ಶಿವಮೊಗ್ಗ ಆರು ವರ್ಷದ ಮಗು ಮೇಲೆ ಹುಚ್ಚು ನಾಯಿ ದಾಳಿ
( ಶಿವಮೊಗ್ಗ – ಸೆ-02 ) ಮಗು ಶಾಲಾ ವಾಹನ ಇಳಿದು ಮನೆಗೆ ಹೋಗುವಾಗ ಆರು ವರ್ಷದ ಬಾಲಕಿ ಮೇಲೆ ದಾಳಿ ನಡೆಸಿದ್ದು. ಮಗುವಿನ ಮೈ ಮೇಲೆ ಹೇರಾಗಿದ ನಾಯಿ ಮುಖಕ್ಕೆ ಕಚ್ಚಿದ್ದು ಮಗುವಿನ ಮುಖ ಗಾಯಗೊಂಡಿದ್ದು. ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದರ ಬೆನ್ನಲ್ಲೇ ಮತ್ತೊಂದು ಮಗುವಿನ ಮೇಲೆ ದಾಳಿಗೆ ಮುಂದಾದಾಗ ಪೋಷಕರು ಮಗುವನ್ನು ರಕ್ಷಿಸಿದ್ದಾರೆ. ಹಾಗೆ ಮೂವರು ವಯಸ್ಕರು ಹಾಗೂ ಹಸುವಿನ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ. ನಾಯಿಗೆ ಹುಚ್ಚು ಹಿಡಿದ್ದಿದು ನಾಯಿಯನ್ನು ಸೆರೆಹಿಡಿದು ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಘಟನೆ ತಾಲೂಕಿನ ಬಿ. ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಪ್ತಿಯ ಹೊಳೆಬೆಳಗಳು ಗ್ರಾಮದಲ್ಲಿ ನಡೆದಿದೆ. ಉಳಿದ ಗಾಯಾಳುಗಳು ಆಸ್ಪತ್ರೆಗೆ ದಾಖಲಿಸಲಾಗಿದೆ.