ಕರ್ನಾಟಕ ರಾಜ್ಯದಲ್ಲಿ ದಲಿತ ಚಳುವಳಿಗೆ ಹೊಸ ಆಯಾಮವನ್ನು ಹೋರಾಟದ ಕಿಚ್ಚನ್ನು ತುಂಬಿದಂತಹ ಧೀಮಂತ ನಾಯಕ ಪ್ರೊ.ಫೆಸರ್ ಬಿ.ಕೃಷ್ಣಪ್ಪ.
(KOLARA): ಬಂಗಾರಪೇಟೆ :ಕರ್ನಾಟಕ ರಾಜ್ಯದಲ್ಲಿ ದಲಿತ ಚಳುವಳಿಗೆ ಹೊಸ ಆಯಾಮವನ್ನು ಹೋರಾಟದ ಕಿಚ್ಚನ್ನು ತುಂಬಿದಂತಹ ಧೀಮಂತ ನಾಯಕ ಪ್ರೊ.ಫೆಸರ್ ಬಿ.ಕೃಷ್ಣಪ್ಪ ಅವರ ನಂತರ ಎಂ.ಶಿವಣ್ಣ ಅಂದರೆ ತಪ್ಪಾಗಲಾರದು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಇಂದು ರಾಜ್ಯ ಸಂಚಾಲಕ ಎಂ. ಶಿವಣ್ಣ ನವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ ಮಾತನಾಡುತ್ತಾ, ಶಿವಣ್ಣನವರು ವಿವಿಧ ದಲಿತ ಪರ ಹೋರಾಟಗಳನ್ನು ಮಾಡಿದ್ದಾರೆ. ಉದಾಹರಣೆ,
ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿ ಪ್ರಕರಣದಲ್ಲಿ ಸವರ್ಣಿಯರು ದಲಿತರಮೇಲೆ ಹಲ್ಲೆ ಮಾಡಿ 7 ಜನ ದಲಿತರ ಸಜೀವದಹನ ಮಾಡಿದ್ದನ್ನು ಖಂಡಿಸಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ವತ್ತಾಯಿಸಿ ಪ್ರತಿಭಟನೆ ಮಾಡಿದ್ದರು, ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಆ ಕಾಲಗಟ್ಟದಲ್ಲಿಯೇ ಒತ್ತಾಯಿಸಿದ್ದರು ಫಲವಾಗಿ ಸರ್ಕಾರ ಖಾಯಂ ಗೊಳಿಸಿತು, ಹೆಂಡಬೇಡ ಸಾರಾಯಿ ಬೇಡ ಓಬಳಿಗೊಂದು ವಸತಿ ಶಾಲೆ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದರ ಫಲವಾಗಿ ಇಂದು ಮುರಾರ್ಜಿ ದೇಸಾಯಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳು ಆರಂಭವಾದವು,1974 ರಲ್ಲಿ ಎಸ್ ಸಿ, ಎಸ್ ಟಿ ಭೂ ಪರಬಾರೆ ನಿಷೇಧ ಖಾಯ್ದೆ ಪಿ ಟಿ ಸಿ ಎಲ್ ಕಾಯ್ದೆ ಜಾರಿಗೆ ತರುವಂತೆ ವತ್ತಾಯಿಸಿದ್ದರ ಫಲವಾಗಿ 1979 ಜಾರಿಗೆ ಬಂತು. ಹೀಗೆ ಹಲವಾರು ಹೋರಾಟಗಳನ್ನು ಮಾಡಿ ರಾಜ್ಯದ ದಲಿತರಿಗೆ ಕಾರ್ಮಿಕರಿಗೆ ರೈತರಿಗೆ ದೊಡ್ಡ ಶಕ್ತಿಯಾಗಿದ್ದರು ಎಂದು ಪ್ರೊ!! ಬಿ. ಕೃಷ್ಣಪ್ಪರವರ ನಂತರ ಎಂ ಶಿವಣ್ಣನವರನ್ನು ಸ್ಮರಿಸಿ ಇಂತಹ ಹೋರಾಟಗಾರರ ಸ್ಮರಣೆಯನ್ನು ಮಾಡುವು ಪುಣ್ಯದ ಕೆಲಸ ಎಂದರು.
ಪ್ರಸ್ತುತ ಸನ್ನಿವೇಶಗಳಲ್ಲಿ ಭವಿಷ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಂತಹ ಸಂವಿಧಾನ ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಸ್ಥಾನದಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು, ಕಾರಣವೇನೆಂದರೆ ಈ ದೇಶವನ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಖಂಡತೆಯಲ್ಲಿ ಏಕತೆಯನ್ನ ಕಂಡವರು, ಏಕತೆಯಲ್ಲಿ ಜಾತಿ, ಧರ್ಮ,ವರ್ಗ, ಲಿಂಗ, ಬೇಧ ತಾರತಮ್ಯವನ್ನು,ಅಸ್ಪೃಶ್ಯತೆ ಎಲ್ಲದಕ್ಕೂ ಸಂವಿಧಾನದಲ್ಲಿ ಮಂದಿರವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಸಂವಿಧಾನ ಎಲ್ಲೋ ಒಂದು ಕಡೆ ಮೂಲೆ ಗುಂಪು ಆಗುತ್ತಿದೆ. ಸಂವಿಧಾನವನ್ನು ಮರೆಮಾಚುತಿದ್ದಾರೆ. ಅನ್ನುವ ಭಾವನೆ ಮೂಡುತ್ತಿದೆ. ಈ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಧಾರ್ಮಿಕ ಮಂದಿರ ಮಾರ್ಪಾಡಾಗುತ್ತಿದೆ ಎಂದು ಅನಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರ ಸಂಪತ್,ತಾಲೂಕು ಸಂಚಾಲಕ ಶ್ರೀನಿವಾಸ್, ಕೆಜಿಎಫ್ ಸಂಚಾಲಕ ಶ್ರೀಧರ್, ಹಿರಿಯರಾದ ಗುರುಮೂರ್ತಿ, ಶಿವು, ಗೌತಮ್, ಸುನಿಲ್ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ