01-10-2023 ನಾಳೆ ಸಂತೆ ರದ್ದು – ಮದ್ಯ ಬಂದ್: ಶ್ರೀ ವಿದ್ಯಾ ಗಣಪತಿ ಮೂರ್ತಿ ವಿಸರ್ಜನೆ.
(Chikkamagaluru): ಬಾಳೆಹೊನ್ನೂರು 65ನೇ ವರ್ಷದ ಶ್ರೀ ವಿದ್ಯಾ ಗಣಪತಿ ಮೂರ್ತಿ ವಿಸರ್ಜನೆ. ಅದರಿಂದ ಸಂತೆ ಒಂದು ದಿನ ರದ್ದು ಹಾಗೂ ಎರೆಡು ದಿನಗಳ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಮದ್ಯ ಮಾರಾಟ ನಿಷೇಧ, ಸಂತೆ ರದ್ದು
ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿರುವ ಗಣೇಶ ವಿಗ್ರಹವನ್ನು01-10-2023 ಭಾನುವಾರ ಮೆರವಣಿಗೆ ಮೂಲಕ ವಿಸರ್ಜಿಸುವ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.01-10-2023ರಂದು ಬೆಳಗ್ಗೆ 6ರಿಂದ 02-10-2023ರ ಬೆಳಗ್ಗೆ 6ರವರೆಗೆ ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಮೂನೆಯ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಮದ್ಯ, ಬಿಯರ್ ಅಬಕಾರಿ ಪದಾರ್ಥಗಳ ಸಾಗಣಿ, ಸಂಗ್ರಹ, ತಯಾರಿಕೆ ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ. ಭಾನುವಾರ ಗಣೇಶ ವಿಸರ್ಜನೆ ಅಂಗವಾಗಿ ಹೆಚ್ಚು ಜನ ಸೇರುವ ಉದ್ದೇಶ ಹಾಗೂ ವಾಹನ ದಟ್ಟಣೆ ಹೆಚ್ಚಾಗುವ ಹಿನ್ನಲೆಯಲ್ಲಿ ವಾರದ ಸಂತೆ ರದ್ದು ಮಾಡಲಾಗಿದೆ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ಆಚಾರ್ಯ ತಿಳಿಸಿದ್ದಾರೆ.
ಈ ಮೂಲಕ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರಿಗೆ ಸೂಚಿಸುವುದೇನೆಂದರೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು ರವರ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶನ ವಿಸರ್ಜನಾ ಕಾರ್ಯಕ್ರಮವನ್ನು ದಿನಾಂಕ:-01-10-2023 ರಂದು ನಡೆಸಲಿರುತ್ತಾರೆ. ಈ ದಿನದಂದು ವಿಸರ್ಜನಾ ಕಾರ್ಯಕ್ರಮಕ್ಕೆ ಸುಮಾರು 10 ರಿಂದ 15 ಸಾವಿರ ಜನ ಭಕ್ತಾದಿಗಳು ಸೇರುವ ಸಾಧ್ಯತೆ ಇರುತ್ತದೆ.
ಆದ್ದರಿಂದ ದಿನಾಂಕ:-01-10-2023 ರಂದು ಬೆಳಗ್ಗೆ 06.00 ಗಂಟೆಯಿಂದ ಗಣಪತಿ ವಿರ್ಜನೆಯಾಗುವವರೆಗೆ ಬಾಳೆಹೊನ್ನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಿಂದ ಪ್ರಕಾಶ್ ವೃತ್ತದ ವರೆಗೆ ಯಾವುದೇ ತರಹದ ವಾಹನಗಳನ್ನು ನಿಲುಗಡೆ ಮಾಡಬಾರದಾಗಿ ಕೋರಿದೆ. ಕಳಸ ರಸ್ತೆ ಕಡೆಯಿಂದ ಬರುವವರು ಹೊಳೆಬಾಗಿಲಿನಿಂದ ಮಾಗುಂಡಿ ಕಡೆಗೆ, ಕೊಪ್ಪ ಕಡೆಯಿಂದ ಬರುವವರು ಶ್ರೀ ರಂಭಾಪುರಿ ಪೆಟ್ರೋಲ್ ಬಂಕ್ ನಿಂದ ಜಯಪುರ ರಸ್ತೆ ಕಡೆಗೆ ಚಿಕ್ಕಮಗಳೂರು ರಸ್ತೆ ಕಡೆಯಿಂದ ಬರುವವರು ಭದ್ರಾ ಕಾಫಿಶಾಫ್ ನಿಂದ ಕಡಬಗೆರೆ ಕಡೆಗೆ, ನ.ರಾ.ಪುರ ರಸ್ತೆಯ ಕಡೆಯಿಂದ ಬರುವವರು ಹೆಚ್ ಪಿ ಪೆಟ್ರೋಲ್ ಬಂಕ್ ನಿಂದ ನ.ರಾ.ಪುರ ರಸ್ತೆಯ ಕಡೆಗೆ ಹಾಗೂ ರಂಭಾಪುರಿ ಮಠದ ಕಡೆಗೆ ವಾಹನಗಳನ್ನು ನಿಲ್ಲಿಸಬಹುದಾಗಿದ್ದು ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲ್ಲಿಸಲು ಹಾಗೂ ಪೊಲೀಸ್ ರವರೊಂದಿಗೆ ಸಹಕಾರ ನೀಡಲು ಕೋರಿದೆ. ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ, ಮತ್ತು ದಿನಾಂಕ:-01-10-2023 ರಂದು ಭಾನುವಾರದ ಸಂತೆ ಇರುವುದಿಲ್ಲ.