ದತ್ತಪೀಠದಲ್ಲಿ ಕುಂಕುಮ ಅಳಿಸಿ ಹಿಂದೂ ಪದ್ಧತಿಗೆ ಅಪಚಾರ : ಆರ್ ಡಿ ಮಹೇಂದ್ರ
(CHIKKAMAGALURU ): ಹಿಂದುಗಳ ಪವಿತ್ರ ಕ್ಷೇತ್ರವಾದ ದತ್ತಪೀಠದಲ್ಲಿ ಶಾಖಾದ್ರಿ ವಂಶಸ್ಥರೆಂದುಕೊಂಡ ಗುಪೊಂದು ದತ್ತ ಪೀಠದಲ್ಲಿ ದಾಂದಲೆ ಮಾಡಿರುವುದು ನಿಜಕ್ಕೂ ಆಕ್ಷಮ್ಯ ಅಪರಾದ. ಕಳೆದ ಎರೆಡು ವರ್ಷದಿಂದ ಯಾವುದೇ ಅಡೆತಡೆಯಿಲದೇ ಕೋರ್ಟ್ ಆದೇಶದಂತೆ ನೆಡೆದುಕೊಂಡು ಬರುತಿದ್ದ ನಿತ್ಯ ಪೂಜಾ ಕಾರ್ಯಗಳಿಗೆ ಮೊನ್ನೆ 19-11-2024 ರಂದು ಶಾಖಾದ್ರಿ ವಂಶಸ್ಥರೆಂದುಕೊಂಡು ಒಂದು ಸಣ್ಣ ಗುಂಪು ಪೋಲಿಸ್ ಬಿಗಿ ಭದ್ರತೆಯಯ ನಡುವೆಯು ದತ್ತಪೀಠದ ಆವರಣದೊಳಗೆ ನುಗ್ಗಿ ಅರ್ಚರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮಕಿ ಹಾಕಿದ್ದು ಕೂಡಲೇ ಜಿಲ್ಲಾಡಳಿತ ಈ ಗುಂಪಿನ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಇನ್ನುಮುಂದೆ ಈ ರೀತಿಯ ವರ್ತನೆಗಳು ದತ್ತಪೀಠದ ಆವರಣದೊಳಗೆ ನೆಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್ ಡಿ ಮಹೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕೊರ್ಟ್ ನ ಆದೇಶದಂತೆ ಹಿಂದೂ ಶೈವ ಪದ್ಧತಿಯಂತೆ ಪಾದುಕೆಗಳನ್ನು ದತ್ತಪೀಠದಲ್ಲಿ ಪ್ರತಿಷ್ಠಾಪಿಸಿ ಹಿಂದೂ ಅರ್ಚಕರ ನೇತೃತ್ವದಲ್ಲಿ ಪುಜಾ ಕೈಂಕರ್ಯಗಳನ್ನು ನೆಡೆಯಬೇಕು ಎಂದು ಆದೇಶಿಸಿದ್ದರೂ ಕೆಲ ಕಿಡಿಗೇಡಿಗಳು ದತ್ತ ಪೀಠದ ಆವರಣದೊಳಗೆ ನುಗ್ಗಿ ಕುಂಕುಮ ಹಚ್ಚಬಾರದು ಅಲಂಕಾರ ಮಾಡಬಾರದು ಎಂದಿದ್ದಲ್ಲದೇ ಮುಜಾವರ್ ಮುಖಾಂತರ ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ಹಚ್ಚಿದಂತ ಹರಿಷಿಣ ಕುಂಕುಮವನ್ನು ಅಳಿಸುತ್ತಿರುವುದು ಎಷ್ಟು ಸರಿ? ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಮುಜಾವರ್ ಕೋರ್ಟ್ ಆದೇಶದ ಪ್ರಕಾರ ಗರ್ಬ್ ಗುಡಿ ಪ್ರವೇಶ ನಿಷೇದವಿದ್ದರು ನಿತ್ಯ ಸಂಜೆ ಮತ್ತು ಬೆಳಿಗ್ಗೆ ಮುಜಾವರ್ ಗರ್ಭಗುಡಿ ಪ್ರವೇಶಿಸಿ ಕುಂಕುಮ ಅಳಿಸಿ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಎಸಗುತಿರುವ ಅಪಚಾರ.
ಶಾಖಾದ್ರಿ ವಂಶಸ್ಥರೆಂದು ಕೊಳ್ಳುವವರಿಗೆ ಪ್ರಶ್ನಿಸಿರುವ ಆರ್ ಡಿ ಮಹೇಂದ್ರರವರು ನಾವು ಸಂವಿದಾನ ಮತ್ತು ಕಾನೂನಿಗೆ ಗೌರವ ಕೊಡುವವರು ಹಾಗಾಗಿ ಹೈಕೊರ್ಟ್ ಆದೇಶದ ಪ್ರಕಾರ ಆಗಮ ಪದ್ಧತಿಯಂತೆ ಹರಿಷಿಣ ಕುಂಕುಮ ಹಾಕಿ ಪ್ರಸಾದ ನೈವ್ಯೇದ್ಯ ಮಾಡುವುದು ನಮ್ಮ ಧರ್ಮ ಮತ್ತು ಹಕ್ಕು. ದತ್ತಪೀಠದಲ್ಲಿ ಇದೆಲ್ಲವನ್ನು ಮಾಡಬಾರದು ಎಂದೇಳಲು ಶಾಖಾದ್ರಿ ವಂಶಸ್ಥನು ಯಾರು? ಅವರ ವಂಶಸ್ಥರ ಮೇಲೆ ಇವರಿಗೆ ನಂಬಿಕೆ ಮತ್ತು ಗೌರವ ಇದ್ದರೆ ದತ್ತ ಪೀಠಕ್ಕೆ ಬಂದು ಪೀಠಕ್ಕೂ ಮತ್ತು ಪಾದುಕೆಗೆ ಪೂಜೆ ಮಾಡುವುದಲ್ಲ ನಿಜವಾದ ಗೋರಿಗಳಿರುವ ನಾಗೇನಹಳ್ಳಿ ಸರ್ವೆ ನಂ 57 ರಲ್ಲಿರುವ ಗೋರಿಗಳ ಮುಂದೆ ಅವರ ಧಾರ್ಮಿಕ ಪದ್ಧತಿಗಳನ್ನು ಮಾಡಲಿ. ಅವರು ಹೇಳಿದಂತೆ ನಾವು ಮುಸ್ಲೀಂ ಧರ್ಮಕೆ ಅಗೌರವವನ್ನು ತೋರುತ್ತಿಲ್ಲ ನಿಮ್ಮ ಪ್ರಕಾರ ಪೂಜೆ ಮಾಡುವುದು ಮತ್ತು ಕುಂಕುಮ ಹಚ್ಚುವುದು ಅಪರಾದವಾದರೇ ದತ್ತ ಪೀಠದ ಆಸ್ಥಿ ಕಬಳಿಕೆಗಾಗಿ ನೀವೆ ಸೃಷ್ಠಿಸಿರುವ ಮಣ್ಣಿನ ರಾಶಿ ಅರ್ಥಾತ್ ಗೋರಿಗಳನ್ನ ನಾಗೇನಹಳ್ಳಿಗೆ ಸ್ಥಳಾಂತರಿಸಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ನೆಲದ ಕಾನೂನೇ ಅವುಗಳನ್ನು ದತ್ತಪೀಠದಿಂದ ಸ್ಥಳಾಂತರಿಸುತ್ತದೆ.
ಈ ಹಿಂದೆ ನಿಮ್ಮ ಗುಂಪು ದತ್ತಪೀಠದ ಆವರಣದಲಿರುವ ಅತ್ತಿಮರ ಅಂದರೆ ಸಂಸ್ಕೃತದಲ್ಲಿ ಕರೆಯಲ್ಪಡುವ ಔದುಂಭರ ಮರದ ಬುಡದಲ್ಲಿ ನಮ್ಮ ತಾತನ ಗೋರಿ ಇದೆ ಎಂದು ಗೊಂದಲ ಸೃಷ್ಟಿಸಿದ್ದು ಇದೇ ಗುಂಪು ಈ ಗುಂಪಿಗೆ ನಮ್ಮದೊಂದು ಪ್ರಶ್ನೆ ಇದೆ. ಗೋರಿಗಳ ಮೇಲೆ ಮರ ಅಥವ ಗಿಡ ನೆಡುವ ಪದ್ಧತಿ ಇರುವುದು ಹಿಂದುಗಳಲ್ಲಿ ಮಾತ್ರ ಹಾಗಾದರೆ ನಿಮ್ಮ ತಾತನ ಗೋರಿಯ ಮೇಲೆ ಮರ ನೆಟ್ಟವರು ಯಾರು? ಅದು ನಿಮ್ಮ ಧರ್ಮಕ್ಕೆ ವಿರುದ್ದವಾದುದಲ್ಲವೇ ? ಕೇವಲ ಒಂದೇ ಗೋರಿಗೆ ಮರನೆಟ್ಟು ಉಳಿದ ಗೋರಿಗಳಿಗೆ ಮರವನ್ನು ಯಾಕೆ ನೆಡಲಿಲ್ಲ ? ನೀವು ಹೇಳುತ್ತಿರುವ ಅತ್ತಿಮರಕ್ಕೆ ನಾವು ಔದುಂಭರ ವೃಕ್ಷವೆಂದು ಕರೆದು ಪೂಜಿಸುತ್ತೇವೆ. ಈ ರೀತಿ ಔದುಂಭರ ವೃಕ್ಷ ಹೆಚ್ಚಿನ ಎಲ್ಲಾ ಹಿಂದೂ ದೇವಸ್ಥಾನ, ಪೀಠಗಳಲ್ಲಿ ಇದೆ ಅದೇ ರೀತಿ ದತ್ತ ಪೀಠದಲ್ಲಿಯೂ ನೂರಾರು ವರ್ಶಗಳಿಂದ ಇದೆ. ದತ್ತ ಪೀಠ ಹಿಂದುಗಳದ್ದೇ ಎನ್ನುವುದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಅಲ್ಲಿರುವ ವಾಸ್ತುಶಿಲ್ಪವೇ ಸಾರುತ್ತಿರುವಾಗ ಇಂತಹ ಪವಿತ್ರ ಕ್ಷೇತ್ರದ ಇತಿಹಾಸವೆಲ್ಲಿ ನೀವು ಸೃಷ್ಟಿಸಿರುವ ಗೋರಿಗಳ ಕತೆ ಎಲ್ಲಿ ? ನಿಮ್ಮ ಇತಿಹಾಸ ತೆಗೆದರೆ ಎಲ್ಲವೂ ಹೊರಬರುತ್ತದೆ. ಇದರಿಂದ ಸ್ಪಷ್ಟವಾಗುವುದು ಒಂದೇ ದತ್ತ ಪೀಠದ ಭೂಕಬಳಿಕೆ ಹಾಗೂ ದತ್ತ ಪೀಠದ ಆದಾಯಕ್ಕೆ ಕಣ್ಣಾಕಿ ಅನಗತ್ಯ ವಿವಾದ ಸೃಷ್ಠಿಸಿ ಹೊಟ್ಟೆಪಾಡಿಗಾಗಿ ವಿಚಾರವನ್ನು ಜೀವಂತವಾಗಿರಿಸಿ ಕೊಳ್ಳುವ ಹುನ್ನಾರ ಎಂದು ಆರ್ ಡಿ ಮಹೇಂದ್ರ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೇ ಇದೇ ಬರುವ ಡಿಸೆಂಬರ್ ನಲ್ಲಿ ಪ್ರತಿವರ್ಶದಂತೆ ನೆಡೆಯಲಿರುವ ದತ್ತಮಾಲಾ ಮತ್ತು ದತ್ತ ಜಯಂತಿಗೆ ಇಡೀ ರಾಜ್ಯವೇ ತಯಾರಿಯಲ್ಲಿದ್ದು ಈ ಸಮಯದಲ್ಲಿ ಹಿಂದೂ ಸಮಾಜದಲ್ಲಿ ಮತ್ತು ಕಾನೂನು ಸುವ್ಯವಸ್ಥೆಗೆ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಆಗಾಗ ಮಳೆಗಾಲದ ಅಣಬೆಯಂತೆ ಪ್ರತ್ಯಕ್ಷವಾಗುತ್ತಿರುವ ಈ ಕಿಡಿಗೇಡಿಗಳ ಗುಂಪುಗಳ ಬಗ್ಗೆ ಪೋಲಿಸ್ ವರಿಷ್ಠಾದಿಕಾರಿಗಳು ಸೂಕ್ಷ್ಮವಾಗಿದೆ. ಗಮನಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಕಾರಣ ಕೆಲವು ವರ್ಶಗಳ ಹಿಂದೆಯೂ ಕೂಡಾ ದತ್ತ ಜಯಂತಿ ಸಮಯದಲ್ಲಿ ಅನೇಕ ಗೊಂದಲಗಳನ್ನು ಇಂತಹ ಗುಂಪುಗಳು ಗೊಂದಲ ಸೃಷ್ಠಿಸಿದ ಉದಾರಣೆಗಳಿದ್ದು ಪೋಲಿಸ್ ಇಲಾಖೆ ಕಾನೂನಿನ ಬಿಸಿಯನ್ನು ಇಂತಹ ಗುಂಪುಗಳಿಗೆ ತೋರಿಸಿ ಯಶಸ್ವಿ ದತ್ತಜಯಂತಿಗೆ ಸಹಕಾರ ನೀಡಬೇಕೆಂದು ಆರ್ ಡಿ ಮಹೇಂದ್ರ ಜಿಲ್ಲಡಳಿತವನ್ನು ಆಗ್ರಹಿಸಿದ್ದಾರೆ.