ನ್ಯೂಸ್ಶಿವಮೊಗ್ಗ

ಶುಂಟಿಯಲ್ಲಿ ಪ್ರೊ-ಟ್ರೇ ತಂತ್ರಜ್ಞಾನ.

ಶುಂಟಿಯಲ್ಲಿ ಪ್ರೊ-ಟ್ರೇ ತಂತ್ರಜ್ಞಾನ.


(SHIVAMOGA): ಶಿವಮೊಗ್ಗ ಜಿಲ್ಲೆಯ ಶಿಕರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ವಿದ್ಯಾರ್ಥಿಗಳು ತಮ್ಮ ಕೃಷಿ ಗ್ರಾಮೀಣ ಕಾರ್ಯಾನುಭ ಕಾರ್ಯಕ್ರಮದ ಅಂಗವಾಗಿ ಶುಂಟಿಯಲ್ಲಿ ಪ್ರೊ-ಟ್ರೇ ತಂತ್ರಜ್ಞಾನ ಕುರಿತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು ಮುಖ್ಯ ಅಥಿತಿಗಳಾಗಿ ತಳಿಶಾಸ್ತ್ರ್ ವಿಭಾಗದ ಪ್ರಾಧ್ಯಾಪಕರಾದ ಡಾ. ಮೆಹಬೂಬ್ ಆಗಮಿಸಿದ್ದರು.


ಇತ್ತೀಚೆಗೆ ಶುಂಟಿ ಬೆಲೆ ಹೆಚ್ಚಾದಂತೆ ಶುಂಟಿ ಬೆಳೆಯುವ ಪ್ರಮಾಣ ಕೂಡ ಹೆಚ್ಚಾಗುತ್ತದೆ ಶುಂಟಿ ಬೆಳೆ ಎಂದರೆ ಅತಿ ಹೆಚ್ಚು ಖರ್ಚು ಮಾಡುವ ಬೆಳೆ ಅದರಲ್ಲಿ ಶುಂಟಿ ಬೀಜದ ಪಾಲು ಸಹಾ ಇದೆ ಅದಕ್ಕಾಗಿ ವಿಜ್ಞಾನಿಗಳು ಪ್ರಯೋಗ ಮಾಡಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆಗೆ 10 ರಿಂದ 12 ಕ್ವಿಂಟಾಲ್ ಶುಂಟಿ ಬೀಜ ಬೇಕು ಪ್ರೊ ಟ್ರೇ ಅಲ್ಲಿ ಶುಂಟಿ ಬೀಜದ ಕಣ್ಣುಗಳನ್ನು(ಮೊಳಕೆಗಳು) ಬಿಡಿಸಿ ಹಾಕುವುದರಿಂದ ಒಂದು ಎಕರೆಗೆ 4ರಿಂದ 5 ಕ್ವಿಂಟಾಲ್ ಸಾಕು 30ರಿಂದ 45ದಿನಕ್ಕೆ ಸಸಿಬರುತ್ತವೆ ನಂತರ ರೈತರು ತಮ್ಮ ಹೊಲಕ್ಕೆ ನಟಿಮಾಡ್ಬಹುದು ಈ ತಂತ್ರಜ್ಞಾನ ಬಳಸುವುದರಿಂದ ರೈತರು ಬೀಜದ ಖರ್ಚನ್ನು ಉಳಿಸಬಹುದು ಹಾಗೆಯೆ ರೋಗಮುಕ್ತ ಸಸಿಗಳನ್ನು ಪಡೆಯಬಹುದು, ಸಸಿಗಳ ಸಂಖ್ಯೆ ಕೂಡ ನಿಕರವಾಗಿರುತ್ತದೆ, ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ ಎಂದು ಡಾ. ಮೆಹಬೂಬ್ ತಿಳಿಸಿದರು.

Leave a Reply

Your email address will not be published. Required fields are marked *

Scan the code