ್ವಕ್ಕೆ ಭಾರತ ನಂ 1 ಆಗಬೇಕು ಎಂಬ ಕನಸು ನನಸಾಗಿಸುವ ಶಕ್ತಿ ನಮ್ಮ ನಿಮ್ಮ ಮತಗಳಲ್ಲಿದೆ.
ಕಾರ್ಯಕ್ರಮದಲ್ಲಿ ಚಿತ್ರಕಲೆ ಮತ್ತು ಪ್ರಬಂಧ ಬರೆದಂತ ಏಳನೇ ತರಗತಿಮಕ್ಕಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯ್ತು. ವಿನಾಕರಣ ಮೂರುಗಂಟೆಗಳ ಕಾಲ ಮಕ್ಕಳನ್ನ ಕಾಯಿಸಿದ್ದು ಮಕ್ಕಳಲ್ಲಿ ಬೇಸರ ತಂದಿತ್ತು. ಹಾಗೂ ಇತ್ತೀಚಿಗೆ ರೈಲ್ವೆ ಇಲಾಖೆಗೆ ಸೇರಿದ ಬೂದಿಕೋಟೆ ವೃತ್ತದ ಜಾಗದಲ್ಲಿ ಯಾವುದೇ ಪಕ್ಷದ ಪ್ಲೆಕ್ಸ್ಗಳನ್ನ ಹಾಕದಂತೆ ಆದೇಶ ಮಾಡಿದ್ದೇನೆ. ವಂದೇ ಭಾರತ್ ರೈಲು ಬಂಗಾರಪೇಟೆಯಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿಯನ್ನ ಮಾಡಿದ್ದೇನೆ.
ಕಾರ್ಯಕ್ರಮದಲ್ಲಿ: ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಹೊಸರಾಯಪ್ಪ,ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ,ತಾ.ಪo.ಸದಸ್ಯ ಪಿ.ಅಮರೀಷ್,ಮುಖಂಡರಾದ ಶ್ರೀನಿವಾಸ್‌ಗೌಡ,ಪ್ರದೀಪ್.ಹಾಗೂ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ವರದಿ: ವಿಷ್ಣು ಕೋಲಾರ