ಜಿಲ್ಲೆನ್ಯೂಸ್

ವಿವಿಧ ಬಗೆಯ ತರಕಾರಿ ತಿನಿಸು ಪಾನೀಯ ವಸ್ತುಗಳ ಮಾರಾಟ

ವಿವಿಧ ಬಗೆಯ ತರಕಾರಿ ತಿನಿಸು ಪಾನೀಯ ವಸ್ತುಗಳ ಮಾರಾಟ


(SHIVAMOGA): ಸಾಗರ-ಚಿಪ್ಪಳೆ ಲಿಂಗದಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ ಮಕ್ಕಳೇ ವ್ಯವಹರಿಸುತ್ತಿರುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಪ್ಪಳಿ ಲಿಂಗದಳ್ಳಿಯಲ್ಲಿ ಇಂದು ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು ಈ ದಿನ ಶಾಲೆಯ ಮಕ್ಕಳು ವಿವಿಧ ವಸ್ತುಗಳ ಅಂಗಡಿಗಳನ್ನು ತೆರೆಯುವ ಮೂಲಕ ತಾವೇ ಮಾರಾಟ ಮಾಡುವ ಒಂದು ವಿಶೇಷವಾದ ಆಕರ್ಷಕವಾದ ಸಂತೆಯನ್ನು ಆಯೋಜಿಸಲಾಗಿತ್ತು ಆಹಾರ ತಿನಿಸುಗಳು, ಪಾನೀಯಗಳು, ಮಜ್ಜಿಗೆ, ಕಬ್ಬಿನ ಹಾಲು, ಮಂಡಕ್ಕಿ ಇನ್ನು ಅನೇಕ ರೀತಿಯ ಅದರಲ್ಲೂ ವಿಶೇಷವಾಗಿ ತರಕಾರಿ ಮಾರಾಟವು ಸಹ ಈ ಸಂತೆಯಲ್ಲಿ ನಡೆಯುತ್ತಿತ್ತು ಸಾಕಷ್ಟು ಜನ ಗ್ರಾಮಸ್ಥರು ಸಾರ್ವಜನಿಕರು ಜೋರಾಗಿ ಖರೀದಿಯನ್ನು ಮಾಡಿ ತಾವು ಸಂಭ್ರಮಿಸಿದರು ಮಕ್ಕಳ ವ್ಯಾಪಾರದ ಸನ್ನಿವೇಶ ವಿಶೇಷವಾಗಿ ಕಂಡುಬಂದಿತ್ತು ವಸ್ತುಗಳ ಹೆಸರನ್ನು ಹೇಳುವ ಮೂಲಕ ಅದರ ಬೆಲೆ ತೂಕ ಅದರ ಮಹತ್ವವನ್ನು ಹೇಳಿ ಜನರನ್ನು ಆಕರ್ಷಿಸುತ್ತಿದ್ದರು.

ಸಾರ್ವಜನಿಕರ ಸಹ ಭಾಗವಹಿಸಿ ತರಕಾರಿ ಮೊದಲಾದ ವಸ್ತುಗಳನ್ನು ಖರೀದಿಸುವ ಕಾರ್ಯ ನಡೆದಿದ್ದು ವಿಶೇಷವಾಗಿತ್ತು ಶೈಕ್ಷಣಿಕ ಚಟುವಟಿಕೆಗೆ ಅತ್ಯಂತ ಪೂರಕವಾಗಿದೆ ಎನ್ನುವುದು ವಿಶೇಷವಾಗಿದೆ ಈ ಶಾಲೆಯಲ್ಲಿ ವಿಶೇಷವಾಗಿ ಸಮಿತಿಯವರು ಶಿಕ್ಷಕರು ಮಕ್ಕಳು ತಮ್ಮ ಸ್ವಯಂ ಪ್ರೇರಣೆಯಿಂದ ಮಕ್ಕಳ ಸಂತೆ ಯಶಸ್ಸು ಕಂಡು ಬಂದಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ ಮಾತನಾಡಿ ಇಂತಹ ಚಟುವಟಿಕೆಗಳಿಂದ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚುತ್ತದೆ ಹಾಗೂ ವ್ಯವಹಾರ ಜ್ಞಾನ ಹೆಚ್ಚಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕಲ್ಮನೆ ಗ್ರಾ.ಪಂ ಅಧ್ಯಕ್ಷರಾದ ಸುರೇಶ್, ಸದಸ್ಯರಾದ ಸುರೇಶ್ ಗೌಡ್ರು,ಮಾಜಿ ಅಧ್ಯಕ್ಷರಾದ ಅಕ್ಷರ, ಶಿಕ್ಷಣ ಸಂಯೋಜಕರಾದ ವಿ.ಟಿ.ಸ್ವಾಮಿ,ಸಮಿತಿಯ ನೇತ್ರಾವತಿ,ಪ್ರಮೀಳಾ,ಮಮತಾ,ಗಜಾನನ, ಮೀನಾಕ್ಷಿ, ಮಹೇಶ್, ರೇಣುಕಾ,ಚಂದ್ರು,ಆನಂದ,ಕುಮಾರ್,ಕಬೀರ್, ರೇಣುಕಾ,ಸಿ.ಆರ್.ಪಿ, ನಾಗರಾಜ್, ಜಾವೀದ್, ಶಿಕ್ಷಕರಾದ ಸವಿತಾ, ಸಂಧ್ಯಾರಾಣಿ,ಮಮತಾ, ಸುರೇಶ್ ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code