ಪಟ್ಟಣದಲ್ಲಿ ತಾಲೂಕು ಸವಿತಾ ಸಂಘದಿಂದ ಸವಿತಾ ಮಹರ್ಷಿ ಜಯಂತೋತ್ಸವ
(KOLARA): ಬಂಗಾರಪೇಟೆ :ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ, ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಶೈಕ್ಷಣಿಕವಾಗಿ ಅಭಿವೃದ್ದಿಹೊಂದಿದೆರೆ ಮಾತ್ರ ಸಮುದಾಯ ವ್ಯಕ್ತಿಗಳು ಮುಖ್ಯವಾಹಿನಿಗೆ ಬರಲು ಸಾದ್ಯ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಸವಿತಾ ಸಮಾಜ ಸಂಘದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಶ್ರೀ ಸದ್ಗುರು ತ್ಯಾಗರಾಜರು ಮತ್ತು ಪುರಂದದಾಸರ ಆರಾಧನೆ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಸವಿತಾ ಮಹರ್ಷಿ,ಶ್ರೀ ಸದ್ಗುರು ತ್ಯಾಗರಾಜರು ಹಾಗೂ ಪುರಂದ ದಸರಾ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ ಮಾತನಾಡುತ್ತಾ,ಪೌರಾಣಿಕ ವ್ಯಕ್ತಿಯಾದ ಸವಿತಾ ಮಹಿರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು, ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ, ಬಲಗಣ್ಣನ್ನು ಸೂರ್ಯನಿಗೆ ಹೊಲಿಸಲಾಗುತ್ತದೆ, ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ತಿಳಿಸಿದ ಅವರು ಸವಿತಾ ಸಮಾಜದವರನ್ನು ಸೂರ್ಯವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು, ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮದೇವ ಕೃತಿ ರಚಿಸಿದ್ದಾರೆ, ಇವರ ಮಗಳಾದ ಗಾಯತ್ರಿದೇವಿಯ ಶ್ರೇಷ್ಠಮಂತ್ರವಾದ ಗಾಯಿತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸವಿತಾ ಸಮಾಜ ಸಂಘದ ರಾಜ್ಯ ನಿರ್ದೇಶಕರಾದ ಆನಂದ್,ತಾಲೂಕು ಅಧ್ಯಕ್ಷರಾದ ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ಮುನಿರಾಜು, ಸವಿತಾ ಸಮಾಜದ ಮುಖಂಡರಾದ ನಾಗರಾಜ್, ಕೇಶವಪ್ಪ, ವೆಂಕಟೇಶಪ್ಪ,ರಾಮಪ್ಪ, ಶಿವಕುಮಾರ್,ಪ್ರಭಾಕರ್, ಮಂಜುನಾಥ್, ತಿರುಮಲ ಕುಮಾರ್ ಹಾಗೂ ಮೊದಲಾದವರು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ