ರೆಡ್ ರಾಣಿಯ ಬೆಲೆ ಕಡಿಮೆಯಾದ ಬೆನ್ನಲ್ಲೆ.. ಈಗ ಅಳಿಸುವ ರಾಜನ ಸರದಿ.
( ಬೆಂಗಳೂರು- ಸೆ – 01 ) : ಮಳೆ ಸರಿಯಾಗಿ ಆಗದ ಕಾರಣ ರೈತರಿಂದ ಬರುವ ತರಕಾರಿ ಮತ್ತು ಅಡುಗೆ ಸಾಮಾಗ್ರಿಗಳು ಹೆಚ್ಚು ಬೆಲೆ ಏರಿಕೆ ಕಂಡಿದ್ದು. ಮಾರುಕಟ್ಟೆಯಲ್ಲಿ ಈಗ ಈರುಳ್ಳಿಯ ಬೆಲೆ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ ಟೊಮೋಟೊ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರಲ್ಲಿ ಆತಂಕ ಮೂಡಿಸಿ 5 ಕೆಜಿ ಟೊಮೋಟೊ ಕೊಳ್ಳುವಲ್ಲಿ ಒಂದು ಕೆಜಿ ಟೊಮೇಟೊ ಮನೆಗೆ ಕೊಂಡೊಯ್ಯುತ್ತಿದ್ದರು ಆ ಮಟ್ಟಕ್ಕೆ ಟೊಮೋಟೊದ ಬೆಲೆ ಏರಿಕೆ ಆಗಿತ್ತು. ಬೆಲೆ ತಗ್ಗುತ್ತಿದ್ದಂತೆ ಈಗ ಈರುಳ್ಳಿಯ ಬೆಲೆ ಏರಿಕೆ ಕಂಡಿದ್ದು ಇತ್ತೀಚೆಗೆ ಅಡುಗೆ ಸಾಮಾಗ್ರಿಗಳ ಬೆಲೆಗಳು ಏರುತ್ತಿವೆ.. ಏರುತ್ತಲೇಇವೆ…
ಹಾಗೂ ಉತ್ತರ ಭಾರತದಾದ್ಯಂತ ಮಳೆ ಹೆಚ್ಚು ಸುರಿದಿದ್ದು ಅಲ್ಲಿ ಈರುಳ್ಳಿ ಬೆಳೆ ನಾಶವಾಗಿದ್ದು ಮಾರುಕಟ್ಟೆಗೆ ಪೂರೈಕೆಯ ಕೊರತೆ ಇದ್ದು ಈರುಳ್ಳಿಯ ಬೆಲೆ ಏರಿಕೆ ಕಂಡಿದೆ. ಈಗ ಈರುಳ್ಳಿಯ ಬೆಲೆ 50 ಕೆಜಿ ಚೀಲಕ್ಕೆ Rs = 1200 ರಿಂದ Rs =1400 ರೂ ವರೆಗೆ ಇದೆ. ಸಣ್ಣ ಈರುಳ್ಳಿ ಬೆಲೆ ರೂ 900 ರಿಂದ 1100 ರೂ ವರೆಗೆ ಮಾರುಕಟ್ಟೆ ಬೆಲೆ ಇದೆ. ಟೊಮೋಟೊ ಇಳಿಕೆ ಕಂಡು ಜನ ಸಾಮಾನ್ಯರು ಚೇತರಿಕೆ ಕಂಡುಕೊಳ್ಳುವಗ ಈಗ ಈರುಳ್ಳಿಯ ಬೆಲೆ ಧಿಡೀರ್ ಏರಿಕೆ ಕಂಡಿದ್ದು ಜನರಲ್ಲಿ ಗೊಂದಲ ಸೃಷ್ಟಿಸಿದೆ.