ಗ್ರಾಮದಲ್ಲಿ ಭಾರತ ರತ್ನ ಡಾ: ಬಿ ಆರ್ ಅಂಬೇಡ್ಕರ್ ಪುತ್ತಳಿ ಸ್ಥಾಪಿಸಲು ಅನುಮತಿ ಕೋರಿ ಮನವಿ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು, ಮೇಗುಂದ ಹೋಬಳಿ, ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಪ್ಪೂರು ಗ್ರಾಮದಲ್ಲಿ ಭಾರತ ರತ್ನ ಡಾ: ಬಿ ಆರ್ ಅಂಬೇಡ್ಕರ್ ಪುತ್ತಳಿ ಸ್ಥಾಪಿಸಲು ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು, ಮೇಗುಂದ ಹೋಬಳಿ, ಹಿರೇಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಪ್ಪೂರು ಗ್ರಾಮದ ಸದಸ್ಯರು ಸೇರಿ ನಮ್ಮ ಊರಿನ ಸರ್ಕಾರಿ ಜಾಗದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ: ಬಿ ಆರ್ ಅಂಬೇಡ್ಕರ್ ಪುತ್ತಳಿಯನ್ನು ನಿರ್ಮಿಸಲು ಉದ್ದೇಶಿಸಿರುತ್ತೇವೆ. ನಾವೆಲ್ಲರೂ ಪರಿಶಿಷ್ಟ ಜಾತಿಯವರಾಗಿದ್ದು, ನಾವು ವಾಸಿಸುವ ಸ್ಥಳದಲ್ಲಿ ಅಂಬೇಡ್ಕರ್ ಪುತ್ತಳಿಯನ್ನು ನಿರ್ಮಿಸಲು ನಮಗೆ ಅನುಮತಿ ನೀಡುವಂತೆ ಹಿರೇಗದ್ದೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಅವರು ಅನುಮತಿ ನೀಡಲು ನಿರಾಕರಿಸುತ್ತಿರುವುದರಿಂದ ತಾವು ದಯಮಾಡಿ ನಾವು ವಾಸಿಸುತ್ತಿರುವ ಪ್ರದೇಶದ ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಿಸಲು ನಮಗೆ ಅನುಮತಿ ನೀಡುವಂತೆ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಅಂಬೇಡ್ಕರ್ ಪುತ್ತಳಿ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಸಿಗುವವರೆಗೂ ನಾವು ಹಿರೇಗದ್ದೆ ಗ್ರಾಮ ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಗ್ರಾಮಸ್ಥರು ಹಾಗೂ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸದಸ್ಯರು ಮನವಿ ಪತ್ರ ಸಲ್ಲಿಸಿದರು.