ತೊಪ್ಪನಹಳ್ಳಿ ಗ್ರಾಮದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ
(KOLARA): ಬಂಗಾರಪೇಟೆ: ತೊಪ್ಪನಹಳ್ಳಿ ಗ್ರಾಮದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕ ಸಿ ಎನ್ ಕೀರ್ತಿ ಬ್ಯಾಂಕ್ ಗ್ರಾಹಕರ ಮೇಲೆ ದೌರ್ಜನ್ಯಯುತವಾಗಿ ನಡೆದುಕೊಳ್ಳುತ್ತಿರುವುದನ್ನು ಖಂಡಿಸಿ ರೈತ ಸಂಘದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ರೈತ ಸಂಘದ ಮುಖಂಡರಾದ ತಿಮ್ಮ ರೆಡ್ಡಿ ಮಾತನಾಡಿ, ಇತ್ತೀಚಿಗೆ ಸರ್ಕಾರ ಹಕ್ಕಿಯ ಬದಲು ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬ್ಯಾಂಕಿಗೆ ಜಮಾ ಮಾಡಲಾಗಿದೆ ಈ ಒಂದು ಹಣವನ್ನು ಗ್ರಾಹಕರಿಗೆ ನೀಡದೆ ಬ್ಯಾಂಕಿನ ವ್ಯವಸ್ಥಾಪಕ ಕೀರ್ತಿಯವರು ದೌರ್ಜನ್ಯ ವ್ಯಸಗುತ್ತಿದ್ದಾರೆ ಆರೋಪ ಮಾಡಿದರು.
ಇದನ್ನು ಕೇಳಲು ಬ್ಯಾಂಕ್ ಹತ್ತಿರ ಮುಂದಾದರೂ ಸಹ ಬ್ಯಾಂಕ್ ಮ್ಯಾನೇಜರ್ ಸ್ಪಂದಿಸದೆ ಅಹಂಕಾರಯುತವಾದ ನಡೆಯನ್ನು ತೋರುತ್ತಿದ್ದಾರೆ ಎಂದರು. ರೈತ ಸಂಘ ಹಾಗೂ ನೊಂದ ಗ್ರಾಹಕರಿಂದ ಬ್ಯಾಂಕ್ ಗೆ ಅರ್ಧ ಗಂಟೆಯಲ್ಲಿ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಹಾಗೂ ನೊಂದ ಗ್ರಾಹಕರು ಇದ್ದರು.
ವರದಿ: ವಿಷ್ಣು ಕೋಲಾರ