ನ್ಯೂಸ್ಬೆಳಗಾವಿ

18ರಂದು ಯೂಥ್ ಫೌಂಡೇಶನ್ ವತಿಯಿಂದ ರಂಗೋಲಿ ಸ್ಪರ್ಧೆ

18ರಂದು ಯೂಥ್ ಫೌಂಡೇಶನ್ ವತಿಯಿಂದ ರಂಗೋಲಿ ಸ್ಪರ್ಧೆ

(BELAGAVI): ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿಯೂ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಶಕ್ತಿ ದೇವತೆ ಶ್ರೀ ಚಂದ್ರಗಿರಿ ದೇವಿ ಜಾತ್ರೆಯು ನಿಮಿತ್ತವಾಗಿ ಗ್ರಾಮದಲ್ಲಿ ದಿನಾಂಕ 18-5-2024 ರಂದು ಟೀಮ್ ಯೂಥ್ ಫೌಂಡೇಶನ್(ರಿ) ಸಂಬರಗಿ ವತಿಯಿಂದ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಗಣಪತಿ ಅವಳೇಕರ ಹಾಗೂ ಉಪಾಧ್ಯಕ್ಷ ರಾಘವೇಂದ್ರ ಫೊಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ಕಳೆದ ಎರಡು ಮೂರು ವರ್ಷಗಳಿಂದ ನಮ್ಮ ಗ್ರಾಮದ ಚಂದ್ರಗಿರಿ ದೇವಿಯ ಜಾತ್ರೆಯ ಸಂದರ್ಭದಲ್ಲಿ ನಮ್ಮ ತಂಡದಿಂದ ಪ್ರಮುಖವಾಗಿ ಗ್ರಾಮೀಣ ಕಲೆಗಳು ನಶಿಸಿಹೋಗಬಾರದು ಹಾಗೂ ಯುವ ಪೀಳಿಗೆಗೆ ಅವುಗಳ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ನಾವು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾವು ಮಹಿಳೆಯರಿಗಾಗಿ ಆಯೋಜಿಸುತ್ತಾ ಬಂದಿರುವ ಈ ರಂಗೋಲಿ ಸ್ಪರ್ಧೆಯಲ್ಲಿ ಕಳೆದ ಬಾರಿ ಆಕರ್ಷಕವಾದ ಬಣ್ಣ ಬಣ್ಣದ ರಂಗೋಲಿ ಚಿತ್ತಾರವನ್ನು ಮೂಡಿಸುವಲ್ಲಿ ಮಹಿಳೆಯರು ತಮ್ಮ ಕಲೆಯನ್ನು ಪ್ರದರ್ಶಿಸಿ ಬಹುಮಾನ ಪಡೆದುಕೊಂಡಿದ್ದರು.
ಅದರಂತೆಯೇ ಈ ಬಾರಿಯು ಎಲ್ಲ ವಯೋಮಾನದವರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಪ್ರವೇಶ ಶುಲ್ಕ ಇರದಿರುವ ಈ ಸ್ಪರ್ಧೆಯಲ್ಲಿ
ಪ್ರಥಮ ಸ್ಥಾನ ಪಡೆದವರಿಗೆ ಪ್ರೊತ್ಸಾಹಧನವಾಗಿ ಬಹುಮಾನದ ರೂಪದಲ್ಲಿ ರೂ.3001,
ದ್ವಿತೀಯ ಬಹುಮಾನವಾಗಿ ರೂ. 2001 ಹಾಗೂ ತೃತೀಯ ಬಹುಮಾನವಾಗಿ 1001 ರೂಪಾಯಿಗಳನ್ನು ವಿತರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಹೊರಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9902547310 / 8105636316 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ವರದಿ: ಪ್ರಹ್ಲಾದ್ ಬೆಳಗಾವಿ

Leave a Reply

Your email address will not be published. Required fields are marked *

Scan the code