ಹೊಸವರ್ಷಾಚಾರಣೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿರ್ಬಂಧ
(KOLARA): ಕೋಲಾರ :2024 ನೇ ಹೊಸ ವರ್ಷದ ಆಚರಣೆ ಸಂಬಂಧ ಪ್ರವಾಸಿಗರು ಕೋಲಾರ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಬೆಟ್ಟದ ಪ್ರದೇಶಗಳಿಗೆ ತೆರಳಿ ಹೊಸವರ್ಷದ ಸಂಭ್ರಮಾಚರಣೆ ಮಾಡುವುದು ರೂಡಿಯಲ್ಲಿರುತ್ತದೆ. ಆದರೆ ಈ ರೀತಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಹುದಾದ ಸಾಧ್ಯತೆಗಳು ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಅಕ್ರಂ ಪಾಷ ರವರು ಡಿಸೆಂಬರ್ 31ರ ಸಂಜೆ 6-00 ಗಂಟೆಯಿಂದ ಮರುದಿನ ದಿನಾಂಕ ಜನವರಿ 01 ರ ಬೆಳಿಗ್ಗೆ 8-00 ಗಂಟೆಯವರೆಗೆ ತೇರಹಳ್ಳಿ ಬೆಟ್ಟ, ಗ್ರಾಮಾಂತರ ವ್ಯಾಪ್ತಿ),ಅಂತರಗಂಗೆ ಹಾಗೂ ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟ ( ಕೋಲಾರ), ಆವಣಿ ಬೆಟ್ಟ (ಮುಳಬಾಗಲು ಗ್ರಾಮಾಂತರ ಠಾಣಾ ವ್ಯಾಪ್ತಿ), ಅಂಜನಾದ್ರಿ ಬೆಟ್ಟ (ಮುಳಬಾಗಲು ನಗರ ಠಾಣೆ ವ್ಯಾಪ್ತಿ),
ಸೂರ್ಯ ಮಲ್ಲೇಶ್ವರಬೆಟ್ಟ ಹಾಗೂ ಸೀತಿ ಬೆಟ್ಟ. (ವೇಮಗಲ್ ಠಾಣಾ ವ್ಯಾಪ್ತಿ) ಸ್ಥಳಗಳಲ್ಲಿ ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರನ್ನು ನಿರ್ಭಂಧಿಸಿ ಆದೇಶ ಹೊರಡಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ: ವಿಷ್ಣು ಕೋಲಾರ