ದೇವಸ್ಥಾನ, ಮಠ, ಧಾರ್ಮಿಕ ಸಂಸ್ಥೆಗಳ ಬಗ್ಗೆ ಅಪಮಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ.
(SHIVAMOGA): ಸಾಗರ: ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ವತಿಯಿಂದ ನಂಜನಗೂಡು ಶ್ರೀ ಶ್ರೀಕಂಠೇಸ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಸಾಗರದ ಉಪವಿಭಾಗ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಳೆದ ತಿಂಗಳ 26 ರಂದು ಸ್ವಾಮಿ ದೇವಸ್ಥಾನ ದಲ್ಲಿ ಸಂಪ್ರದಾಯದಂತೆ ಜರುಗುತ್ತಿರು ಧಾರ್ಮಿಕ ಕಾರ್ಯ ಕ್ರಮದಲ್ಲಿ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು ಬೇಸರ ಸಂಗತಿಯಾಗಿದೆ..ಅದಲ್ಲದೆ ಶ್ರೀ ಶ್ರೀಕಂಠೇಶ್ವರ ಸ್ವಾಮಿಗೆ ದಿಕ್ಕಾರ ಕೊಗಿದ್ದರು ಕೊಡ ರಕ್ಷಣಾ ಇಲಾಖೆ ಯಾವುದೇ ಕ್ರಮ ವಹಿಸದಿರುವುದು.ಬೇಸರ ಸಂಗತಿ..ಈ ಕೊಡಲೆ ಸರ್ಕಾರ ಅಂತವರ ವಿರುದ್ದು ಕಠಿಣ ಶಿಕ್ಷೆಯನ್ನು ನೀಡಬೇಕು ಅವರನ್ನು ಬಂದಿಸಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸಂದರ್ಭದಲ್ಲಿ ಪ್ರವೀಣ್ ಕುಮಾರ್, ಸುದರ್ಶನ, ಸದಾನಂದ ಶೆಟ್ರು, ಆನಂದ ಬಲ, ನೀಲಕಂಠ ಹಾಗೂ ಸನಾತನ ಹಾಗೂ ಹಿಂದು ಸಂಘಟನೆಯವರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ