ನ್ಯೂಸ್ಶಿವಮೊಗ್ಗ

ನಿಮ್ಮಲ್ಲಿರುವ ಅಸಾಧಾರಣ ಕ್ಷಮತೆಯನ್ನು ಬಳಸಿಕೊಂಡರೆ ಪ್ರಗತಿ ಸಾಧ್ಯ’ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್

ನಿಮ್ಮಲ್ಲಿರುವ ಅಸಾಧಾರಣ ಕ್ಷಮತೆಯನ್ನು ಬಳಸಿಕೊಂಡರೆ ಪ್ರಗತಿ ಸಾಧ್ಯ’ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್

(SHIVAMOGA): ಹೊರದೇಶದ ಜಿ.ಪಿ.ಎಸ್ ತಂತ್ರಜ್ಞಾನಕ್ಕೆ 32 ಉಪಗ್ರಹಗಳ ಬಳಕೆ ಮಾಡಿದರೆ ನಮ್ಮಲ್ಲಿ ಅದೇ ರೀತಿಯ ಹೊಸ ತಂತ್ರಜ್ಞಾನದ ತಯಾರಿಯಲ್ಲಿದ್ದು ಅದಕ್ಕೆ 7 ಉಪಗ್ರಹಗಳು ಮಾತ್ರ ಸಾಕಾಗಲಿದೆ. ಅದು ಇನ್ನೂ ಕೆಲವೇ ದಿನಗಳಲ್ಲಿ ಅದು ಕಾರ್ಯಾರಂಭ ಮಾಡಲಿದೆ. ಎಂದು ಸಾಂದೀಪನಿ ಶಾಲೆಯ ನೂತನ ಸಿ.ಬಿ.ಎಸ್.ಇ ಶಾಲೆಯನ್ನು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು ಉದ್ಘಾಟಿಸಿ ನುಡಿದರು.

ಶಿವಮೊಗ್ಗ ನಗರದ ಸಾಂದೀಪನಿ ಶಾಲೆಯ ಸಿ.ಬಿ.ಎಸ್.ಇ ನೂತನ ಕಟ್ಟಡದ ಉದ್ಘಾಟಿಸಿದರು. ಇವ ಜೊತೆಗೆ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು ನಗರದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳಲ್ಲಿ ಸಾಂದೀಪನಿಯು ಒಂದಾಗಿದೆ. ನಮ್ಮ ನಗರದ ಪ್ರತಿಷ್ಠೆ ಹೆಚ್ಚಿಸುವಲ್ಲಿ ಈ ಸಂಸ್ಥೆಯ ಪಾತ್ರ ಮಹತ್ತರವಾದದ್ದು ಎಂದರು.

ಸಿ.ಬಿ.ಎಸ್.ಇ ಪಠ್ಯದ ಅವಶ್ಯಕತೆಯ ಬಗೆಗೆ ಪೋದಾರ್ ಶಾಲೆಯ ಮುಖ್ಯೋಪಾಧ್ಯಾಯ ಸುಕೇಶ್ ಶೇರಿಗಾರ್ ವಿಚಾರವನ್ನು ತಿಳಿಸಿದರು.

ಇಸ್ರೋದ ಮಾಜಿ ಅಧ್ಯಕ್ಷರಾದ ಎ.ಎಸ್.ಕಿರಣ್ ಕುಮಾರ್ ಅವರು. ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಕುತೂಹಲವನ್ನು ಹೊಂದಿರಬೇಕು. ನಮ್ಮ ದೇಹದ ಕೈಕಾಲುಗಳು ಕೆಲಸ ನಿರ್ವಹಿಸುತ್ತವೆ. ಹಾಗೆಯೇ ನಮ್ಮೊಳಗೆ ಆಲೋಚನೆಯನ್ನು ಮಾಡಲು ಮೆದುಳು ಕಾರ್ಯ ನಿರ್ವಹಿಸುವ ರೀತಿ. ಸೈಕಲ್ ಕಲಿಯುವಾಗ ಆರಂಭದಲ್ಲಿ ಅದೆಷ್ಟೋ ಬಾರಿ ಬಿದ್ದಿರುತ್ತೇವೆ. ಕಲಿತ ನಂತರ ಬೀಳುವುದು ಕಡಿಮೆಯಾಗುತ್ತದೆ. ಸಂಗೀತ ಕಲಿಯಲು ಅನೇಕ ವರ್ಷಗಳ ಸಮಯ ತೆಗೆದುಕೊಂಡರೂ ಅಭ್ಯಾಸದ ನಂತರದಲ್ಲಿ ಯಾವುದಾದರೂ ರಾಗಗಳನ್ನು ಕೇಳಿದರೆ ಹೆಚ್ಚಿನ ಸಮಯ ತೆಗೆದುಕೊಳ್ಳದೇ ಹಾಡುತ್ತೇವೆ. ಹಾಗೇ ವಿಜ್ಞಾನದ ಬಗೆಗಿನ ಕುತೂಹಲಗಳನ್ನು ಬೆಳಸಿಕೊಂಡಾಗ ಅದರಲ್ಲಿರುವ ಅಗಾಧ ಶಕ್ತಿಯನ್ನು ಅರಿಯಲು ಸಾಧ್ಯ. ಸೋತಾಗಲೇ ಮನುಷ್ಯ ಸಾಧಿಸಲು ಸಾಧ್ಯ ಎಂಬುದನ್ನು ಚಂದ್ರಯಾನ ಮೊದಲಬಾರಿಗೆ ವಿಫಲವಾಯಿತು. ನಂತರದ ದಿನಗಳಲ್ಲಿ ಎಲ್ಲೆಲ್ಲಿ ತೊಂದರೆ ಆಗಿದೆಯೋ ಅದನ್ನು ಗಮನಿಸಿ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡ ಹಾಗೇ ಮಕ್ಕಳು ಸಹ ತಮ್ಮ ತಮ್ಮನ್ನು ತಿದ್ದಿಕೊಂಡು ಮುನ್ನಡೆದರೆ ಗೆಲುವು ಸಾಧ್ಯ. ಮನುಷ್ಯ ತನ್ನ ಸುತ್ತ ನಡೆಯುತ್ತಿರುವ ಘಟನೆಗಳನ್ನು ಪ್ರೇರಣೆಯಾಗಿ ತೆಗೆದುಕೊಂಡು ಹೊಸತನವನ್ನು ಸೃಷ್ಟಿಸಲು ಮುಂದಾದ, ಅನೇಕ ಆವಿಷ್ಕಾರವನ್ನು ಮಾಡಲು ಮುಂದಾದ, ಹಾಗಾಗಿ ಆ ರೀತಿಯ ಕುತೂಹಲಗಳನ್ನು ಉಳಿಸಿಕೊಂಡಲ್ಲಿ ಮಾತ್ರ. ತನ್ನ ಶ್ರಮವನ್ನು ಕಡಿಮೆ ಮಾಡಲು ಅನೇಕ ಉಪಕರಣಗಳನ್ನು ಕಂಡು ಹಿಡಿದ ಆತ . ಕರ್ಮೇಂದ್ರಿಯ, ಜ್ಞಾನೇಂದ್ರಿಯ, ನೆನಪಿನ ಶಕ್ತಿ ಇವೆಲ್ಲವನ್ನೂ ಸರಿಯಾಗಿ ಬಳಸಿಕೊಂಡಾಗ ನಮ್ಮ ಜ್ಞಾನ ವಿಸ್ತಾರವಾಗಲು ಸಾಧ್ಯ. ಕೆಲವೇ ವರ್ಷದಲ್ಲಿ ಅಂತರಿಕ್ಷರದಲ್ಲಿ ಭೂಮಿಯ ಸುತ್ತಲು ಮಾನವ ಸುತ್ತುವ ಹಾಗೆ ಮಾಡುವ, ೨೦೩೫ಕ್ಕೆ ಸ್ಪೇಸ್ ನಿಲ್ದಾಣ, ೨೦೪೦ರಲ್ಲಿ ಭಾರತೀಯರನ್ನು ಚಂದ್ರನಲ್ಲಿಗೆ ಕರೆದುಕೊಂಡು ಮರಳಿ ಕರೆತರುವ ಸಾಮರ್ಥ್ಯವನ್ನು ಹೊಂದಲಿದೆ. ಅದಕ್ಕೆ ಬೇಕಾಗಿರುವುದು ಈಗಿನ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿ ಉಳ್ಳವರಾಗಿ ಕಾರ್ಯನಿರ್ವಹಿಸಿದಾಗ ಸಾಧ್ಯವಾಗಲಿದೆ ಎಂದರು. ಇದರ ಜೊತೆಗೆ ‘ಸಾಂದೀಪನಿ ಆಸ್ಟ್ರೋನಮಿ ಕ್ಲಬ್’ ಅನ್ನು ಉದ್ಘಾಟಿಸಿ ಮುಂದಿನ ದಿನಗಳಲ್ಲಿ ಮಕ್ಕಳು ಬಾಹ್ಯಾಕಾಶ ಅಧ್ಯಯನಕ್ಕೆ ಅನುಕೂಲವಾಗಲಿರುವುದರಿಂದ ಮಕ್ಕಳು ಅದನ್ನು ಸರಿಯಾಗಿ ಬಳಸಿಕೊಳ್ಳಲು ತಿಳಿಸಿದರು.
ಈ ಸಮಯದಲ್ಲಿ ಎ.ಎಸ್.ಕುಮಾರಸ್ವಾಮಿ ಅವರು ಶಾಲೆಯ ಅಭಿವೃದ್ಧಿಯ ಜೊತೆಗೆ ಇರುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವರ್ಮ ಅವರು ರಾಜ್ಯಪಠ್ಯಕ್ರಮದಿಂದ ಕೇಂದ್ರದ ಪಠ್ಯಕ್ರಮಕ್ಕೆ ಹೋಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಲ್ಲರನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಂಜುಳಾ ಕೇಳ್ಕರ್ ಸ್ವಾಗತಿಸಿದರು. ಶಿಕ್ಷಕರಾದ ಚೇತನ್ ರಾಯನಹಳ್ಳಿ, ಉಷಾರಾವ್ ನಿರೂಪಿಸಿದರು. ಶಿಕ್ಷಕಿ ಮಾಲಿನಿ ಇವರು ವಂದಿಸಿದರು. ಶಿಕ್ಷಕ ಚನ್ನೇಶ್ ಪ್ರಾಸ್ತವಿಕ ನುಡಿಗಳನ್ನಾಡಿದರು. ವಿಜ್ಞಾನ ಶಿಕ್ಷಕರಾದ ಸುಧೀಂದ್ರ ಮತ್ತು ಪುಷ್ಪಾವತಿ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು.

Leave a Reply

Your email address will not be published. Required fields are marked *

Scan the code