ಖಾಸಗಿ ಬಸ್ ಮತ್ತು ಕಾರು ಡಿಕ್ಕಿ: ಚಾಲಕ ಸಾವು, ಜಖಂ ಗೊಂಡ ಕಾರು
(SHIVAMOGA): ಶಿರಾಳಕೊಪ್ಪ: ಸಮೀಪದ ದೇವಿಕೊಪ್ಪ ಸಮೀಪ ನಡೆದ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆನವಟ್ಟಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಶಿರಾಳಕೊಪ್ಪದ ಕಡೆದಿಂದ ಹೋಗುತ್ತಿದ್ದ ಕಾರು ಡಿಕ್ಕಿಯಾದ ರಭಸಕ್ಕೆ ಬಸ್ ಪಲ್ಟಿಯಾಗಿ ರಸ್ತೆ ಮೇಲೆಯೇ ಉರುಳಿ ಬಿದ್ದಿದೆ. ಹೀಗೆ ಬಿದ್ದ ಬಸ್ ಕಾರಿನ ಮೇಲೆಯೇ ಬಿದ್ದಿದ್ದರಿಂದ ಕಾರು ಡ್ರೈವರ್ ಸಮೇತ ಅಪ್ಪಚ್ಚಿಯಾಗಿದೆ. ಸ್ಥಳದಲ್ಲಿಯೇ ಕಾರಿನ ಡ್ರೈವರ್ ಸಾವನ್ನಪ್ಪಿದ್ದಾನೆ.
ಇನ್ನೂ ಬಸ್‌ನಲ್ಲಿದ್ದ ಪ್ರಯಾಣಿಕರು ಸಹ ಗಾಯಗೊಂಡಿದ್ದು, ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಪ್ರಯಾಣಿಕರನ್ನ ಸುರಕ್ಷಿತವಾಗಿ ಬಸ್‌ನಿಂಧ ಹೊರಕ್ಕೆ ಕರೆತಂದಿದ್ದಾರೆ. ಬಸ್‌ನ ಗ್ಲಾಸ್, ಕಿಟಕಿಗಳನ್ನು ಒಡೆದು ಅದರಿಂದ ಪ್ರಯಾಣಿಕರನ್ನ ಹೊರಕ್ಕೆ ಕರೆತಂದಿದ್ದಾರೆ. ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಆಗಮಿಸಿದ್ದಾರೆ.
ಗಾಯಾಳುಗಳನ್ನು ಶಿರಾಳಕೊಪ್ಪದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿ ಶಿವಮೊಗ್ಗದವರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ವರದಿ: ಸಂದೀಪ ಯು.ಎಲ್ ಸೊರಬ