ಕಾಡಾನೆ ದಾಳಿಗೆ ಮೃತಪಟ್ಟ ರೈತ : ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ
(KOLARA): ಕಾಮಸಮುದ್ರ: ಕಾಡಾನೆ ದಾಳಿಗೆ ಮೃತಪಟ್ಟ ಪೋಲೇನಹಳ್ಳಿ ರೈತ ನಾರಾಯಣಪ್ಪ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರದ ಜೊತೆಗೆ ಕುಟುಂಬ ಸದಸ್ಯರಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ನೀಡುವಂತೆ ರೈತ ಸಂಘ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಹೋರಾಟಕ್ಕೆ ತಾತ್ಕಾಲಿಕ ಜಯವಾಗಿದ್ದರು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಅರಣ್ಯ ಅಧಿಕಾರಿಗಳನ್ನು ರೈತ ಸಂಘದ ತಾಲ್ಲೂಕಾದ್ಯಕ್ಷ ಕದರಿನತ್ತ ಶ್ರೀರಾಮಪ್ಪ, ಅಪ್ಪೋಜಿರಾವ್ ಒತ್ತಾಯಿಸಿದರು.
ಬೆಳಗಿನ ಜಾವ ಬಂಗಾರಪೇಟೆ ವೀಳದೆಳೆ ಮಾರಾಟ ಮಾಡಲು ಕಾಳಿಕಾಂಬ ದೇವಸ್ಥಾನ ಹತ್ತಿರ ಬರುವ ಬಸ್‌ಗೆ ಬರುತ್ತಿದ್ದ ರೈತನ ಮೇಲೆ ಏಕಾಏಕಿ ಒಚಿಟಿ ಕಾಡಾನೆ ದಾಳಿ ಮಾಡಿ ಕಾಲಿನಿಂದ ತುಳಿದು ಸ್ಥಳದಲ್ಲಿಯೇ ಮೃತಪಟ್ಟ ರೈತನ ಸುದ್ದಿ ತಿಳಿದಂತೆ ಸುತ್ತಮುತ್ತಲ ನೂರಾರು ರೈತರು ಅರಣ್ಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇನ್ನೆಷ್ಟು ಬಡ ರೈತರ ಬಲಿ ಕಾಡಾನೆಗಳ ಹಾವಳಿಗೆ ಬೇಕು ಎಂದು ಕಣ್ಣೀರಿನಿಂದ ತಮ್ಮ ನೋವನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಸಚಿವರು ರಾಜಕೀಯ ವ್ಯಕ್ತಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಒಂದು ಕಡೆ ರೋಗದಿಂದ ನಾಶವಾದರೆ ಉಳಿದ ಬೆಳೆಯನ್ನು ಕಾಡಾನೆಗಳು ನಾಶ ಮಾಡುತ್ತಿವೆ ನಾಲ್ಕು ದಶಕಗಳಿಂದ ಹತ್ತಾರು ಸರ್ಕಾರ ಸಚಿವರು ಜಿಲ್ಲಾಧಿಕಾರಿಗಳು ಅರಣ್ಯಾಧಿಕಾರಿಗಳು ಬದಲಾವಣೆ ಆಗಿದ್ದಾರೆಯೇ ಹೊರತು ಕಾಡಾನೆಗಳ ಹಾವಳಿಗೆ ರೈತರ ಸಾವು ತಪ್ಪಿಸಿ ಬೆಳೆ ರಕ್ಷಣೆ ಮಾಡುವಲ್ಲಿ ಹಾಗೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಪಲವಾಗಿದ್ದಾರೆಂದು ಗಡಿಭಾಗವನ್ನು ಕಡೆಗಣಿಸುತ್ತಿರುವ ಜಿಲ್ಲಾಡಳಿತದ ವಿರುದ್ದ ಕಿಡಿ ಕಾರಿದರು.
ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಕಾಡಾನೆ ಹಾವಳಿಯಿಂದ ಮೃತಪಟ್ಟಿರುವ ರೈತರ ಕುಟುಂಬದ ಸದಸ್ಯರ ಕಣ್ಣೀರಿಗೆ ಜಿಲ್ಲಾಧಿಕಾರಿಗಳು ತಾಲ್ಲೂಕು ದಂಡಾಧಿಕಾರಿಗಳು ಸ್ಥಳಿಯ ಶಾಸಕರು ಸ್ಪಂದಿಸುವಲ್ಲಿ ವಿಪಲವಾಗಿದ್ದಾರೆ ಘಟನೆ ನಡೆದ ಸ್ಥಳಕ್ಕೆ ಬರುವಂತೆ ಕರೆ ಮಾಡಿದರೆ ಚುನಾವಣೆ ನೆಪದಲ್ಲಿ ರೈತರ ಸಮಸ್ಯೆಯನ್ನು ಸ್ಪಂದಿಸದೆ ಇರುವ ಜಿಲ್ಲಾಡಳಿತಕ್ಕೆ ಈ ಸನ್ನಿವೇಶದಲ್ಲಿ ಅದಿಕಾರಿಗಳಿಗೆ ತೊಂದರೆ ಆಗಿದ್ದರೆ ಇದೇ ರೀತಿ ವರ್ತನೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಪಡಿಸಿರುವ ಸೋಲಾರ್ ಸಂಪೂರ್ಣ ಕಳಪೆಯಾಗಿದ್ದು, ಬ್ಯಾಟರಿ ಇದ್ದರೆ ಕಂಬವಿಲ್ಲ, ಕಂಬವಿದ್ದರೆ ತಂತಿ ಇಲ್ಲದ ಅತಂತ್ರ ಪರಿಸ್ಥಿತಿಯಲ್ಲಿ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತೆ ಸೋಲಾರ್ ವ್ಯವಸ್ಥೇ ಇದೆ ಎಂದು ವ್ಯಂಗವಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರು ಜಯಣ್ಣ ಮಾತನಾಡಿ ಗಡಿಭಾಗವನ್ನು ತಾಲ್ಳೂಕಾಡಳಿತ ಸಂಪೂರ್ಣವಾಗಿ ನಿರ್ಲಕ್ಷೆ ಮಾಡುತ್ತಿದೆ. ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಇದರ ಮದ್ಯೆ ಬೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿಯಿಂದ ರಾತ್ರಿ ವೇಳೆ ರೈತರು ಬೆಳಿಗ್ಗೆ ನೀರು ಹಾಯಿಸಲು ಕೊಳವೆ ಬಾವಿಗಳ ಹತ್ತಿರ ಕಾಡಾನೆಗಳ ಜೊತೆ ಜೀವನ ಮಾಡಿ ಕಡೆಗೆ ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಸಮಸ್ಯೆ ಬಗ್ಗೆ ತಮ್ಮ ನೋವನ್ನು ತೋಡಿಕೊಂಡರು.
ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ಹಾಗೂ ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಲಕ್ಷ್ಮಿ ರವರು ಘಟನೆ ನಡೆದ ಸ್ಥಳಕ್ಕೆ ಬಂದು ನೊಂದ ರೈತ ಕುಟುಂಬಕ್ಕೆ ಸಾಂತ್ವನ ಹೇಳಿ 15 ಲಕ್ಷ ಪರಿಹಾರ , ಮೃತರ ಹೆಂಡತಿಗೆ 4 ಸಾವಿರ ಪಿಂಚಣಿ, ಮೃತರ ಕುಟುಂಬದವರಿಗೆ ಗುತ್ತಿಗೆ ಆದಾರದ ಮೇಲೆ ನೌಕರಿ ನೀಡುವ ಜೊತೆಗೆ ಗಡಿಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಜೊತೆಗೆ ಸಿಬ್ಬಂದಿ ಕೊರತೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಕಾಡಾನೆಗಳ ಹಾವಳಿ ಆನೆ ಕಾರಿಡಾರ್ ಆಳವಡಿಸಲು ಸರ್ಕಾರಕ್ಕೆ ಸಲ್ಲಿಸುವ ಜೊತೆಗೆ ಹದಗೆಟ್ಟಿರುವ ಸೋಲಾರ್ ಅವ್ಯವಸ್ಥೆಯನ್ನು ಸರಿಪಡಿಸುವ ಭರವಸೆಯನ್ನು ನೀಡಿದರು.
ಕಾಮಸಮುದ್ರ ಹೋಬಳಿ ವೃತ್ತ ನೀರೀಕ್ಷಕರಾದ ಕೃಷ್ಣ ರವರು ಯಾವುದೇ ಆಹಿತಕರ ಘಟನೆ ನಡೆಯದಂತೆ ಪೋಲಿಸ್ ಭದ್ರತೆ ಕಲ್ಪಿಸಿ ರೈತರ ಜೊತೆ ಸೌಜನ್ಯದಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಮನವರಿಕೆ ನೊಂದ ರೈತರ ಪರ ಪೋಲಿಸ್ ಇಲಾಖೆ ಇದೆ ಎಂದು ಮಾನವೀಯತೆ ತೋರಿದರು.
ಘಟನಾ ಸ್ಥಳದಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಪ್ರಭಾಕರ್ ರೆಡ್ಡಿ, ಲಕ್ಷ್ಮಿ ನಾರಾಯಣ, ಪತ್ರಕರ್ತ ಶ್ರೀರಾಮ್, ಗುಳ್ಳಹಟ್ಟಿ ಲಕ್ಷಣ್, ಸುರೇಶ್, ನಾಗರಾಜ್, ಬಸಪ್ಪ, ರಾಜಣ್ಣ, ತಿಮ್ಮಾರೆಡ್ಡಿ, ಸುತ್ತಮುತ್ತಲ ಗ್ರಾಮಗಳ ನೂರಾರು ನೊಂದ ರೈತರು ಹಾಜರಿದ್ದರು.
ವರದಿ: ವಿಷ್ಣು ಕೋಲಾರ